PM Kisan 14th Instalment: ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್: ಹಣ ಜಮೆ ಆಗಲು IKYC ಮಾಡದಿದ್ದರೆ ಇಂದೇ ಮಾಡಿ !

Latest new PM Kisan 14th Instalment Do KYC to deposit funds to PM Kisan Yojana beneficiaries

PM Kisan 14th Instalment: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ(PM Kisan Scheme Latest News) ಸರ್ಕಾರವು ರೈತರಿಗೆ ವಾರ್ಷಿಕ 6000 ರೂ. ಒದಗಿಸುತ್ತಿದ್ದು, ಯೋಜನೆಯ ಭಾಗವಾಗಿ ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ರವಾನೆ ಮಾಡಲಾಗಿದ್ದು, ಇದೀಗ ಪಿಎಂ ಕಿಸಾನ್ (PM Kisan)ಯೋಜನೆಯ ಫಲಾನುಭವಿಗಳಿಗೆ ಖುಷಿಯ ಸುದ್ದಿ ಪ್ರಕಟವಾಗಿದೆ.

ಎಲ್ಲರಿಗೂ ಗೊತ್ತಿರುವ ಹಾಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸೇರುವ ರೈತರು KYC ಅನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದೀಗ, ಪಿಎಂ ಕಿಸಾನ್ ಯೋಜನೆಯಲ್ಲಿ ಅಪ್ಲಿಕೇಶನ್‌ನಲ್ಲಿ ಮುಖ ಗುರುತಿಸುವಿಕೆ ಆಯ್ಕೆಯನ್ನು ಪರಿಚಯಿಸಲಾಗಿದ್ದು, ರೈತರು ಈ ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸಬಹುದಾಗಿದೆ.

ಇಕೆವೈಸಿ ಪೂರ್ಣಗೊಳಿಸಿದವರಿಗೆ ಮಾತ್ರ ರೂ. 2 ಸಾವಿರ ಲಭ್ಯವಾಗಲಿದ್ದು, ಪ್ರಸ್ತುತ 14ನೇ ಕಂತಿನಡಿ ರೈತರಿಗೆ ರೂ. 2 ಸಾವಿರ ಪಡೆಯಲು ಫಲಾನುಭವಿಗಳು ಎದುರು ನೋಡುತ್ತಿದ್ದು, ಈ ತಿಂಗಳ ಅಂತ್ಯದ ವೇಳೆಗೆ ರೈತರ ಬ್ಯಾಂಕ್ ಖಾತೆಗಳಿಗೆ ಈ ಪಿಎಂ ಕಿಸಾನ್ ಹಣ ಜಮೆಯಾಗುವ ಸಾಧ್ಯತೆಯಿದೆ.ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರಕ್ಕೆ ಹೋಗಿ KYC ಅನ್ನು (PM Kisan 14th Instalment) ಪೂರ್ಣಗೊಳಿಸಲು ಅವಕಾಶವಿದೆ.

ಫಲಾನುಭವಿಗಳು ಹಣ ಪಡೆಯಲು ಐಕೆವಿ ಮಾಡುವುದು ಕಡ್ಡಾಯವಾಗಿದ್ದು, ಇಲ್ಲಿಯವರೆಗೆ ಆಧಾರ್ ಒಟಿಪಿ ಮೂಲಕ ಈ ಕಾರ್ಯವನ್ನು ಪೂರ್ಣಗೊಳಿಸುವ ಆಯ್ಕೆ ಇತ್ತು. ಇನ್ನು ಮುಂದೆ ಎಲ್ಲೂ ಓಡಾಡಬೇಕಾಗಿಲ್ಲ. ಮನೆಯಲ್ಲೇ ಕುಳಿತು IKYC ಅನ್ನು ಪೂರ್ಣಗೊಳಿಸಬಹುದಾಗಿದ್ದು,ಇದಕ್ಕೆ ಆಧಾರ್ ಒಟಿಪಿ ನೀಡಬೇಕಾದ ಅಗತ್ಯವಿಲ್ಲ ಬದಲಾಗಿ ಹೊಸದಾಗಿ ಪರಿಚಯಿಸಲಾದ ಮುಖದ ದೃಢೀಕರಣ ಸೇವೆಯೊಂದಿಗೆ, ಆಧಾರ್ OTP ಇಲ್ಲದೆ KYC ಅನ್ನು ಪೂರ್ಣಗೊಳಿಸಬಹುದು. ಹೀಗಾಗಿ, ಆಧಾರ್ ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೇ ನೇರವಾಗಿ IKYC ಅನ್ನು ಪೂರ್ಣಗೊಳಿಸಿ ಯೋಜನೆಯ ಪ್ರಯೋಜನ ಪಡೆಯಬಹುದು.

Leave A Reply

Your email address will not be published.