Hijab Row: ತರಗತಿಯಲ್ಲಿ ಹಿಜಾಬ್ ಧರಿಸಿದ್ದಕ್ಕೆ ಆಕ್ಷೇಪ ; ಪ್ರಾಂಶುಪಾಲರು ಸೇರಿದಂತೆ ಮೂವರು ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲು !
Hijab row Latest national news School objects to students wearing hijabs principle and staff members filed FIR in Telangana
Hijab Row: ಹೈಸ್ಕೂಲ್ ವಿದ್ಯಾರ್ಥಿನಿಗೆ ತರಗತಿಯಲ್ಲಿ ಹಿಜಾಬ್ ಧರಿಸಲು (Hijab Row) ಅವಕಾಶ ನೀಡದ ಶಾಲೆಯ ಪ್ರಾಂಶುಪಾಲರು ಮತ್ತು ಮೂವರು ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಖಾಸಗಿ ಶಾಲೆಯ ಪ್ರಾಂಶುಪಾಲರು ಮತ್ತು ಮೂವರು ಶಿಕ್ಷಕರು ತರಗತಿಯ ಒಳಗೆ ಹಿಜಾಬ್ ಧರಿಸಬಾರದು ಎಂದು ಹೇಳಿದ್ದರು. ಈ ಹಿನ್ನೆಲೆ ವಿದ್ಯಾರ್ಥಿನಿ ಶಾಲೆ ಮತ್ತು ಶಿಕ್ಷಕರ ವಿರುದ್ಧ ದೂರು ದಾಖಲಿಸಿದ್ದಾರೆ.
10ನೇ ತರಗತಿ ವಿದ್ಯಾರ್ಥಿನಿ ಶಾಲೆ ಮತ್ತು ಶಿಕ್ಷಕರ ವಿರುದ್ಧ ದೂರು ನೀಡಿದ್ದು, ದೂರಿನಲ್ಲಿ ಜೂನ್ 23 ರಂದು ತಾನು ಸ್ಕಾರ್ಫ್ ಧರಿಸಿದ್ದಕ್ಕೆ ಪ್ರಾಂಶುಪಾಲರು ಮತ್ತು ಮೂವರು ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದರು ಎಂದು ಉಲ್ಲೇಖಿಸಲಾಗಿದೆ. ಯುವತಿಯ ದೂರಿನ ಮೇರೆಗೆ ಶಿಕ್ಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 298 (ಉದ್ದೇಶಪೂರ್ವಕವಾಗಿ ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶ, ಇತ್ಯಾದಿ) ಮತ್ತು ಬಾಲಾಪರಾಧ(ಜೆಜೆ) ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಉಡುಪಿಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಆರಂಭವಾಗಿ ದೇಶದಾದ್ಯಂತ ಭುಗಿಲೆದ್ದಿತ್ತು. ಭಾರೀ ಪ್ರತಿಭಟನೆಯೂ ನಡೆದಿತ್ತು. ಇದೀಗ ಈ ವಿವಾದ ತಣ್ಣಗಾಗಿದೆ. ಆದರೂ ಹೈದರಾಬಾದ್‌ನಂತೆ ಅಲ್ಲಲ್ಲಿ ಹಿಜಾಬ್ ವಿವಾದಗಳು ತಲೆ ಎತ್ತುತ್ತಿವೆ.
ಇದನ್ನೂ ಓದಿ: Accident: ದೊಡ್ಮನೆ ಕುಟುಂಬದ ಯುವ ನಟನಿಗೆ ಅಪಘಾತ ; ಆಸ್ಪತ್ರೆಗೆ ದಾಖಲು- ಬಲಗಾಲು ಕಳೆದುಕೊಂಡ ನಟ ಸೂರಜ್ !