EPFO Higher Pension: EPFO ದಿಂದ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆಗೆ ಗಡುವು ವಿಸ್ತರಣೆ !

Latest news pension news Extension of deadline for submission of higher pension application from EPFO

EPFO Higher Pension: ನವದೆಹಲಿ: ಉದ್ಯೋಗಿಗಳ ಪಿಂಚಣಿ ಯೋಜನೆ (ಇಪಿಎಸ್ ) ಅಡಿಯಲ್ಲಿ ನಿಗದಿಗಿಂತ ಹೆಚ್ಚಿನ(EPFO Higher Pension)  ಮೊತ್ತದ ಪಿಂಚಣಿಗೆ ಅರ್ಜಿ ಸಲ್ಲಿಸಲು ನೀಡಿದ್ದ ಗಡುವನ್ನು ಇಪಿಎಫ್ ಒ( EPFO) ಮತ್ತೊಮ್ಮೆ ವಿಸ್ತರಣೆ ಮಾಡಿದೆ. ಈ ಗಡುವು ಅಧಿಕ ಪಿಂಚಣಿಗೆ ಅರ್ಜಿ ಸಲ್ಲಿಸುವ ಉದ್ಯೋಗಿಗಳಿಗೆ ಮಾತ್ರ ಅನ್ವಯವಾಗಲಿದೆ.

 

ಇಪಿಎಫ್ಒ ಫೆಬ್ರವರಿ 21 ರಂದು ಬಿಡುಗಡೆ ಮಾಡಿರುವ ಮಾರ್ಗಸೂಚಿ ಅನುಸಾರ 5,000ರೂ. ಅಥವಾ 6,500 ರೂ. ವೇತನ ಮಿತಿ ಮೀರಿದ ಇಪಿಎಫ್ಒಗೆ ಕೊಡುಗೆ ನೀಡಿದ ಎಲ್ಲ ಉದ್ಯೋಗಿಗಳು ಹಾಗೂ ಉದ್ಯೋಗದಾತರು ಅಧಿಕ ಪಿಂಚಣಿ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶವಿದೆ.2014ರ ಸೆಪ್ಟೆಂಬರ್ 1ರಂದು ಇಪಿಎಸ್ ಸದಸ್ಯರಾಗಿರುವ ಉದ್ಯೋಗಿಗಳು 1995ರ ನಿಯಮ 11(3) ಅನ್ವಯ ಹೆಚ್ಚು ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ.

ಇದರ ಜೊತೆಗೆ ನಿವೃತ್ತಿಗೂ ಮೊದಲು ಅಧಿಕ ಪಿಂಚಣಿ ಆಯ್ಕೆ ಮಾಡಿಕೊಂಡವರು ಮತ್ತು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಅಡಿಯಲ್ಲಿ ಅಧಿಕ ವೇತನದ ಕೊಡುಗೆ ನೀಡಿದ ಉದ್ಯೋಗಿಗಳು ಕೂಡ ಅಧಿಕ ಪಿಂಚಣಿ ಸೌಲಭ್ಯ ಪಡೆಯಬಹುದಾಗಿದೆ. ಉದ್ಯೋಗದಾತ ಸಂಸ್ಥೆಗಳು ಅಥವಾ ಕಂಪನಿಗಳಿಗೆ ಹೆಚ್ಚುವರಿ ಮೂರು ತಿಂಗಳು ಅಂದರೆ ಸೆಪ್ಟೆಂಬರ್ 30ರ ವರೆಗೆ ಅನುವು ಮಾಡಿಕೊಡಲಾಗಿದೆ. ಇಪಿಎಫ್ ಒ ಇದೀಗ, ಮೂರನೇ ಬಾರಿ ಅಧಿಕ ಪಿಂಚಣಿ ಅರ್ಜಿ ಸಲ್ಲಿಕೆ ಗಡುವನ್ನು ವಿಸ್ತರಣೆ ಮಾಡಿದ್ದು, ಈ ಬಾರಿ ಅರ್ಜಿ ಸಲ್ಲಿಕೆಗೆ ಕೊನೆಯ ಅವಕಾಶ ನೀಡುತ್ತಿರುವುದಾಗಿ ಮಾಹಿತಿ ನೀಡಿದೆ.

ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೀಗಿದೆ:
# ಇ-ಸೇವಾ ಪೋರ್ಟಲ್ ಗೆ ಭೇಟಿ ನೀಡಬೇಕು
#‘Pension on Higher Salary: Exercise of Joint Option under para 11(3) and para 11(4) of EPS-1995 on or before June 26, 2023’ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
# ಜಂಟಿ ಆಯ್ಕೆಗಳಿಗೆ ಅರ್ಜಿ ನಮೂನೆಗಳ ಆಯ್ಕೆ ಆರಿಸಬೇಕು.
# ಆಗ, ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಯುಎಎನ್, ಹೆಸರು, ಜನ್ಮ ದಿನಾಂಕ, ಆಧಾರ್ ಸಂಖ್ಯೆ, ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚ ಕೋಡ್ ನಮೂದಿಸಬೇಕು.
# ಅರ್ಜಿ ಭರ್ತಿ ಮಾಡಿದ ನಂತರ ‘OTP’ ಪಡೆಯಲು ಒಂದು ಆಯ್ಕೆ ದೊರೆಯುತ್ತದೆ. ಅದನ್ನು ಆಯ್ಕೆ ಮಾಡಿಕೊಂಡು ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ.

ಇಪಿಎಫ್ ಸದಸ್ಯರು ಅರ್ಜಿ ಸಲ್ಲಿಕೆಯ ಸಂದರ್ಭ ಅನೇಕ ಸಮಸ್ಯೆಗಳನ್ನೂ ಎದುರಿಸಿದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಇಪಿಎಫ್ ಒ ತಿಳಿಸಿದೆ. ಧಾರ್ ನಲ್ಲಿ ಕೆಲವು ಬದಲಾವಣೆ ಮಾಡಿದವರಿಗೆ ಅರ್ಜಿ ಸಲ್ಲಿಕೆ ಮಾಡಲು ಸಮಸ್ಯೆ ಎದುರಾಗಿದೆ. ಆಧಾರ್ ಅವರ ಇಪಿಎಫ್ ಯುಎಎನ್ (Universal Account Number) ಜೊತೆಗೆ ಲಿಂಕ್ ಆಗಿದ್ದು ಕೂಡ ಕೆಲವರಿಗೆ ಸಮಸ್ಯೆ ಉಂಟು ಮಾಡಿತ್ತು. ಹೀಗಾಗಿ, ಇಪಿಎಫ್ಒ EPFO ಅರ್ಜಿ ಸಲ್ಲಿಸುವ ಗಡುವನ್ನು ವಿಸ್ತರಿಸಿದೆ

Leave A Reply

Your email address will not be published.