7 Star Sultan: 7 ಸ್ಟಾರ್ ಸುಲ್ತಾನ್ ನಟನನ್ನು ಬಲಿ ಕೊಡಲು ನಿರ್ಧಾರ ; ಟಗರು ಪಲ್ಯ ತಂಡದ ಬೇಡಿಕೆ ಈಡೇರಿತಾ ?

Latest news kannada news Decision to sacrifice 7 star Sultan actor

7 Star Sultan: ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮದ‌ ಮೊಹಮ್ಮದ್ ಯುನೀಸ್ ಗಡೇದ್ ಎಂಬಾತ ಬಕ್ರೀದ್ ಹಬ್ಬಕ್ಕೆ ಕುರ್ಬಾನಿ ಕೊಡಲೆಂದು ಎರಡೂವರೆ ವರ್ಷಗಳ ಹಿಂದೆ ಟಗರೊಂದನ್ನು 1 ಲಕ್ಷ 88 ಸಾವಿರದ ಐನೂರು ರೂ ಗೆ ಖರೀದಿಸಿದ್ದರು. ಆದರೆ, ಕುರ್ಬಾನಿಗೂ ಮುನ್ನ ಈ ಟಗರನ್ನು ಕಾಳಗಕ್ಕೆ ಇಳಿಸಲಾಗಿದ್ದು, ಟಗರು ಅನೇಕ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.

 

ಟಗರಿನ ಹೆಸರು 7 ಸ್ಟಾರ್ ಸುಲ್ತಾನ್ (7 Star Sultan) ಎಂದಾಗಿದ್ದು, ಈ ಟಗರು ಡಾಲಿ ಧನಂಜಯ್ (Dhananjay) ಅಭಿನಯದ ‘ಟಗರು ಪಲ್ಯಾ’ (tagaru palya) ಸಿನಿಮಾದಲ್ಲಿ ಕಾಣಿಸಿಕೊಂಡಿದೆ. ಟಗರು ಇಲ್ಲಿಯವರೆಗೆ 34 ಕಣಗಳಲ್ಲಿ ಪ್ರಥಮ ಬಹುಮಾನ ಗಳಿಸಿದ್ದು, ಸುಮಾರು 20 ಲಕ್ಷದಷ್ಟು ಹಣ, ಬೆಳ್ಳಿ, ಬಂಗಾರ, ಬೈಕ್ ಗಳನ್ನ ಗೆದ್ದು ಬೀಗಿದೆ. ಹೀಗಾಗಿ ಮಾಲೀಕ ಯುನೀಸ್ ಈ ಟಗರಿಗೆ 7 ಸ್ಟಾರ್ ಸುಲ್ತಾನ್ ಎಂದು ಹೆಸರಿಟ್ಟರು ಎನ್ನಲಾಗಿದೆ.

ಆದರೆ, ಫೇಮಸ್ ಆಗಿರೋ 7 ಸ್ಟಾರ್ ಸುಲ್ತಾನ್’ನನ್ನು ಮಾಲೀಕ ಈ ಬಾರಿಯ ಬಕ್ರೀದ್ ಹಬ್ಬದಲ್ಲಿ ಕುರುಬಾನಿ (ಬಲಿ ಕೊಡುವುದು) ಮಾಡಲಾಗುತ್ತದೆ ಎಂಬ ವಿಚಾರ ಎಲ್ಲೆಡೆ ವೈರಲ್ ಆಗಿದ್ದು, ರಾಜ್ಯಾದ್ಯಂತ ಅಭಿಮಾನಿಗಳನ್ನು ಹೊಂದಿರುವ 7 ಸ್ಟಾರ್ ಸುಲ್ತಾನ್ ಕುರುಬಾನಿಗೆ ವಿರೋಧ ವ್ಯಕವಾಗಿದೆ. ಯಾವುದೇ ಕಾರಣಕ್ಕೂ 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡಬಾರದು ಎಂಬ ದೊಡ್ಡ ಅಭಿಯಾನವೇ ಶುರುವಾಗಿತ್ತು.

ಇದೀಗ ಅಭಿಮಾನಿಗಳ ಜೊತೆಗೆ ಟಗರು ಪಲ್ಯ ಚಿತ್ರತಂಡ ಮಾಲೀಕರಿಗೆ ಕುರುಬಾನಿ ಕೊಡದಂತೆ ಸಲಹೆ ನೀಡಿತ್ತು. ಚಿತ್ರತಂಡದ ಹಾಗೂ ಅಭಿಮಾನಿಗಳ ಒತ್ತಾಸೆಗೆ ಮಣಿದ ಮಾಲೀಕ 7 ಸ್ಟಾರ್ ಸುಲ್ತಾನನ್ನು ಕುರುಬಾನಿ ಕೊಡದಿರಲು ತೀರ್ಮಾನ ನಡೆಸಿದ್ದಾರೆ. ಅಭಿಮಾನಿಗಳು ಹಾಗೂ ಚಿತ್ರತಂಡದ ಮನವಿಗೆ ಪ್ರತಿಫಲ ಸಿಕ್ಕಿದೆ.

Leave A Reply

Your email address will not be published.