Home News India’s Top Nicknames: ನೀವು ಯಾರನ್ನಾದರೂ ಅಡ್ಡ ಹೆಸರಿನಿಂದ ಕರೆಯುತ್ತೀರಾ? ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಅಡ್ಡ...

India’s Top Nicknames: ನೀವು ಯಾರನ್ನಾದರೂ ಅಡ್ಡ ಹೆಸರಿನಿಂದ ಕರೆಯುತ್ತೀರಾ? ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಅಡ್ಡ ಹೆಸರು ಯಾವುದು? ಇಲ್ಲಿದೆ ಕುತೂಹಲಭರಿತ ಮಾಹಿತಿ

India’s Top Nicknames
image source: Google play

Hindu neighbor gifts plot of land

Hindu neighbour gifts land to Muslim journalist

India’s Top Nicknames: ಕುಳ್ಳ, ಮಲ್ಲ, ದಡಿಯ ಅಂತಾ ಭಾರತದಲ್ಲಿ ಅಡ್ಡ ಹೆಸರುಗಳ ಉಪಯೋಗವೇ ಹೆಚ್ಚು. ಅಡ್ಡ ಹೆಸರು ಕೇವಲ ಲೇಬಲ್​ಗಳಾಗಿಲ್ಲ. ಇವುಗಳು ಒಬ್ಬ ವ್ಯಕ್ತಿಯ ವೈಯಕ್ತಿಕ ಗುರುತುಗಳನ್ನು ಹೇಳುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಇದೀಗಾ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಅಡ್ಡಹೆಸರುಗಳ (India’s Top Nicknames) ಪಟ್ಟಿಯನ್ನು ಸ್ನ್ಯಾಪ್‌ ಚಾಟ್ ಬಹಿರಂಗಪಡಿಸಿದೆ.

ಪ್ರತಿಯೊಬ್ಬರಿಗೂ ಮನೆಯಲ್ಲಿ ಅಥವಾ ಸ್ನೇಹಿತರು ಪ್ರೀತಿಯಿಂದ ಅಡ್ಡ ಹೆಸರು ಇಡುವುದು ಸರ್ವೇ ಸಾಮಾನ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ, ಅಡ್ಡಹೆಸರು ವ್ಯಕ್ತಿಯ ಅಧಿಕೃತ ಹೆಸರಿಗಿಂತ ಹೆಚ್ಚು ಜನಪ್ರಿಯವಾಗಿರುತ್ತದೆ. ಅಡ್ಡಹೆಸರುಗಳನ್ನು ನೀಡುವ ಕಲ್ಪನೆಯು ದೇಶದಲ್ಲಿ ಎಷ್ಟು ಸಾಮಾನ್ಯವಾಗಿದೆ ಎಂದರೆ ಅಡ್ಡಹೆಸರುಗಳ ಭಾರತೀಯ ಸಂಸ್ಕೃತಿಯ ಕುರಿತು Snapchat ಮತ್ತು YouGov ಇತ್ತೀಚಿನ ಸಂಶೋಧನೆಯೊಂದನ್ನು ನಡೆಸಿದೆ.

ಈ ಅಧ್ಯಯನದ ಪ್ರಕಾರ ಶೇಕಡಾ 96 ರಷ್ಟು ಭಾರತೀಯರು ತಮ್ಮ ಜೀವನದ ಒಂದು ಹಂತದಲ್ಲಿ ಅಡ್ಡಹೆಸರನ್ನು ಬಳಸಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಭಾರತದಲ್ಲಿನ ಐದು ಸಾಮಾನ್ಯ ಅಡ್ಡ ಹೆಸರುಗಳೆಂದರೆ ಸೋನು, ಬಾಬು, ಚೋಟು, ಅಣ್ಣು ಮತ್ತು ಚಿಂಟು ಎಂದು ಅಧ್ಯಯನವು ತಿಳಿಸಿದೆ.

ಇದರ ಹೊರತಾಗಿ ಪ್ರಾದೇಶಿಕ ಹೆಸರುಗಳೊಂದಿಗೆ ವಿವರಿಸುವುದಾದರೆ, ಉತ್ತರ ಭಾರತದಲ್ಲಿ, ಗೋಲು ಮತ್ತು ಸನ್ನಿ ಮತ್ತು ದಕ್ಷಿಣದಲ್ಲಿ ಅಮ್ಮು ಮತ್ತು ಮಚ್ಚಾ ವ್ಯಾಪಕವಾಗಿ ಜನಪ್ರಿಯವಾಗಿವೆ. ಪೂರ್ವ ಪ್ರದೇಶಗಳಲ್ಲಿ, ಶೋನಾ ಮತ್ತು ಮಿಶ್ತಿ, ಆದರೆ ಪಶ್ಚಿಮದವರು ಪಿಂಕಿ ಮತ್ತು ದಾದಾ ಹೆಸರುಗಳನ್ನು ಇಷ್ಟಪಡುತ್ತಾರೆ ಎಂದು ತಿಳಿದುಬಂದಿದೆ.

ಇನ್ನು ಸಮೀಕ್ಷೆಗೆ ಒಳಗಾದವರಲ್ಲಿ ಶೇಕಡಾ 60 ರಷ್ಟು ಜನರು ತಮ್ಮ ಅಡ್ಡಹೆಸರುಗಳನ್ನು ಬಾಲ್ಯದಲ್ಲಿ ಅಥವಾ ಶಾಲೆಯ ಸಮಯದಿಂದಲೂ ಬಳಸುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.

ಒಟ್ಟಿನಲ್ಲಿ ಅಡ್ಡ ಹೆಸರುಗಳ ಬಗ್ಗೆ ಬಹುತೇಕ ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದರೆ, ಮತ್ತೊಂದೆಡೆ ಕೇವಲ ಶೇ.15 ರಷ್ಟು ಜನರು ತಮ್ಮ ಅಡ್ಡ ಹೆಸರುಗಳನ್ನು ಸಾರ್ವಜನಿಕವಾಗಿ ಬಳಸಲು ಮುಜುಗರವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

 

ಇದನ್ನು ಓದಿ: Tamil actre Balambika: ‘ಆ ಮ್ಯಾಟರ್’ ನಲ್ಲಿ ಸ್ವಲ್ಪ ಹೊಂದಾಣಿಕೆ ಮಾಡ್ಕೊಂಡಿದ್ರೂ ವಿಜಯ್, ಪ್ರಶಾಂತ್‌ಗೆ ಹೀರೊಯಿನ್ ಆಗ್ತಿದ್ದೆ !! ಶಾಕಿಂಗ್ ಹೇಳಿಕೆ ಹರಿಬಿಟ್ಟ ತಮಿಳು ನಟಿ!