Tamilnadu: ಸಂಸದರಿಗೆ ಬಸ್ ಟಿಕೆಟ್ ನೀಡಿದ್ದು ಯಾಕೆಂದು ಪ್ರಶ್ನಿಸಿ ಮಹಿಳಾ ಬಸ್ ಚಾಲಕಿ ರಾಜೀನಾಮೆ !
Tamilnadu latest news Female bus driver Sharmila has resigned her job
Tamilnadu: ಡಿಎಂಕೆ ಸಂಸದೆ ಒಬ್ಬರಿಗೆ ಅವರಿಗೆ ಬಸ್ ಟಿಕೆಟ್ ನೀಡಿದ್ದಕ್ಕೆ ಬೇಸತ್ತು ತಮಿಳುನಾಡಿನ (Tamilnadu) ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ಅವರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ವಿಚಿತ್ರ ಘಟನೆ ವರದಿಯಾಗಿದೆ.
ಡಿಎಂಕೆ ಸಂಸದೆ ಕನಿಮೋಳಿಯವರು ಚೆನ್ನೈ ನ ಗಾಂಧಿಪುರಂನಿಂದ ಪೀಲಮೇಡುವಿಗೆ ತೆರಳಲು ಬಸ್ ಏರಿದ್ದರು. ಈ ವೇಳೆ ಕಂಡಕ್ಟರ್ ಕನಿಮೊಳಿಗೆ ಟಿಕೆಟ್ ನೀಡಿದ್ದಾರೆ. ಇದೇ ವಿಷಯಕ್ಕೆ ಚಾಲಕ ಮತ್ತು ಕಂಡಕ್ಟರ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಚಾಲಕಿ ಶರ್ಮಿಳಾ ಪ್ರಚಾರಕ್ಕಾಗಿ ಈ ರೀತಿ ವರ್ತಿಸುತ್ತಿದ್ದಾರೆ ಎಂಬ ಆರೋಪವೂ ಬಂದ ಹಿನ್ನೆಲೆಯಲ್ಲಿ ಅವರು ಕೆಲಸಕ್ಕೆ ರಾಜೀನಾಮೆ ಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚಾಲಕಿ ಶರ್ಮಿಳಾ, ” ನಾನು ಓಡಿಸುತ್ತಿದ್ದ ಬಸ್ಸಿನಲ್ಲಿ ಕನಿಮೊಳಿ ಪ್ರಯಾಣಿಸಲು ಬಂದಿದ್ದರು. ಆದರೆ ಕಂಡಕ್ಟರ್ ಟಿಕೆಟ್ ಖರೀದಿಸುವಂತೆ ಸಂಸದರನ್ನು ಕೇಳಿದರು. ಇದು ನನ್ನ ಮತ್ತು ಕಂಡಕ್ಟರ್ ನಡುವೆ ವಾಗ್ವಾದಕ್ಕೆ ಕಾರಣವಾಯಿತು ” ಎಂದು ಅವರು ತಿಳಿಸಿದ್ದಾರೆ.
” ಸಂಸದರ ಜತೆಗಿನ ಈ ವರ್ತನೆ ಬಗ್ಗೆ ಆಡಳಿತ ಮಂಡಳಿಗೆ ತಿಳಿಸಿದ್ದೇನೆ. ಸಂಸದರಿಗೆ ಅಗೌರವ ತೋರುತ್ತಿರುವುದನ್ನು ಸಹಿಸಲಾಗುತ್ತಿಲ್ಲ. ಸಂಸದರಿಗೆ ಕಂಡಕ್ಟರ್ ಟಿಕೆಟ್ ನೀಡುವುದು ಸರಿಯಾದ ಕ್ರಮವಲ್ಲ” ಎಂದು ಶರ್ಮಿಳಾ ಆರೋಪಿಸಿದ್ದಾರೆ.
ಈ ಹಿಂದೆ ಶರ್ಮಿಳಾ ಚಲಾಯಿಸುತ್ತಿದ್ದ ಬಸ್‌ನಲ್ಲಿ ಬಿಜೆಪಿ ಶಾಸಕಿ ವನತಿ ಶ್ರೀನಿವಾಸನ್ ಕೂಡ ಪ್ರಯಾಣಿಸಿದ್ದರು. ಆಗ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಸಾರಿಗೆ ಸಂಸ್ಥೆಯ ಮುಖ್ಯಸ್ಥ ದುರೈ ಕಣ್ಣನ್ ಅವರು
ಕನಿಮೊಳಿ ಭೇಟಿ ಕುರಿತು ಮಾಹಿತಿ ನೀಡಲು ನಿರಾಕರಿಸಿದರು. ನಮಗೆ ಮೊದಲೇ ಮಾಹಿತಿ ನೀಡಿದ್ದರೆ ನಾವು ಸಂಸದರಿಗೆ ಸೂಕ್ತ ವ್ಯವಸ್ಥೆ ಮಾಡುತ್ತಿದ್ದೆವು ಎಂದಿದ್ದಾರೆ. ಆಡಳಿತ ಮಂಡಳಿಯು ಶರ್ಮಿಳಾ ಅವರನ್ನು ಕೆಲಸ ಬಿಡುವಂತೆ ಬಲವಂತಪಡಿಸಲಾಗಿದೆ ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ. ಈ ಘಟನೆ ನಡೆಯುವ ಮೊದಲು, ಕನಿಮೊಳಿ ಶರ್ಮಿಳಾ ಅವರು ಬಸ್ ಚಾಲಕಿಯಾಗಲು ಪಟ್ಟ ಶ್ರಮವನ್ನು ಪ್ರಶಂಸಿಸಿದ್ದರು.
ಇದನ್ನು ಓದಿ: Aishwarya Arjun: ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮದುವೆ ಫಿಕ್ಸ್! ಹುಡುಗ ಯಾರು? ಡಿಟೇಲ್ಸ್ ಇಲ್ಲಿದೆ