Rahul Gandhi- Lalu yadav: ಹೇಳೋದ್ ಕೇಳಿದ್ರೆ ಎಂದೋ ಮದ್ವೆಯಾಗ್ತಿತ್ತು. ಈಗ್ಲೂ ಏನಾಗಿಲ್ಲ, ಗಡ್ಡ ಟ್ರಿಮ್‌ ಮಾಡಿ ಬೇಗ ಮದ್ವೆಯಾಗಿ..!! ರಾಹುಲ್‌ ಗಾಂಧಿಗೆ ಲಾಲು ಸಲಹೆ

karnataka news politics Lalu yadav advises Rahul Gandhi to trim his beard and get married soon

Rahul Gandhi- Lalu yadav: “ನನ್ನ ಮಾತು ರಾಹುಲ್ ಕೇಳಲಿಲ್ಲ. ಮಾತು ಕೇಳಿದ್ದರೆ ರಾಹುಲ್ ಗಾಂಧಿ ಮೊದಲೇ ಮದ್ವೆಯಾಗುತಿತ್ತು. ಆದರೆ ಇನ್ನೂ ಕಾಲ ಮಂಚಿಲ್ಲ ರಾಹುಲ್‌ ಗಾಂಧಿ (Rahul Gandhi- Lalu yadav) ಅವರು ಗಡ್ಡ ಟ್ರಿಮ್‌ ಮಾಡಿ ಬೇಗ ಮದುವೆ ಆಗಲಿ” ಎಂದು ಲಾಲು ಯಾದವ್(Lalu yadav) ರಾಹುಲ್ ಗಾಂಧಿ ಅವರಿಗೆ ಸಲಹೆ ನೀಡಿದ್ದಾರೆ.

ಹೌದು, ಬಿಹಾರದಲ್ಲಿ(Bihar) ಮೋದಿ ವಿರುದ್ಧ ವಿಪಕ್ಷಗಳು ಒಂದಾಗಿವೆ. ಒಬ್ಬ ನಾಯಕನನ್ನು ಮಣಿಸಲು ಹಲವು ನಾಯಕರು ಒಟ್ಟಾಗಿದ್ದಾರೆ. ವಿಪಕ್ಷಗಳ ಈ ಮೈತ್ರಿ ಸಭೆಯಲ್ಲಿ ಗಂಭೀರ ವಿಷಯಗಳು ಚರ್ಚೆಯಾಗಿದೆ. ಈ ಚರ್ಚೆಗಳ ನಡುವೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾವದ್ ಹಾಸ್ಯ ಚಟಾಕಿ ಸಿಡಿಸಿದ್ದಾರೆ. ನನ್ನ ಮಾತು ರಾಹುಲ್ ಕೇಳಲಿಲ್ಲ. ಮಾತು ಕೇಳಿದ್ದರೆ ರಾಹುಲ್ ಗಾಂಧಿ ಮೊದಲೇ ಮದ್ವೆಯಾಗುತಿತ್ತು. ಆದರೆ ಇನ್ನೂ ಕಾಲ ಮಂಚಿಲ್ಲ ರಾಹುಲ್‌ ಗಾಂಧಿ (Rahul Gandhi) ಅವರು ಗಡ್ಡ ಟ್ರಿಮ್‌ ಮಾಡಿ ಬೇಗ ಮದುವೆ ಆಗಬೇಕು ಎಂದು ಲಾಲು ಯಾದವ್ ಹೇಳಿದ್ದಾರೆ. ಈ ಮಾತು ಕೇಳಿ ಸಭೆಯಲ್ಲಿದ್ದವರೆಲ್ಲ ನಗೆ ಬೀರಿದರೆ, ರಾಹುಲ್‌ ಗಾಂಧಿ ನಾಚಿ ನೀರಾಗಿದ್ದಾರೆ.

ಅಂದಹಾಗೆ 16 ಪಕ್ಷಗಳು(16 partys) ಪಾಲ್ಗೊಂಡ ಈ ವಿಪಕ್ಷಗಳ ಮೈತ್ರಿ ಸಭೆಯಲ್ಲಿ ಲಾಲು ಪ್ರಸಾದ್ ಯಾದವ್ ಹಲವು ವಿಚಾರಗಳನ್ನು ಮುಂದಿಟ್ಟು ಚರ್ಚೆ ನಡೆಸಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ(Parliament election) ಮೈತ್ರಿ ಪಕ್ಷಗಳು ಪಾಲಿಸಬೇಕಾದ ನೀತಿಗಳು, ನಿಯಮಗಳು, ಒಗ್ಗಟ್ಟು, ಸಯಂಮದ ಕುರಿತು ಪಾಠ ಮಾಡಿದ್ದಾರೆ. ಗಂಭೀರ ಚರ್ಚೆ ನಡುವೆ ಲಾಲು ಪ್ರಸಾದ್ ಯಾದವ್, ರಾಹುಲ್ ಗಾಂಧಿ ಮದುವೆ ಕುರಿತು ಮಾತನಾಡಿದ್ದಾರೆ.

ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಒಳ್ಳೆಯ ಕೆಲಸ ಮಾಡಿದ್ದಾರೆ. ಆಓರೆ ಅವರು ನಮ್ಮ ಮಾತು ಕೇಳಿ ಈಗಲೇ ಮದುವೆಯಾಗಬೇಕು. ಈ ವಿಚಾರವಾಗಿ ನಿಮ್ಮ ತಾಯಿ ಯಾವಾಗಲೂ ನಮ್ಮಲ್ಲಿ ದೂರುತ್ತಾರೆ. ನೀವು ಅವರ ಮಾತನ್ನು ಕೇಳುವುದಿಲ್ಲವಂತೆ. ನಮ್ಮ ಮಾತು ಕೇಳಿ, ಈಗಲೇ ಒಂದು ನಿರ್ಧಾರಕ್ಕೆ ಬನ್ನಿ ಎಂದು ಸಲಹೆ ಕೊಟ್ಟರು.
ಲಾಲು ಪ್ರಸಾದ್ ಯಾದವ್ ಮಾತಿಗೆ ಖುದ್ದು ರಾಹುಲ್ ಗಾಂಧಿ ನಕ್ಕಿದ್ದಾರೆ. ಮದುವೆ ಮಾತಿನಿಂದ ವಿಪಕ್ಷಗಳ ನಾಯಕರು ನಗೆಗಡಲಲ್ಲಿ ತೇಲಾಡಿದ್ದಾರೆ. ಲಾಲು ಯಾದವ್ ಮಾತಿಗೆ ಧನಿಗೂಡಿಸಿದ್ದಾರೆ. ಇದೇ ವೇಳೆ ಹಲವರು ಇದೇ ಸಲಹೆಯನ್ನು ನೀಡಿದ್ದಾರೆ. ನಂತರ ಪ್ರತಿಕ್ರಿಯಿಸಿದ ಅವರು, ಈಗ ನೀವು ಹೇಳಿದ್ದೀರಿ. ಖಂಡಿತ ಅದು ಆಗುತ್ತದೆ ಎಂದು ತಿಳಿಸಿದರು.

ಇನ್ನು ಪಾಟ್ನಾದಲ್ಲಿ ಆಯೋಜಿಸಿದ್ದ ವಿಪಕ್ಷಗಳ ಸಭೆ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಈ ಸಭೆ ನಡೆದಿದೆ. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಬಿಜಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.ಮೊದಲ ವಿಪಕ್ಷ ಸಭೆ ಯಶಸ್ವಿಯಾಗಿದ್ದು, ಇದೀಗ ಹಿಮಾಚಲ ಪ್ರದೇಶದಲ್ಲಿ 2ನೇ ವಿಪಕ್ಷ ಸಭೆ ನಡೆಸಲು ನಿರ್ಧರಿಸಲಾಗಿದೆ.

 

ಇದನ್ನು ಓದಿ: Anna bhagya Scheme: ಗಂಟೆಗಟ್ಲೆ ಕಾದ್ರೂ ಒಂದು ಹಿಡಿ ಅಕ್ಕಿ ಕೊಡಲ್ಲ ಎಂದ ಕೇಂದ್ರ!! ಅನ್ನಭಾಗ್ಯದ ಅಕ್ಕಿಗಾಗಿ ಕೇಂದ್ರದ ಮೊರೆ ಹೋಗಿದ್ದ ರಾಜ್ಯ ಸರ್ಕಾರಕ್ಕೆ ಮತ್ತೆ ನಿರಾಸೆ!! 

Leave A Reply

Your email address will not be published.