Virat – Anushka Net Worth: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಒಟ್ಟು ಆಸ್ತಿ ಎಷ್ಟು ಗೊತ್ತಾ? ಯಾವೆಲ್ಲಾ ಮೂಲಗಳಿಂದ ಆದಾಯ ಗಳಿಸುತ್ತಾರೆ ?
latest news Virat - Anushka Net Worth Do you know the total assets of Virat Kohli- Anushka Sharma
Virat – Anushka Net Worth: ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಬೆಸ್ಟ್ ಜೋಡಿಯಾಗಿದೆ. ಪ್ರೀತಿಸಿ ಕೆಲ ವರ್ಷಗಳ ಡೇಟಿಂಗ್ ಬಳಿಕ ಮದುವೆಯಾದ ಕೊಹ್ಲಿ, ಅನುಷ್ಕಾ ಮುದ್ದಾದ ಮಗಳ ಜೊತೆ ಖುಷಿಯಿಂದ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಸ್ಟಾರ್ ಕ್ರಿಕೆಟಿಗ ಹಾಗೂ ನಟಿ ಅನುಷ್ಕಾ ಆಸ್ತಿ ಮೌಲ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡುತ್ತಿದೆ. ಹಾಗಾದ್ರೆ ಅನುಷ್ಕಾ ಶರ್ಮಾ – ವಿರಾಟ್ ಕೊಹ್ಲಿ ಒಟ್ಟು ಆಸ್ತಿ (Virat – Anushka Net Worth) ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ
ಕ್ರಿಕೆಟ್ ಜಗತ್ತಿನ ದೊರೆ, ಶ್ರೀಮಂತ ಆಟಗಾರ, ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿಯ ನಿವ್ವಳ ಆದಾಯ 1,050 ಕೋಟಿ ರೂಪಾಯಿ ಆಗಿದೆ. ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಿವ್ವಳ ಆದಾಯ 250-300 ಕೋಟಿ ರೂಪಾಯಿ ಎಂದು ವರದಿ ತಿಳಿಸಿದೆ. ಒಟ್ಟಾಗಿ ಇಬ್ಬರ ನಿವ್ವಳ ಆದಾಯ 1,300 ಕೋಟಿ ರೂಪಾಯಿ ಆಗಿದೆ.
ಅನುಷ್ಕಾ ಶರ್ಮಾ ಆರ್ಗನಿಕ್ ಫುಡ್ ಸಂಸ್ಥೆಯಾದ ಸ್ಲರ್ಪ್ ಫಾರ್ಮ್, ಕ್ಲೋಥಿಂಗ್ ಸಂಸ್ಥೆ ನುಶ್, ಕ್ಲೀನ್ ಸ್ಲೇಟ್ ಫಿಲ್ಮ್ಜ್ ಪ್ರೊಡಕ್ಷನ್ ಹೌಸ್ ಅನ್ನು ನಡೆಸುವ ಮೂಲಕವೂ ಆದಾಯ ಗಳಿಸುತ್ತಾರೆ. ಪೂಮಾ, ಮಿಂತ್ರಾ, ಕ್ಲಿಯರ್, ಲಕ್ಸ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಅನುಷ್ಕಾ ಶರ್ಮಾ ಆದಾಯ ಗಳಿಸುತ್ತಾರೆ. ಅನುಷ್ಕಾ ಶರ್ಮಾ ಪ್ರತಿ ಸಿನಿಮಾಕ್ಕೆ 7 ಕೋಟಿ ರೂಪಾಯಿ ಸಂಭಾವನೆ, ಜಾಹೀರಾತಿನಿಂದ 5-10 ಕೋಟಿ ರೂಪಾಯಿ ಆದಾಯ ಪಡೆಯುತ್ತಾರೆ.
ಟೀಮ್ ಇಂಡಿಯಾ ದ ಮಾಜಿ ನಾಯಕ ಕೊಹ್ಲಿಯು BCCI ನ A+ ಸೆಂಟ್ರಲ್ ಕಾಂಟ್ರ್ಯಾಕ್ಟ್ ಆಟಗಾರನಾಗಿದ್ದು, ವರ್ಷಕ್ಕೆ 7 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಟೆಸ್ಟ್ ಮ್ಯಾಚ್‌ಗಾಗಿ 15 ಲಕ್ಷ ರೂಪಾಯಿ, ಒಡಿಐಗೆ 6 ಲಕ್ಷ ರೂಪಾಯಿ, T20 ಗೆ 3 ಲಕ್ಷ ರೂಪಾಯಿ ಮತ್ತು ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ವಾರ್ಷಿಕವಾಗಿ ಆರ್‌ಸಿಬಿ ತಂಡದಿಂದ ಸುಮಾರು 15 ಕೋಟಿ ರೂಪಾಯಿ ಆದಾಯ ಕೊಹ್ಲಿಗೆ ಬರುತ್ತದೆ. ಇದಲ್ಲದೆ ಕೊಹ್ಲಿಯು ಹಲವಾರು ಪ್ರತಿಷ್ಠಿತ ಬ್ರ್ಯಾಂಡ್ ಗಳಿಗೂ ಬ್ರ್ಯಾಂಡ್ ಅಂಬಾಸಿಡರ್ ಹಾಗೂ ಜಾಹೀರಾತುಗಳ ಮೂಲಕ ನೂರಾರು ಕೋಟಿ ಹಣ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ಒಂದು ಜಾಹೀರಾತಿಗೆ ಪ್ರತಿ ವರ್ಷಕ್ಕೆ 7.50-10 ಕೋಟಿ ರೂಪಾಯಿ ಶುಲ್ಕ ವಿಧಿಸುತ್ತಾರೆ. ಇನ್ಸ್ಟಾದಿಂದ ಬರೋಬ್ಬರಿ 300 ಕೋಟಿಗೂ ಅಧಿಕ ಹಣ ಗಳಿಸಿದ್ದಾರೆ. ಅಂದರೆ ದಿನಕ್ಕೆ 82 ಲಕ್ಷ ಹಣ ಗಳಿಸುತ್ತಿದ್ದಾರೆ. ಇವರ ಒಂದು ಸ್ಪೋನ್ಸರ್ ಪೋಸ್ಟ್ ನ ಬೆಲೆ 8.69 ಕೋಟಿ ಆಗಿದೆ. ಇನ್‌ಸ್ಟಾಗ್ರಾಂ ಪೋಸ್ಟ್‌ಗಾಗಿ ಸುಮಾರು 8.9 ಕೋಟಿ ರೂಪಾಯಿ ಮತ್ತು ಟ್ವಿಟ್ಟರ್ ಪೋಸ್ಟ್‌ನಲ್ಲಿ 2.5 ಕೋಟಿ ರೂಪಾಯಿ ಆದಾಯವನ್ನು ಕೊಹ್ಲಿ ಗಳಿಸುತ್ತಾರೆ.
ವಿರಾಟ್ ಕೊಹ್ಲಿ ಎಂಪಿಎಲ್, ಸ್ಪೋರ್ಟ್ಸ್ ಕಾನ್ವೊ, ಯುನಿವರ್ಸಲ್ ಸ್ಪೋರ್ಟ್ಸ್‌ಬಿಜ್ ಸೇರಿದಂತೆ ಹಲವಾರು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಎಫ್‌ಸಿ ಗೋವಾ ಫುಟ್‌ಬಾಲ್ ಕ್ಲಬ್ ಹಾಗೂ ಟೆನ್ನಿಲ್ ಮತ್ತು ಪ್ರೋ-ವ್ರೆಸ್ಲಿಂಗ್ ತಂಡವನ್ನು ವಿರಾಟ್ ನಡೆಸುತ್ತಾರೆ. ಒನ್8, Wrogn ಮತ್ತು ಸ್ಟೆಪಥ್ಲಾನ್ ಎಂಬ ಕ್ಲೋಥಿಂಗ್ ಬ್ರ್ಯಾಂಡ್‌ಗಳ ಜೊತೆಗೆ ಒನ್8 ಕಮ್ಯೂನ್ ಮತ್ತು ನ್ಯೂವಾ ಎಂಬ ರೆಸ್ಟೋರೆಂಟ್‌ಗಳನ್ನು ಸಹ ನಡೆಸುತ್ತಾರೆ. ವಿವೋ, ಸ್ಟಾರ್ ಸ್ಪೋರ್ಟ್ಸ್, ಪೂಮಾ, ಎಂಆರ್‌ಎಫ್, ಡಿಜಿಟ್ ಇನ್ಶುರೆನ್ಸ್, ಸಿಂಥಾಲ್, ಊಬರ್ ಸೇರಿದಂತೆ ಒಟ್ಟಾಗಿ 26 ಬ್ರ್ಯಾಂಡ್‌ಗಳನ್ನು ವಿರಾಟ್ ಕೊಹ್ಲಿ ಪ್ರಚಾರ ಮಾಡುತ್ತಾರೆ.
ವಿರಾಟ್ ಮತ್ತು ಅನುಷ್ಕಾ ಮುಂಬೈನಲ್ಲಿ 34 ಕೋಟಿ ರೂಪಾಯಿ ಮೌಲ್ಯದ ಮನೆ ಮತ್ತು ಗುರ್ಗಾಂವ್‌ನಲ್ಲಿ 80 ಕೋಟಿ ರೂಪಾಯಿ ಮೌಲ್ಯದ ಬಂಗಲೆ, ಅಲಿಬಾಗ್‌ನಲ್ಲಿ 19 ಕೋಟಿ ರೂಪಾಯಿಗಳ ಫಾರ್ಮ್‌ಹೌಸ್‌ನ ಒಡೆಯರಾಗಿದ್ದಾರೆ. ಇವರು ಬಳಿ ಆಡಿ R8, ಆಡಿ A8 L, ಆಡಿ Q8, ಆಡಿ Q7, ಆಡಿ RS 5, ಆಡಿ S5, ರೇಂಜ್ ರೋವರ್ ವೋಗ್, ಬೆಂಟ್ಲಿ ಫ್ಲೈಯಿಂಗ್ ಸ್ಪರ್ ಮತ್ತು ಬೆಂಟ್ಲಿ ಕಾಂಟಿನೆಂಟಲ್ GT ಸೇರಿದಂತೆ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಕಾರುಗಳಿವೆ.
ಅಂದಹಾಗೆ 2013 ರಲ್ಲಿ ಶಾಂಪೂ ಒಂದರ ಜಾಹೀರಾತಿನ ಸಂದರ್ಭದಲ್ಲಿ ಅನುಷ್ಕಾ ಮತ್ತು ವಿರಾಟ್ ಭೇಟಿಯಾದರು. ಭೇಟಿ ಸ್ನೇಹವಾಗಿ, ಪ್ರೇಮವಾಯಿತು. ನಂತರ ವಿರಾಟ್ ಮತ್ತು ಅನುಷ್ಕಾ ಡಿಸೆಂಬರ್ 11, 2017 ರಂದು ಇಟಲಿಯಲ್ಲಿ ವಿವಾಹವಾದರು. 2021 ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು, ಅವರಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ.