Home News Rakesh Adiga: ನಟಿ ಅಮೂಲ್ಯ ಜೊತೆಗಿನ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ರಾಕೇಶ್ ಅಡಿಗ...

Rakesh Adiga: ನಟಿ ಅಮೂಲ್ಯ ಜೊತೆಗಿನ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ರಾಕೇಶ್ ಅಡಿಗ ; ಏನಂದ್ರು ಬಿಗ್ ಬಾಸ್ ರನ್ನರ್ !

Rakesh Adiga
image source: Saaksha tv

Hindu neighbor gifts plot of land

Hindu neighbour gifts land to Muslim journalist

Rakesh Adiga : ರಾಕೇಶ್ ಅಡಿಗ (Rakesh adiga) ‘ಬಿಗ್ ಬಾಸ್ ಕನ್ನಡ ಸೀಸನ್ 9’ (biggboss season9 kannada) ರಲ್ಲಿ ತಮ್ಮ ಒಳ್ಳೆಯ ವ್ಯಕ್ತಿತ್ವ, ಅತ್ಯುತ್ತಮ ಟಾಸ್ಕ್ ಆಡುವಿಕೆಯಿಂದ ಜನರ ಮನಗೆದ್ದಿದ್ದರು. ಇಲ್ಲಿ ಹಲವು ಘಟಾನುಘಟಿ ಸ್ಪರ್ಧಿಗಳ ಜೊತೆಗೆ ಪೈಪೋಟಿ ನಡೆಸಿ, ತಮ್ಮ ಶಾಂತ ಸ್ವಭಾವದಿಂದ ವೀಕ್ಷಕರ ಮನಗೆದ್ದಿದ್ದ ರಾಕೇಶ್ ಅಡಿಗ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದರು.

ಎಲ್ಲರ ಜೊತೆ ಸ್ನೇಹದಿಂದ ಬೆರೆಯುತ್ತಿದ್ದ ರಾಕೇಶ್ ಅಡಿಗ ದೊಡ್ಮನೆಯಲ್ಲಿ ನಟಿ ಅಮೂಲ್ಯ ಗೌಡ (Amulya gowda) ಜೊತೆಗೆ ವಿಶೇಷವಾದ ಸ್ನೇಹ ಹೊಂದಿದ್ದರು. ಈ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೂ ಕೂಡ ಅಮೂಲ್ಯ ಗೌಡ ಹಾಗೂ ರಾಕೇಶ್ ಸ್ನೇಹ ಹಾಗೇ ಇತ್ತು. ಇಬ್ಬರು ಜೊತೆಯಾಗಿ ಕಾಣಿಸಿಕೊಂಡ ಫೋಟೊ ಕೂಡ ಇತ್ತೀಚೆಗೆ ಸಂಚಲನ ಮೂಡಿಸಿದೆ. ಈ ಜನಮೆಚ್ಚಿದ ಜೋಡಿ ಮದುವೆಯಾಗಲಿ ಎಂದು ಹಲವರು ಬಯಸುತ್ತಿದ್ದರು. ಈ ವಿಚಾರವಾಗಿ ಭಾರೀ ಸುದ್ಧಿ ಹರಿದಾಡಿತ್ತು. ಸದ್ಯ ಅಮ್ಮು ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ನಡುವೆ ಅಂತಹದ್ದೂ ಏನಿಲ್ಲ. ನಾವಿಬ್ಬರು ಒಳ್ಳೆಯ ಫ್ರೆಂಡ್ಸ್ ಎಂದು ರಾಕೇಶ್ ಹೇಳಿದ್ದಾರೆ. ನಮ್ಮಿಬ್ಬರ ಪ್ಯಾನ್ ಪೇಜ್ ಆಗುತ್ತೆ. ಜೋಡಿ ಅಂತಾನೂ ಟ್ರೋಲ್ ಮಾಡ್ತಾರೆ ಅಂತ ಐಡಿಯಾನೇ ಇರಲ್ಲಿಲ್ಲ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಾಗಲೇ ಇದರ ಬಗ್ಗೆ ಗೊತ್ತಾಗಿದ್ದು. ನಮ್ಮನ್ನ ನೋಡಿ ಇವರು ಮದುವೆಯಾದ್ರೆ ಚೆನ್ನಾಗಿರುತ್ತೆ ಅಂತಾ ಅಭಿಮಾನಿಗಳಿಗೆ ಅನಿಸುವುದು ಸಹಜ. ಆದರೆ ನಮಗೆ ಆ ಭಾವನೆ ಇಲ್ಲಾ ಎಂದು ರಾಕೇಶ್ ಅಮೂಲ್ಯ ಜೊತೆಗಿನ ಮದುವೆಯ ಗಾಸಿಪ್ ಗೆ ತೆರೆ ಎಳೆದಿದ್ದಾರೆ.

ಅಂದಹಾಗೆ ರಾಕೇಶ್ ಅಡಿಗ (Rakesh Adiga) 2009 ರಲ್ಲಿ ತೆರೆಗೆ ಬಂದ ‘ಜೋಶ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಜೋಶ್ ಸಿನಿಮಾದಲ್ಲಿ ಬಣ್ಣ ಹಚ್ಚಿದ ಬಳಿಕ ‘ಮನಸಾಲಜಿ’, ‘ಅಲೆಮಾರಿ’, ‘ಯಾರೇ ಕೂಗಾಡಲಿ’, ‘ನಂದ ಗೋಕುಲ’, ‘ಮಂದಹಾಸ’, ‘ಕೋಟಿಗೊಂದ್ ಲವ್ ಸ್ಟೋರಿ’, ‘ಪ್ರೀತಿಯಿಂದ’, ‘ಡವ್’, ‘ಮಂಡ್ಯ ಟು ಮುಂಬೈ’ ಮುಂತಾದ ಸಿನಿಮಾಗಳಲ್ಲಿ ರಾಕೇಶ್ ಅಡಿಗ ತೆರೆ ಮೇಲೆ ಮಿಂಚಿದ್ದಾರೆ.

2019 ರ ಬಳಿಕ ಸಿನಿಮಾಗಳಿಂದ ಕೊಂಚ ಬ್ರೇಕ್ ಪಡೆದುಕೊಂಡ ರಾಕೇಶ್ ಅಡಿಗ 2022ರಲ್ಲಿ ‘ಬಿಗ್ ಬಾಸ್ ಕನ್ನಡ ಓಟಿಟಿ 1’(BBK OTT 1 ) ಕಾರ್ಯಕ್ರಮಕ್ಕೆ ಲಗ್ಗೆ ಇಟ್ಟು, ಇದರಲ್ಲಿ ಟಾಪ್ 4 ಹಂತ ತಲುಪಿ, ‘ಬಿಗ್ ಬಾಸ್ ಕನ್ನಡ 9’(BIGG BOSS Season 9) ಕಾರ್ಯಕ್ರಮದಲ್ಲಿ ಸೀನಿಯರ್ ಆಗಿ ಭಾಗಿಯಾಗಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದರು.

ಸದ್ಯ ರಾಕೇಶ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ನೈಟ್ ಔಟ್’ (night out) ಚಿತ್ರಕ್ಕೆ ರಾಕೇಶ್ ಅಡಿಗ ಆಕ್ಷನ್ ಕಟ್ ಹೇಳಿದ್ದರು. ಅಲ್ಲದೆ, ನಟ ರಾಕೇಶ್ ಅಡಿಗ ಹೊಸ ಸಿನಿಮಾ ‘ಲೈಫ್ ಆಫ್ ಎ ಕಾಕ್ರೋಚ್’ ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ‘ಜೋಶ್ 2’ (Josh -2) ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳ ಮಾತುಕತೆ ನಡೆಯುತ್ತಿದೆ.

 

ಇದನ್ನು ಓದಿ: Chapati in Pressure cooker: ಚಪಾತಿ ಲಟ್ಟಿಸಿ ಸಾಕಾಯ್ತೇ? ಇಲ್ಲಿದೆ ನೋಡಿ ಹೊಸ ವಿಧಾನದಲ್ಲಿ ಚಪಾತಿ ತಯಾರಿಸೋ ವಿಧಾನ! ಕುಕ್ಕರ್‌ ಚಪಾತಿ!