Home News Bengaluru: ಕಾಲೇಜು ವಿದ್ಯಾರ್ಥಿ ಮೇಲೆ ಲಾಂಗ್ ನಿಂದ ಹಲ್ಲೆ! ಈ ಘಟನೆ ಹಿಂದೆ ಇದೆಯೇ ಹೆಣ್ಣೊಬ್ಬಳ...

Bengaluru: ಕಾಲೇಜು ವಿದ್ಯಾರ್ಥಿ ಮೇಲೆ ಲಾಂಗ್ ನಿಂದ ಹಲ್ಲೆ! ಈ ಘಟನೆ ಹಿಂದೆ ಇದೆಯೇ ಹೆಣ್ಣೊಬ್ಬಳ ವಿಷಯ?!

Bengaluru
Image source :Ipleaders

Hindu neighbor gifts plot of land

Hindu neighbour gifts land to Muslim journalist

Bengaluru: ಪೋಷಕರು ಎಷ್ಟೇ ಕಷ್ಟ ಬಂದರೂ ಮಕ್ಕಳ ಉನ್ನತ ಭವಿಷ್ಯಕ್ಕಾಗಿ ಒಳ್ಳೆಯ ವಿದ್ಯಾಭ್ಯಾಸ ಸಿಗಲೆಂದು ಕಾಲೇಜಿಗೆ ಕಳುಹಿಸುತ್ತಾರೆ. ಆದರೆ ಕಾಲೇಜಿನ ಆಸು ಪಾಸಲ್ಲೇ ಲಾಂಗ್ ಮಚ್ಚುಗಳ ಅಟ್ಟಹಾಸ ಮೆರೆಯುತ್ತಿದ್ದು, ಕಾಲೇಜಿನ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಕಾಲೇಜಿನ ಸಮೀಪದ ರಸ್ತೆಯಲ್ಲಿ, ಹಾಡಹಗಲೇ ದರ್ಶನ್ ಎಂಬ ವಿದ್ಯಾರ್ಥಿ ಮೇಲೆ ಭೀಕರ ಅಟ್ಯಾಕ್ ನಡೆದಿದೆ (Bengaluru crime news). ಜೂನ್ 5 ರಂದು, ಬಿಬಿಎ ಓದುತ್ತಿದ್ದ ವಿದ್ಯಾರ್ಥಿ ದರ್ಶನ್ ಎಂಬಾತನ ಮೇಲೆ ‌ ಹೆಲ್ಮಟ್ ಧರಿಸಿ ಬಂದ 6 ಜನರ ಗ್ಯಾಂಗ್ ಉಲ್ಟಾ ಲಾಂಗ್ ಬೀಸಿ ಎಸ್ಕೆಪ್ ಆಗಿದ್ದರು.ಕೂದಲೆಳೆ ಅಂತರದಲ್ಲಿ ವಿದ್ಯಾರ್ಥಿ ದರ್ಶನ್ ಪಾರಾಗಿದ್ದ. ಕಾಲೇಜು ಅಸುಪಾಸಿನಲ್ಲೇ ಲಾಂಗು, ಮಚ್ಚುಗಳು ಝಳಪಿಸಿದ್ದು, ಸೊಷಿಯಲ್ ಮೀಡಿಯಾಗಳಲ್ಲಿ ಭಾರಿ ವೈರಲ್ ಆಗಿತ್ತು.

ಈ ಕುರಿತು ದರ್ಶನ್ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು. ಆದರೆ ಪ್ರಕರಣ ತನಿಖೆಗೆ ಸಂಬಂಧಿಸಿದಂತೆ ದರ್ಶನ್, ಪೊಲೀಸರಿಗೆ ಯಾವುದೇ ರೀತಿಯಲ್ಲಿ ಸಹಕರಿಸುತ್ತಿಲ್ಲ. ಈ ಕೇಸ್‌ನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಪ್ರಕರಣ ಸಂಬಂಧ ಮೊಬೈಲ್ ವಿಡಿಯೋ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾರೆ. ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಪೂರ್ಣೆಶ್ವರಿ ಠಾಣೆ ಪೊಲೀಸರು (Annapoorneshwari Police Station) 10 ಕ್ಕೂ ಹೆಚ್ಚು ಯುವಕರನ್ನು ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನು ಈ ಪ್ರಕರಣದ ಸುತ್ತ ಹಲವು ಅನುಮಾನಗಳ ಹುತ್ತ ಬೆಳೆಯುತ್ತಿದೆ. ಹುಡುಗಿ ವಿಚಾರಕ್ಕೇನಾದರೂ ಈ ಪ್ರಕರಣ ನಡೀತಾ ಎಂಬ ಅನುಮಾನ ಶುರುವಾಗಿದೆ. ದರ್ಶನ್ ಕೆಲ ದಿನಗಳ ಹಿಂದೆ ಅಷ್ಟೇ ಸಂಗಾತಿಯ ವಿಚಾರವಾಗಿ ಕಿರಿಕ್ ಮಾಡಿಕೊಂಡಿದ್ದ ಇದೇ ವಿಚಾರವಾಗಿ ಹಲ್ಲೆ ನಡೆದಿರಬಹುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆಯಾದರೂ, ಇನ್ನು ಸ್ಪಷ್ಟವಾಗಿಲ್ಲ. ಘಟನೆ ಕುರಿತು ದೂರದಾರ ದರ್ಶನ್ ಮಾತ್ರ ನಿಜಾಂಶ ರಿವೀಲ್ ಮಾಡದೆ ಸತಾಯಿಸುತ್ತಿದ್ದಾನೆ.

 

ಇದನ್ನು ಓದಿ: Love Jihad: ಮಧ್ಯಪ್ರದೇಶದ ಮಹಿಳೆ ಜೊತೆ ಬೆಂಗಳೂರು ವ್ಯಕ್ತಿ ಲವ್ ಜಿಹಾದ್! ಲವ್‌ ಜಿಹಾದ್‌ ಮದವನ್ನು ನಾವು ಇಳಿಸುತ್ತೇವೆ ಎಂದ ಸರ್ಕಾರ!