Ramcharan-Venu swamy: ರಾಮ್‌ ಚರಣ್‌ಗೆ ಮುಂದೆ ಮತ್ತೊಂದು ಮಗು ಆಗೋದಿಲ್ಲ…!! ಶಾಕಿಂಗ್ ಭವಿಷ್ಯ ನುಡಿದ ವೇಣು ಸ್ವಾಮಿ!!

Venu Swamy predicts that Ramcharan will not have another child

Ramcharan-Venu swamy: ಟಾಲಿವುಡ್​ನ(Tollywood) ಮೆಗಾ ಕುಟಂಬಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಸೂಪರ್​ಸ್ಟಾರ್​ ರಾಮ್​ಚರಣ್​(Super star ramcharan) ಅವರ ಪತ್ನಿ ಉಪಾಸನಾ ಅವರು ಇಂದು ಮೊನ್ನೆ ತಾನೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮೆಗಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಆದರೆ ಈ ಸಂತಸದ ನಡುವೆಯೇ ಮೆಗಾ ಕುಟುಂಬಕ್ಕೆ ಶಾಕಿಂಗ್ ನ್ಯೂಸ್ ಸಿಕ್ಕಿದ್ದು, ಈ ಬಗ್ಗೆ ವೇಣು ಸ್ವಾಮಿ(Ramcharan-Venu swamy) ಅವರು ಭವಿಷ್ಯ ನುಡಿದಿದ್ದಾರೆ.

 

ಹೌದು, ವೇಣು ಸ್ವಾಮಿ ಖ್ಯಾತ ಸೆಲೆಬ್ರಿಟಿಗಳ(Celebrity) ಮದುವೆ, ವಿಚ್ಛೇದನಗಳ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿಯ ಬಗ್ಗೆ ಗೊತ್ತಿರಬಹುದು. ಇತ್ತೀಚೆಗೆ ರಾಮ್‌ಚರಣ್‌ ಹಾಗೂ ಉಪಾಸನಾ(Ram Charan-Upasana) ದಂಪತಿಗಳಿಗೆ ಮಗಳು ಜನಿಸಿದ್ದು, ಈಗ ಈ ಜ್ಯೋತಿಷಿ ಮೆಗಾಸ್ಟಾರ್‌ ಮೊಮ್ಮಗಳ ಬಗ್ಗೆ ಆಕೆಯ ಜನನದ ಪ್ರಕಾರ ಭವಿಷ್ಯ ನುಡಿದಿದ್ದು, ಇದರ ವೀಡಿಯೋ ಕೂಡ ವೈರಲ್‌ ಆಗಿತ್ತು. ಈ ಬೆನ್ನಲ್ಲೇ ರಾಮ್ ಚರಣ್ ಕುರಿತು ವೇಣು ಸ್ವಾಮಿಯವರು, ಇನ್ನು ಮುಂದೆ ರಾಮ್ ಚರಣ್ ಗೆ ಮಕ್ಕಳಾಗುವುದಿಲ್ಲ ಎಂದು ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮೆಗಾ ಕುಟುಂಬಕ್ಕೆ ರಾಜಕುಮಾರಿಯ ಆಗಮನವಾಗಿದೆ. ಮದುವೆ ಆಗಿ 11 ವರ್ಷಗಳ ಬಳಿಕ ರಾಮ್ ಚರಣ್ ದಂಪತಿಗೆ ಹೆಣ್ಣು ಮಗುವಿನ ಜನಿಸಿದ್ದಳು. ಜ್ಯೋತಿಷಇ ವೇಣು ಸ್ವಾಮಿ(Venu swamy) ಈ ಮಗುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಮಗುನಿನ ಜನನದ ಸಮಯ ಅದ್ಭುತವಾಗಿದ್ದು, ಜಾತಕದಲ್ಲಿ ರಾಜಯೋಗವಿದೆ ಎಂದು ಹೇಳಿದ್ದಾರೆ. ಆದರೆ ಈ ಬೆನ್ನಲ್ಲೇ ಮುಂದೆ ರಾಮ್ ಚರಣ್ ಗೆ ಮತ್ತೆ ಮಕ್ಕಳಾಗುವುದಿಲ್ಲ ಎಂದು ಭವಿಷ್ಯ ನುಡಿದು ಅಚ್ಚರಿ ಮೂಡಿಸಿದ್ದಾರೆ. ಆದರೆ ಯಾವ ಕಾರಣಕ್ಕಾಗಿ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಮಂಗಳವಾರ ಬೆಳಗಿನ ಜಾವ ಸುಮಾರು 1.46ಕ್ಕೆ ರಾಮ್ ಚರಣ್ ದಂಪತಿಗೆ ಹೆಣ್ಣು ಮಗು ಜನಿಸಿದ್ದಳು. ಈ ಮೂಲಕ ಮೆಗಾ ಕುಟುಂಬಕ್ಕೆ ವಾರಸುದಾರಳು ಬಂದಿದ್ದಾಳೆ ಎಂದು ಜ್ಯೋತಿಷಿ ವೇಣುಸ್ವಾಮಿ ಹೇಳಿದ್ದಾರೆ. ಪುನರ್ವಸು ನಕ್ಷತ್ರ, ಮಿಥುನ ರಾಶಿಯಲ್ಲಿ ಜನಿಸಿದ್ದು, ಮಗಳಿಂದ ಮೆಗಾ ಕುಟುಂಬಕ್ಕೆ ರಾಜಯೋಗ ಬರುತ್ತೆ. ಆದರೆ, ರಾಮ್ ಚರಣ್‌ಗೆ ಇನ್ನೊಂದು ಮಗು ಆಗುವುದಿಲ್ಲ ಎಂದು ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ !!.

ಇನ್ನು ರಾಮ್ ಚರಣ್ ಮಗಳ ಬಗ್ಗೆ ಜ್ಯೋತಿಷಿ ವೇಣುಸ್ವಾಮಿ ಪಾಸಿಟಿವ್ ಆಗಿ ಭವಿಷ್ಯ ನುಡಿದಿದ್ದಾರೆ. ಭವಿಷ್ಯದಲ್ಲಿ ಉನ್ನತ ಮಟ್ಟಕ್ಕೆ ಏರುವ ಎಲ್ಲಾ ಸಾಧ್ಯತೆಗಳೂ ಇವೆ. ಈ ಹೆಣ್ಣು ಮಗು ಚಿರಂಜೀವಿ ಕುಟುಂಬಕ್ಕೆ ಕೀರ್ತಿ ತರುತ್ತಾಳೆ ಎಂದು ಹೇಳಿದ್ದಾರೆ. ಮೆಗಾ ಫ್ಯಾಮಿಲಿಗೆ ಮೊಮ್ಮಗಳ ಆಗಮನದಿಂದ ಚಿರಂಜೀವಿ ಫುಲ್ ಖುಷಿಯಾಗಿದ್ದಾರೆ. “ಲಿಟಲ್ ಮೆಗಾ ಪ್ರಿನ್ಸೆಸ್‌ಗೆ ಸ್ವಾಗತ” ಎಂದು ಮೆಗಾಸ್ಟಾರ್(Mega star) ಟ್ವೀಟ್ ಮಾಡಿದ್ದರು. ಪೋಷಕರಾಗಿದ್ದಕ್ಕೆ ರಾಮ್ ಚರಣ್ ಹಾಗೂ ಉಪಾಸನಾ ಇಬ್ಬರೂ ಸಂಭ್ರಮದಲ್ಲಿ ಮುಳುಗಿದ್ದಾರೆ.

ಇಷ್ಟೇ ಅಲ್ಲದೆ ಈ ಜ್ಯೋತಿಷಿ ನುಡಿದ ಭವಿಷ್ಯ ತೆಲುಗು ತಾರೆಯರ ಜೀವನದಲ್ಲಿ ನಿಜವಾಗಿದೆ. ಹೀಗಾಗಿ ವೇಣು ಸ್ವಾಮಿ ಏನಾದರೂ ಭವಿಷ್ಯ ನುಡಿದಿದ್ದಾರೆ ಅಂದ್ರೆ, ಅದು ನಿಜವಾಗುತ್ತೆ ಎಂದೇ ಭಾವಿಸಲಾಗುತ್ತೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್ ಒಂದರ ಸಂದರ್ಶನದಲ್ಲಿ ವೇಣುಸ್ವಾಮಿ ‘ಆದಿಪುರುಷ್'(Adipurush) ಸಿನಿಮಾದ ಬಗ್ಗೆ ಭವಿಷ್ಯ ನುಡಿದಿದ್ದರು. ಪ್ರಭಾಸ್ ಜಾತಕದ ಪ್ರಕಾರ, ‘ಆದಿಪುರುಷ್’ ಅದ್ಭುತ ಯಶಸ್ಸು ಸಿಗುವುದಿಲ್ಲವೆಂದು ಹೇಳಿದ್ದರು. ಅದು ಕೂಡ ಈಗ ನಿಜವಾಗಿದೆ.

ಅಂದಹಾಗೆ ರಾಮ್‌ ಚರಣ್‌ ಹಾಗೂ ಉಪಾಸನಾ ಇಬ್ಬರದ್ದೂ ಪ್ರೇಮ ವಿವಾಹ. ಜೂನ್‌ 2012 ರಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಆದಾಗಿನಿಂದ, ಪ್ರೆಗ್ನೆಸಿ ಬಗ್ಗೆಯೇ ಎಲ್ಲರೂ ಕೇಳುತ್ತಿದ್ದರು. ಮದುವೆಯಾಗಿ ಇಷ್ಟ ವರ್ಷಗಳಾಯ್ತು ಇನ್ನೂ ನೀವು ಗುಡ್‌ ನ್ಯೂಸ್‌ ಕೊಟ್ಟಿಲ್ಲ ಎಂದು ಕೆಲವರು ಕೇಳಿದರೆ, ಬೇರೆ ಸೆಲೆಬ್ರಿಟಿಗಳು ಪ್ರೆಗ್ನೆನ್ಸಿ ಅನೌನ್ಸ್‌ ಮಾಡಿದಾಗ, ನಿಮ್ಮದು ಯಾವಾಗ ಎಂದು ಕೇಳುತ್ತಲೇ ಇದ್ದರು. ಜನರ ಪ್ರಶ್ನೆಗಳಿಗೆ ಬೇಸತ್ತಿದ್ದ ಉಪಾಸನಾ, ”ಮಕ್ಕಳು ಮಾಡಿಕೊಳ್ಳುವುದು, ಬಿಡುವುದು ನಮ್ಮ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದ್ದು. ಜನರು ಪದೇ ಪದೆ ಇಂತಹ ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ. ಒಂದು ವೇಳೆ ಆ ದಿನ ಎದುರಾದಾಗ ನಿಮ್ಮೆಲ್ಲರಿಗೂ ತಿಳಿಸುತ್ತೇನೆ ಎಂದಿದ್ದರು.

ರಾಮ್‌ಚರಣ್‌ ಸಿನಿಮಾಗಳ ವಿಚಾರಕ್ಕೆ ಬರುವುದಾದರೆ, ಇನ್ನೂ ಹೆಸರಿಡದ ತೆಲುಗು ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಇದು ರಾಮ್‌ ಚರಣ್‌ ಅಭಿನಯದ 15ನೇ ಸಿನಿಮಾ. ಜೊತೆಗೆ ಹಿಂದಿ(Hindi) ಚಿತ್ರವೊಂದರಲ್ಲಿ ಅತಿಥಿ ಪಾತ್ರದಲ್ಲಿ ರಾಮ್‌ಚರಣ್‌ ನಟಿಸುತ್ತಿದ್ದಾರೆ.

 

ಇದನ್ನು ಓದಿ: Alcohol: 4 ನೈಂಟಿ ತರುತ್ತೇನೆ ಎಂದವನ ಪತ್ತೆಯಿಲ್ಲ! 4 ನೈಂಟಿಯಲ್ಲಿ ಎರಡು ನೈಂಟಿ ಮಿಸ್ಸಿಂಗ್! ಕೆರಳಿದ ನಾರಿಯರ ಗುಂಪು!ನಂತರ ನಡೆದದ್ದೇನು? 

Leave A Reply

Your email address will not be published.