IT Raid: ಮಾಲಿವುಡ್ ನಟಿ ಪರ್ಲಿ ಮಾನಿ ಸೇರಿದಂತೆ ಫೇಮಸ್ ಯೂಟೂಬರ್ಸ್ ಮನೆಗೆ ಐಟಿ ದಾಳಿ !

IT Raid on the home of famous YouTubers including Mollywood actress Pearle Maaney

Pearle Maaney: ಕೇರಳದ ಪ್ರಸಿದ್ಧ ಯೂಟ್ಯೂಬರ್ಸ್ ಮನೆ ಮೇಲೆ ಜೂನ್ 22ರಂದು ಐಟಿ ದಾಳಿ ನಡೆದಿದೆ. ಮಾಲಿವುಡ್ ನಟಿ ಪರ್ಲಿ ಮಾನಿ (Pearle Maaney) ಸೇರಿದಂತೆ ಕೇರಳದ ಹಲವಾರು ಫೇಮಸ್ ಯೂಟೂಬರ್ಸ್ ಮನೆಯಲ್ಲಿ ಐಟಿ ದಾಳಿಯಾಗಿದೆ (IT Raid).

ಐಟಿ ಅಧಿಕಾರಿಗಳು ಕೇರಳದ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ತ್ರಿಶೂರ್, ಎರ್ನಾಕುಳಂ, ಆಲಪ್ಪುಳ, ಕೊಟ್ಟಾಯಂ, ಪತ್ತನಂತಿಟ್ಟ ಹಾಗೂ ಕಾಸರಗೋಡಿನ ಹಲವೆಡೆ ಎರ್ನಾಕುಳಂನ ಐಟಿ ವಿಭಾಗ ದಾಳಿ ನಡೆಸಿದೆ. ಕೇರಳದ ಪ್ರಸಿದ್ಧ ನಿರೂಪಕಿ, ನಟಿ ಹಾಗೂ ಕಂಟೆಂಟ್ ಕ್ರಿಯೇಟರ್ ಆಗಿರುವ ಪರ್ಲಿ ಮಾನಿ ಮನೆಯ ಮೇಲೂ ಐಟಿ ದಾಳಿಯಾಗಿದೆ.

ಸದ್ಯ ಯೂಟ್ಯೂಬರ್ಸ್ ಹಾಗೂ ಬ್ಲಾಗರ್ಸ್ ಅವರ ವಾರ್ಷಿಕ ಆದಾಯ ಸುಮಾರು 20 ಲಕ್ಷಕ್ಕಿಂತ ಅಧಿಕ ಇದ್ದರೆ, ಅವರು ಜಿಎಸ್​ಟಿ ಕಾಯಿದೆ ಅಡಿ ದಾಖಲೆ ಮಾಡಿಕೊಳ್ಳುವುದು ಅಗತ್ಯವಾಗಿರುತ್ತದೆ. ಆದರೆ, ಇವರಿಗೆ ಶೇಕಡಾ 18ರಷ್ಟು ಜಿಎಸ್​ಟಿ ಇರುತ್ತದೆ. ಐಟಿ ಲೆಕ್ಕಾಚಾರದಂತೆ ಸುಮಾರು 1-2 ಕೋಟಿ ಬರಲಿದೆ. ಕೆಲವು ಜನರು ಪೇಯ್ಡ್ ಪ್ರಮೋಷನ್ ಮೂಲಕವೂ ಸಂಪಾದಿಸುತ್ತಾರೆ. ಇನ್ನೂ ಕೆಲವು ಬ್ಲಾಗರ್ಸ್ ತಾವು ಪ್ರತಿ ತಿಂಗಳು ಒಂದೇ ಮೊತ್ತವನ್ನು ಸಂಪಾದಿಸುವುದಿಲ್ಲ ಎಂದಿದ್ದಾರೆ.

ಪರ್ಲಿ ಮಾನಿ ಅವರು 2013 ರಲ್ಲಿ ನೀಲಾಕಾಶಂ ಪಚ್ಚಕದ ಚುವನ್ನ ಭೂಮಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ನಂತರ ಅವರು ದಿ ಲಾಸ್ಟ್ ಸಪ್ಪ‌ (2014), ಲೋಹನ್ (2015) ಮತ್ತು ಕಲ್ಯಾಣ ವೈಭೋಗಮೆ (2015) ಚಿತ್ರಗಳಲ್ಲಿ ಕಾಣಿಸಿಕೊಂಡರು. ಡಬಲ್ ಬ್ಯಾರೆಲ್(2015), ಪ್ರೇತಂ (2016), ಹಾಗೂ ಹಿಂದಿ ಸಿನಿಮಾ ಲೂಡೋದಲ್ಲಿಯೂ ನಟಿಸಿದ್ದಾರೆ. ಅಲ್ಲದೆ, ಪರ್ಲಿ ಮಾನಿ ಅವರು ಹಲವಾರು ರಿಯಾಲಿಟಿ ಶೋಗಳನ್ನು ಟಿವಿ ಪ್ರೋಗ್ರಾಮ್​ಗಳನ್ನು ನಡೆಸಿಕೊಡುತ್ತಾರೆ. ಅವರು ಬಿಗ್​​ಬಾಸ್ ಮೊದಲ ಸೀಸನ್​ನ ರನ್ನರ್ ಅಪ್ ಕೂಡಾ ಆಗಿದ್ದಾರೆ.

 

ಇದನ್ನು ಓದಿ: Helmet: ಜೀವ ರಕ್ಷಣೆಯ ಹೆಲ್ಮೆಟ್ ಖರೀದಿಸುವಾಗ ಈ ವಿಚಾರ ಗಮನದಲ್ಲಿರಲಿ ! 

Leave A Reply

Your email address will not be published.