Home News YouTuber Nikhil: ಕುಡಿದು ಕಿರಿಕ್ ಮಾಡಿ ಗಲಾಟೆ ಮಾಡಿದ ಯೂಟ್ಯೂಬರ್! ವೀಡಿಯೋ ವೈರಲ್!!!

YouTuber Nikhil: ಕುಡಿದು ಕಿರಿಕ್ ಮಾಡಿ ಗಲಾಟೆ ಮಾಡಿದ ಯೂಟ್ಯೂಬರ್! ವೀಡಿಯೋ ವೈರಲ್!!!

YouTuber Nikhil

Hindu neighbor gifts plot of land

Hindu neighbour gifts land to Muslim journalist

ಕೊರೋನಾ ಲಾಕ್ ಡೌನ್ ಟೈಮ್ ಅಲ್ಲಿ ಡಿಫರೆಂಟ್ ಆಗಿ ರೀಲ್ಸ್ ಮಾಡುವ ಮೂಲಕ ಫೇಮಸ್ ಆಗಿರುವ ಅಣ್ಣ ತಂಗಿ ಈಗ ಯುಟ್ಯೂಬ್ ಚಾನೆಲ್ ಕೂಡ ಆರಂಭಿಸಿದ್ದು, ಈ ಜೋಡಿ ಇಡೀ ಕನ್ನಡಿಗರ ಮನ ಗೆದ್ದಿದೆ. ಈ ನಡುವೆ ಈ ಜೋಡಿಯ ಸಣ್ಣ ಮಾತುಕಥೆ ದೊಡ್ಡ ಕಿರಿಕ್ ವರೆಗೆ ತಲುಪಿ ನಿಖಿಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.

ನಿಖಿಲ್ ತಮ್ಮ ಪರಿಚಯದ ಹೋಟೆಲ್‌ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದರಂತೆ. ನಿಖಿಲ್ ಗುಂಪಿನಲ್ಲಿ ಸಸ್ಯಹಾರಿ ಸ್ನೇಹಿತಾ ವೆಜ್ ಬಿರಿಯಾನಿ ಆರ್ಡರ್‌ ಮಾಡಿದ್ದು, ಈ ಸಂದರ್ಭ ಹೋಟೆಲ್‌ನವರು ಚಿಕನ್ ಬಿರಿಯಾನಿ ನೀಡಿದ್ದಾರೆ. ಇದನ್ನರಿಯದೆ ನಿಖಿಲ್ ಸ್ನೇಹಿತಾ ಅದನ್ನು ತಿಂದಿದ್ದು, ಮಾಲೀಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.ಗಂಟೆಗಟ್ಟಲೆವರೆಗೆ ಕಾದರು ಕೂಡ ಮಾಲಿಕ ಮಾತಾಡಲು ನಿರಾಕರಿಸಿದ ಹಿನ್ನೆಲೆ ನಿಖಿಲ್ ಎಣ್ಣೆ ಬಾಟಲ್ ಎಸೆದಿದ್ದಾರೆ ಎನ್ನಲಾಗಿದೆ. ಈ ವೇಳೆ, ಬಾಟಲ್‌ನ ಒಂದು ಪುಡಿ ಪಕ್ಕದ ಟೇಬಲ್‌ನಲ್ಲಿ ಕುಳಿತಿರುವ ವ್ಯಕ್ತಿಗೆ ತಾಗಿದ್ದು, ಆ ಟೇಬಲ್‌ನಲ್ಲಿದ್ದವರು ಕೂಡ ಎಣ್ಣೆ ಮತ್ತಿನಲ್ಲಿದ್ದ ಹಿನ್ನೆಲೆ ಎಣ್ಣೆಯ ಮಹಿಮೆಯಿಂದ ಕಿರಿಕ್ ಸ್ಟಾರ್ಟ್ ಆಗಿದೆ.

ಆಮೇಲೆ, ಸಿನಿಮಾ ಮಾದರಿಯಲ್ಲಿ ನಿಖಿಲ್‌ ಅವರನ್ನು ಪೊಲೀಸರು ಹೊಯ್ಸಳದಲ್ಲಿ ಕರೆದೊಯ್ದಿದ್ದಾರೆ. ಮತ್ತೊಂದು ತಂಡದಲ್ಲಿದ್ದ ಒಬ್ಬ ವ್ಯಕ್ತಿ ಈ ದೃಶ್ಯವನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರಿಂದ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.

ಫೇಮಸ್ ಯೂಟ್ಯೂಬರ್ ನಿಖಿಲ್ ಕೆಲ ದಿನಗಳ ಹಿಂದೆ ಪೊಲೀಸ್ ಹೊಯ್ಸಳದಲ್ಲಿ ಕುಳಿತುಕೊಂಡಿರುವ ಜೊತೆಗೆ ಹೊರಗೆ ನಿಂತಿರುವ ಹುಡುಗರು ಕೆಟ್ಟ ಪದಗಳಿಂದ ಬೈಯುತ್ತಿರುವ ದೃಶ್ಯ ಅಷ್ಟೆ ಅಲ್ಲದೇ , ಅದಕ್ಕೆ ನಿಖಿಲ್ ಹೊಡೆಯಲು ಮುಂದಾಗಿರುವ ವಿಡಿಯೋ ವೈರಲ್ ಆಗಿದೆ. ಈ ವೀಡಿಯೊ ವೈರಲ್ ಆಗುತ್ತಿದ್ದ ಹಾಗೆ ಅಲ್ಲ ಅಭಿಮಾನಿಗಳು ಏನಪ್ಪಾ ಅಸಲಿ ಸಂಗತಿ ಎಂದು ತಿಳಿದುಕೊಳ್ಳಲು ಒದ್ದಾಡುತ್ತಿದ್ದಾರೆ.

ಈ ನಡುವೆ ನಿಖಿಲ್ ಸ್ಪಷ್ಟನೆ ನೀಡಿದ್ದು, ಅಸಲಿ ವಿಚಾರ ಬೇರೆ ನೇ ಇದೆ ಎಂದು ಹೇಳಿಕೊಂಡಿದ್ದಾರೆ. ಎಲ್ಲೆಡೆ ವಿಡಿಯೋ ವೈರಲ್ ಆಗುತ್ತಿದ್ದ ಹಾಗೆ ಮತ್ತೊಂದು ಸಿಸಿಟಿವಿ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಹೋಟೆಲ್‌ ಸಿಬ್ಬಂದಿ ಕಸ ಗುಡಿಸುತ್ತಿರುವಾಗ ನಿಖಿಲ್ ಎಣ್ಣೆ ಬಾಟಲ್ ಹಿಡಿದುಕೊಂಡು ಸಿಬ್ಬಂದಿ ಜೊತೆ ಮಾತಾಡಲು ಮುಂದಾಗಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಚಾರ ದೊಡ್ಡದಾಗಿ ನಿಖಿಲ್ ಈ ವೇಳೆ ಕೋಪದಿಂದ ಬಾಟಲ್ ತೆಗೆದುಕೊಂಡು ಬಿಸಾಡುತ್ತಾರೆ. ಪುಡಿಯಾದ ಬಾಟಲ್ ಮೇಲೆ ಸಿಬ್ಬಂದಿ ಕಾಲಿಟ್ಟು ಪೆಟ್ಟು ಮಾಡಿಕೊಂಡಿದ್ದಾರೆ.ನಿಖಿಲ್ ಅವರು ಈ ವಿಚಾರದ ಬಗ್ಗೆ ಕ್ಲಾರಿಟಿ ಕೊಟ್ಟ ಮೇಲೆ ಹೋಟೆಲ್ ಮಾಲೀಕರು ಸಿಸಿಟಿವಿ ದೃಶ್ಯ ರಿಲೀಸ್ ಮಾಡಿದ್ದು, ಅದರಲ್ಲಿ ನಿಖಿಲ್ ಕುಡಿದು ಎಣ್ಣೆ ಬಾಟಲ್ ಪುಡಿ ಪುಡಿ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ.

 

ಇದನ್ನು ಓದಿ: Nalin Kumar Kateel: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲ್ ರಾಜೀನಾಮೆ, ಹೊಸ ಅಧ್ಯಕ್ಷನಿಗೆ ತಾಲೀಮು !