America: ಭಾರತದ ರಾಷ್ಟ್ರಗೀತೆ ಹಾಡಿ ಮೋದಿ ಕಾಲಿಗೆರಗಿ, ಭಾವುಕರಾದ ಅಮೆರಿಕಾದ ಖ್ಯಾತ ಗಾಯಕಿ!!
latest news American famous singer Mary Milben bowed at the feet of PM Modi
America: ಅಮೆರಿಕಾದ ಪ್ರಸಿದ್ಧ ಗಾಯಕಿ ಮೇರಿ ಮಿಲ್ಬೆನ್ (Mary Millben) ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಕಾಲ್ಗಳನ್ನು ಮುಟ್ಟಿ ನಮಸ್ಕರಿಸಿದ್ದಾರೆ.
ಹೌದು, ಪ್ರಧಾನಿ ಮೋದಿ(PM Modi) ಅವರ ನಾಲ್ಕು ದಿನಗಳ ಅಮೆರಿಕ ಪ್ರವಾಸದ ಸಮಾರೋಪ ಸಮಾರಂಭ ಕಾರ್ಯಕ್ರಮದ ವೇಳೆ ಅಮೆರಿಕದ ಖ್ಯಾತ ಗಾಯಕಿ ಮೇರಿ ಮಿಲ್ಬೆನ್ ಅವರು ಭಾರತದ ರಾಷ್ಟ್ರಗೀತೆ(Indian National anthem) ಜನ ಗಣ ಮನ ಹಾಡಿದ ಬಳಿಕ ಪ್ರಧಾನಿ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ಎಲ್ಲರ ಗಮನ ಸೆಳೆದಿದ್ದು, ಈ ಕ್ಷಣ ಭಾವುಕತೆಗೆ ಸಾಕ್ಷಿಯಾಯಿತು.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದಲ್ಲಿ (America) ನೆಲೆಸಿರುವ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಆಫ್ರಿಕನ್ ಹಾಗೂ ಅಮೆರಿಕನ್ ಹಾಲಿವುಡ್ ನಟಿ ಮತ್ತು ಗಾಯಕಿ ಮೇರಿ ಮಿಲ್ಬೆನ್ ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಗೀತೆಯನ್ನು (National Anthem) ಸಹ ಅವರು ಹಾಡಿದರು. ಬಳಿಕ ಪ್ರಧಾನಿಯವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ಅಂದಹಾಗೆ ಮಿಲ್ಬೆನ್ ಅವರು ಆಫ್ರಿಕನ್-ಅಮೆರಿಕನ್ ನಟಿ ಮತ್ತು ಗಾಯಕಿ ಆಗಿದ್ದಾರೆ. ರಾಷ್ಟ್ರಗೀತೆ ಜನ ಗಣ ಮನ ಮತ್ತು ಓಂ ಜೈ ಜಗದೀಶ ಹರೆ ಹಾಡನ್ನು ಹಾಡುವ ಮೂಲಕ ಭಾರತದಲ್ಲೂ ತುಂಬಾ ಖ್ಯಾತಿ ಪಡೆದಿದ್ದಾರೆ. ಅಮೆರಿಕದ ರಾಷ್ಟ್ರಗೀತೆ ಮತ್ತು ದೇಶಭಕ್ತಿಯ ಸಂಗೀತವನ್ನು ಸತತ ನಾಲ್ಕು ಅಮೆರಿಕ ಅಧ್ಯಕ್ಷರ ಎದುರು ಹಾಡಿರುವ ನನಗೆ ಪ್ರಧಾನಿ ಮೋದಿ ಅವರು ಎದುರು ಭಾರತದ ರಾಷ್ಟ್ರಗೀತೆ ಹಾಡಲು ಅವಕಾಶ ದೊರೆತಿದ್ದು, ನನ್ನ ಸೌಭಾಗ್ಯ. ಮೋದಿ ಒಬ್ಬ ಕರುಣೆ ಉಳ್ಳಂತಹ ವ್ಯಕ್ತಿ. ನಾನು ಅವರೊಂದಿಗೆ ಇಲ್ಲಿರುವುದು ನನಗೆ ತುಂಬಾ ಹೆಮ್ಮೆಯಾಗಿದೆ. ಇಷ್ಟೊಂದು ಜನರ ನಡುವೆ ಭಾರತದ ರಾಷ್ಟ್ರಗೀತೆಯನ್ನು ಹಾಡಿರುವುದು ನನಗೆ ಖುಷಿಎಂದು ಹೇಳಿದ್ದಾರೆ.
ಕಳೆದ ತಿಂಗಳು, ಪಿಎಂ ಮೋದಿ(PM Modi) ಅವರು ಪಪುವಾ ನ್ಯೂಗಿನಿಯಾ(Papuva nyuginiya) ರಾಷ್ಟ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಪೆಸಿಫಿಕ್ ದ್ವೀಪ ರಾಷ್ಟ್ರದ ಪ್ರಧಾನಿ, ಗೌರವ ಸೂಚಕವಾಗಿ ಪ್ರಧಾನಿ ಮೋದಿಯವರ ಪಾದಗಳನ್ನು ಸ್ಪರ್ಶಿಸಿದ್ದರು. ಇದೀಗ ಖ್ಯಾತ ಗಾಯಕಿ ಮೋದಿ ಕಾಲನ್ನು ಮುಟ್ಟಿ ನಮಸ್ಕರಿಸಿರುವು ಪ್ರಧಾನಿಗಳ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ಇನ್ನು ಇದಕ್ಕೂ ಮೊದಲು ಗಾಯಕಿಯನ್ನು ಭಾರತದ 75 ನೇ ಸ್ವಾತಂತ್ರೋತ್ಸವದಲ್ಲಿ ಕಾರ್ಯಕ್ರಮ ಆಹ್ವಾನಿಸಲಾಗಿತ್ತು. ಈ ವೇಳೆ ಭಾರತಕ್ಕೆ ಭೇಟಿಕೊಟ್ಟಿದ್ದ ಅವರು ರಾಷ್ಟ್ರಗೀತೆಯನ್ನು ಹಾಡಿದ್ದರು.
रीगन सेंटर में राष्ट्रगीत जन गण मन अधिनायक….. गाने के बाद @MaryMillben ने आदर के साथ प्रधानमंत्री श्री @narendramodi जी के पांव छू लिए।
इसे कहते हैं आदर , सम्मान और प्यार अर्जित करना …!
और एक पप्पू की सभा में लोग राष्ट्रगीत जन गण मन अधिनायक… गाने के समय खड़े भी… pic.twitter.com/CVXZ3hjZyp
— Bharat Sanghvi Jain (@rajamaka) June 24, 2023
ಇದನ್ನು ಓದಿ: R Ashok-Muniyappa: ನಮ್ಮನ್ನು ಯಾಕೆ ಕೇಳ್ತೀರಾ, ಅಕ್ಕಿ ಕೊಡುವುದು ನಿಮ್ಮ ಹಣೆಬರಹ: ಮುನಿಯಪ್ಪ ಹೇಳಿಕೆಗೆ ಆರ್ ಅಶೋಕ್ ತಿರುಗೇಟು