Congress: ಎಣ್ಣೆ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಅಬಕಾರಿ ಇಲಾಖೆಯಿಂದ EAL ವೆಚ್ಚ ಹಿಂಪಡೆದು ಆದೇಶ!

Latest news Congress news liquor excise department Good news for liquor lovers from excise department

Congress: ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಪಡೆದ ಬಳಿಕ ನಮ್ಮ ಜೀವನ ಸಲೀಸು ಎಂದು ಭಾವಿಸಿಕೊಂಡ ಮಂದಿಗೆ ಇತ್ತೀಚೆಗೆ ವಿದ್ಯುತ್, ಹಾಲು,. ಹೀಗೆ ಎಲ್ಲ ದೈನಂದಿನ ವಸ್ತುಗಳ ಬೆಲೆ ಏರಿಕೆಯಿಂದ ಜನರು ಹೈರಾಣಾಗಿ ಹೋಗಿದ್ದು, ಈ ನಡುವೆ ಮದ್ಯ ಪ್ರಿಯರಿಗೆ ಕೊಂಚ ಮಟ್ಟಿಗೆ ರಿಲೀಫ್ ನೀಡುವ ಸುದ್ದಿ ಹೊರ ಬಿದ್ದಿದೆ.

ಕಾಂಗ್ರೆಸ್ (Congress) ಪಕ್ಷ ಅಧಿಕಾರಕ್ಕೆ ಬರುತಿದ್ದಂತೆ ಎಲ್ಲ ಫ್ರೀ ಫ್ರೀ ಎಂದು ಫುಲ್ ಖುಷ್ ಆಗಿದ್ದವರಿಗೆ ಒಂದೆಡೆ ವಿದ್ಯುತ್ ದರ ಏರಿಕೆಯ ಬಿಸಿ, ಮತ್ತೊಂದೆಡೆ ಯಾವ ದರ ಹೆಚ್ಚಿದರೂ ಪರವಾಗಿಲ್ಲ ಮದ್ಯ ದರ ಇಳಿಸಿದರೆ ಸಾಕು ಎಂಬುದು ಮದ್ಯ ಪ್ರಿಯರ ಬೇಡಿಕೆಯಾಗಿತ್ತು. ಈ ನಡುವೆ ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿ (ಇಎಎಲ್) ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸುವ ಆದೇಶ ಹೊರಡಿಸಿತ್ತು.

ಇದರ ವೆಚ್ಚವನ್ನು ಇಲ್ಲಿಯವರೆಗೆ ಮದ್ಯ ತಯಾರಕರು ಭರಿಸುತ್ತಿದ್ದು ಆದರೆ ಕಳೆದ ತಿಂಗಳು ಅಬಕಾರಿ ಇಲಾಖೆಯಿಂದ ಹೊರಡಿಸಲಾಗಿದ್ದ ಆದೇಶದಲ್ಲಿ ಇದರ ಹೊರೆಯನ್ನು ಗ್ರಾಹಕರಿಗೆ ವರ್ಗಾವಣೆ ಮಾಡಲಾದ ಪರಿಣಾಮ ಪ್ರತಿ ಮದ್ಯದ ಬಾಟಲಿ ಮೇಲೆ ಗ್ರಾಹಕರು ಹೆಚ್ಚುವರಿಯಾಗಿ 31.74 ಪೈಸೆಯನ್ನು ಪಾವತಿ ಮಾಡಲು ಆದೇಶ ಹೊರಡಿಸಿತ್ತು.

ಅಬಕಾರಿ ಇಲಾಖೆಯ ಈ ನಿರ್ಣಯದ ಕುರಿತು ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತಲ್ಲದೆ ಇದರ ಹಿಂದೆ ಅವ್ಯವಹಾರ ನಡೆದಿದೆ ಎಂದು ಹಲವರು ಆರೋಪಿಸಿದ್ದರು. ಇದೀಗ ಅಬಕಾರಿ ಇಲಾಖೆ ನಿರ್ಣಯ ಬದಲಾಯಿಸಿದ್ದು ಇಎಎಲ್ ಕುರಿತಂತೆ ಮೇ 22 ರ ಆದೇಶವನ್ನು ಹಿಂಪಡೆದಿದ್ದು, ಈ ಹಿನ್ನೆಲೆಯಲ್ಲಿ ಮೊದಲಿನಂತೆ ಮದ್ಯ ತಯಾರಕರೇ ಇನ್ನೂ ಮುಂದೆ ಬಾಟಲಿಗಳ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿ (ಇಎಎಲ್) ವೆಚ್ಚವನ್ನು ಭರಿಸಲಿದ್ದಾರೆ. ಈ ದೆಸೆಯಲ್ಲಿ ಮದ್ಯ ಪ್ರಿಯರಿಗೆ ಕೊಂಚ ಮಟ್ಟಿಗೆ ರಿಲೀಫ್ ಸಿಕ್ಕಂತಾಗಿದೆ.

 

ಇದನ್ನು ಓದಿ: Virat – Anushka Net Worth: ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ ಒಟ್ಟು ಆಸ್ತಿ ಎಷ್ಟು ಗೊತ್ತಾ? ಯಾವೆಲ್ಲಾ ಮೂಲಗಳಿಂದ ಆದಾಯ‌ ಗಳಿಸುತ್ತಾರೆ ? 

Leave A Reply

Your email address will not be published.