Home News Bear attack: ವೃದ್ಧರೋರ್ವರಿಗೆ ಕರಡಿ ದಾಳಿ! ಕಣ್ಣು ಕಳೆದುಕೊಂಡು ಕಿ.ಮೀ.ಗಟ್ಟಲೆ ನಡೆದುಕೊಂಡೇ ಬಂದ ವೃದ್ಧ!

Bear attack: ವೃದ್ಧರೋರ್ವರಿಗೆ ಕರಡಿ ದಾಳಿ! ಕಣ್ಣು ಕಳೆದುಕೊಂಡು ಕಿ.ಮೀ.ಗಟ್ಟಲೆ ನಡೆದುಕೊಂಡೇ ಬಂದ ವೃದ್ಧ!

Bear attack
Image source: Times Now

Hindu neighbor gifts plot of land

Hindu neighbour gifts land to Muslim journalist

Bear attack: ಉತ್ತರ ಕರ್ನಾಟಕದ ಜೋಯಿಡಾ ತಾಲೂಕಿನ ಜಗಲ್‌ಪೇಟ್ ವ್ಯಾಪ್ತಿಯ ತಿಂಬಾಲಿ ಗ್ರಾಮದಲ್ಲಿ 72 ವರ್ಷದ ವ್ಯಕ್ತಿಯೊಬ್ಬರು ಕರಡಿಯ(Bear attack)  ದಾಳಿಯಿಂದ ಒಂದು ಕಣ್ಣನ್ನು ಕಳೆದುಕೊಂಡ ಘಟನೆ ನಡೆದಿದೆ.

ಅಭಿವೃದ್ದಿ ನೆಪದಲ್ಲಿ ಇದ್ದ ಕಾಡನ್ನು ಸರ್ವನಾಶ ಮಾಡಿ ಪ್ರಾಣಿ ಪಕ್ಷಿಗಳಿಗೆ ಆಹಾರವಾಗಿದ್ದ ಮೇವಿಲ್ಲದೆ ಕಾಡಿನಿಂದ ನಾಡಿಗೆ ಪಯಣ ಬೆಳೆಸುವ ಆನೆ, ಮಂಗ ಬೆಳೆಗಳನ್ನು ಹಾಳು ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆ ನಾವೇ ಕಾರಣ ಎಂದರು ತಪ್ಪಾಗದು. ಹಸಿವಾದಾಗ ಆಹಾರ ಅರಸುತ್ತಾ ಬರುವ ಜೀವಿಗಳು ಅದಕ್ಕೆ ಅಡೆ ತಡೆಯಾದಾಗ ಆಕ್ರಮಣ ಧೋರಣೆ ತೋರುವುದು ಸಹಜ. ಅದೇ ರೀತಿ,

ಉತ್ತರ ಕರ್ನಾಟಕದ (Uttara Karnataka) ಜೋತ್ತ್ಟ್ ಜೋಯಿಡಾ ತಾಲೂಕಿನ ಜಗಲ್‌ಪೇಟ್ ವ್ಯಾಪ್ತಿಯ ತಿಂಬಾಲಿ ಗ್ರಾಮದಲ್ಲಿ 72 ವರ್ಷದ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ಮಾಡಿದ ಘಟನೆ ನಡೆದಿದೆ. ಜಗಲ್‌ಪೇಟೆ ಡಿಆರ್‌ಎಫ್‌ಒ ದೀಪಕ್ ಬಂಗೋಲೆ ಅವರ ಪ್ರಕಾರ ವಿಠ್ಠಲ್ ತಮ್ಮ ಮೊಮ್ಮಗನನ್ನು ಭೇಟಿ ಮಾಡಲು ತಿಂಬಳಿ ಗ್ರಾಮದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಮಧ್ಯಾಹ್ನ 3:30ರ ಸುಮಾರಿಗೆ ಕರಡಿ ದಾಳಿ ಮಾಡಿ ಇವರ ಒಂದು ಕಣ್ಣನ್ನು ಕಿತ್ತು ಹಾಕಿದೆಯಂತೆ.

ಮಾಲೋರ್ಗಿ ಗ್ರಾಮದ ನಿವಾಸಿಯಾಗಿರುವ ವಿಠ್ಠಲ್ ಸಾಳಕೆ ಎಂಬುವ ವ್ಯಕ್ತಿ ಸರಿ ಸುಮಾರು 20 ನಿಮಿಷಗಳ ಕಾಲ ಕರಡಿಯೊಂದಿಗೆ ಕಾದಾಟ ನಡೆಸಿದ್ದಲ್ಲದೆ, ಎರಡು-ಮೂರು ಕಿ.ಮೀ ವರೆಗೆ ಕಾಲ್ನಡಿಗೆಯಲ್ಲೇ ಸಂಬಂಧಿಕರ ಮನೆಗೆ ತೆರಳಿದ್ದಾರೆ. ವಿಠ್ಠಲ್ ಅವರ ತಲೆಗೆ ಗಾಯವಾಗಿದ್ದು, ಅವರ ಒಂದು ಕಣ್ಣನ್ನು ಕೂಡ ಕರಡಿ ಕಿತ್ತು ಹಾಕಿದೆ ಎನ್ನಲಾಗಿದೆ. ಆ ಬಳಿಕ, ವಿಠ್ಠಲ್ ಅವರನ್ನು ಆಂಬ್ಯುಲೆನ್ಸ್​​​ನಲ್ಲಿ ರಾಮನಗರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಈ ಸಂದರ್ಭ ಹೆಚ್ಚಿನ ಚಿಕಿತ್ಸೆಗಾಗಿ ಬಳಗಾವಿಯ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ. ವೈದ್ಯರು ಆಪರೇಷನ್ ಮಾಡುವಂತೆ ಸಲಹೆ ನೀಡಿರುವ ಹಿನ್ನೆಲೆ ಒಂದೆರಡು ದಿನಗಳಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದ್ದು, ಸದ್ಯ ವಿಠ್ಠಲ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

 

ಇದನ್ನು ಓದಿ: Actress Hansika Motwani: ಹನ್ಸಿಕಾ ಮೋಟ್ವಾನಿ ಇಡೀ ದೇಹಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದ ನೆಟ್ಟಿಗ ; ‘ಬಿಂದಾಸ್’ ಹುಡುಗಿ ನೀಡಿದ್ಲು ಬಿಂದಾಸ್ ಉತ್ತರ !