Dysp transfer: 34 ಡಿವೈಎಸ್ಪಿಗಳು, 25 ಮೀಸಲು ಪೊಲೀಸ್ ಇನ್ಸ್‌ಪೆಕ್ಟರ್‌ಗಳ ದಿಡೀರ್ ವರ್ಗಾವಣೆ

Latest news congress karnataka politics Direct transfer of 34 DYSPs and 25 Reserve Inspectors

Dysp transfer: ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಅನೇಕ ಬದಲಾವಣೆಗಳಾಗಿದ್ದು, ಈಗಾಗಲೇ ಅನೇಕ ಉನ್ನತ ಹುದ್ದೆಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಇದೀಗ, ಮತ್ತೊಮ್ಮೆ ರಾಜ್ಯದಲ್ಲಿ ವರ್ಗಾವಣೆ ಪ್ರಕ್ರಿಯೆ ಮುಂದುವರಿದಿದೆ. ರಾಜ್ಯ ಸರ್ಕಾರವು 34 ಪೊಲೀಸ್ (Dysp transfer) ಉಪ ಅಧೀಕ್ಷಕರು (ಸಶಸ್ತ್ರ) ಮತ್ತು 25 ಮೀಸಲು ಪೊಲೀಸ್ ಇನ್ಸ್ಪೆಕ್ಟರ್ಗಳನ್ನು (ಸಶಸ್ತ್ರ) ವರ್ಗಾವಣೆ ಮಾಡಿದ್ದು, ಈ ಕುರಿತು ರಾಜ್ಯ ಸರ್ಕಾರ ಜೂನ್ 23 ರಂದು ಆದೇಶ ಹೊರಡಿಸಿದೆ.

 

ರಾಜ್ಯ ಗುಪ್ತಚರ ಇಲಾಖೆಯಲ್ಲಿ ಆರ್ಎಸ್ಐ ಆಗಿದ್ದ ವೀರಭದ್ರಯ್ಯ ಅವರನ್ನು ಸಿಎಆರ್ನ ಬೆಂಗಳೂರು ನಗರಕ್ಕೆ (ಕೇಂದ್ರ) ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.ರಾಜ್ಯದಲ್ಲಿ ವರ್ಗಾವಣೆ ಪ್ರಕ್ರಿಯೆ ಜೋರಾಗಿದ್ದು, ರಾಜ್ಯ ಸರ್ಕಾರವು 34 ಪೊಲೀಸ್ ಉಪ ಅಧೀಕ್ಷಕರು (ಸಶಸ್ತ್ರ) ಮತ್ತು 25 ಮೀಸಲು ಪೊಲೀಸ್ ಇನ್ಸ್ಪೆಕ್ಟರ್ಗಳನ್ನು (ಸಶಸ್ತ್ರ) ವರ್ಗಾವಣೆ ಮಾಡಿದೆ. ಬೆಂಗಳೂರಿನ 13 ಮಂದಿ, ಕಲಬುರಗಿಯ ಇಬ್ಬರು,ಮೂವರು ಮೈಸೂರಿನವರು ಸೇರಿದಂತೆ ವರ್ಗಾವಣೆಯಾಗಿರುವ ಡಿವೈಎಸ್ಪಿಗಗಳು ಗದಗ, ಬೆಳಗಾವಿ, ಬೀದರ್, ರಾಯಚೂರು, ಯಾದಗಿರಿ, ಧಾರವಾಡ, ಕೊಪ್ಪಳ, ಮಂಗಳೂರು, ಚಿತ್ರದುರ್ಗ, ರಾಮನಗರ, ಕೋಲಾರ, ಹಾಸನ, ಚಾಮರಾಜನಗರ, ದಾವಣಗೆರೆ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ಒಬ್ಬರು ಅಧಿಕಾರಿಗಳನ್ನೂ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಆರ್ಎಸ್ಐಗಳಲ್ಲಿ ಬೆಂಗಳೂರಿನ ಒಂಬತ್ತು ಮಂದಿ ಹಾಗೂ ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಿಂದ ತಲಾ ಇಬ್ಬರು, ತುಮಕೂರು, ರಾಮನಗರ, ಮಂಡ್ಯ, ಕೋಲಾರ, ಚಿಕ್ಕಮಗಳೂರು, ಮಂಗಳೂರು, ದಕ್ಷಿಣ ಕನ್ನಡ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳ ಒಬ್ಬರು ಅಧಿಕಾರಿಗಳನ್ನೂ ವರ್ಗಾವಣೆ ಮಾಡಲಾಗಿದೆ. ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬದ ಭದ್ರತಾ ವಿಭಾಗದ ಡಿವೈಎಸ್ಪಿ ಕೃಷ್ಣಕುಮಾರ್ ಕೆ ಅವರನ್ನು ಪೋಲ್ ಡೇ ಮಾನಿಟರಿಂಗ್ ಸಿಸ್ಟಮ್ (ಪಿಡಿಎಂಎಸ್) ಗೆ ವರ್ಗಾವಣೆ ಮಾಡಲಾಗಿದೆ.

Leave A Reply

Your email address will not be published.