Mumbai: ಅಮುಲ್ ಬಾಲಕಿಯ ಸೃಷ್ಟಿಕರ್ತ ಸಿಲ್ವೆಸ್ಟರ್ ಡಕುನ್ಹಾ ನಿಧನ!

Mumbai Sylvester Dacunha, the creator of Amul girl has passed away

Mumbai: ಮುಂಬೈ: ಅಮುಲ್ ಹಾಲಿನ ಉತ್ಪನ್ನ ಕಂಡಾಗ ಮೊದಲು ನಮ್ಮ ಕಣ್ಣ ಮುಂದೆ ಅಮುಲ್ ಬೇಬಿಯ ಚಿತ್ರ ನೆನಪಿಗೆ ಬರುತ್ತದೆ. ಆದರೆ, ಈ ಅಮುಲ್‌ನ ವಿಶಿಷ್ಟ ಬಾಲಕಿಯ ಅಭಿಯಾನದ ಹಿಂದೆ ಇದ್ದ ಖ್ಯಾತ ಕಲಾವಿದ ಹಾಗೂ ಜಾಹೀರಾತು ಉದ್ಯಮದ ದಂತಕಥೆ ಸಿಲ್ವೆಸ್ಟರ್ ಡಕುನ್ಹಾ (Sylvester daCunha) ಮಂಗಳವಾರ ಮುಂಬೈನಲ್ಲಿ (Mumbai) ನಿಧನರಾಗಿದ್ದಾರೆ.

 

1966ರಲ್ಲಿ ಕಲಾವಿದ ಸಿಲ್ವೆಸ್ಟರ್ ಡಕುನ್ಹಾ ಅವರು ತಮ್ಮ ಪತ್ನಿ ನಿಶಾರೊಂದಿಗೆ ಅಮುಲ್‌ಗಾಗಿ ಪ್ರಖ್ಯಾತ ‘Utterly Butterly’ ಅಭಿಯಾನಕ್ಕೆ ಚಾಲನೆ ನೀಡಿದರು. ಆ ಬಳಿಕ ಅದು ಪ್ರಪಂಚದಾದ್ಯಂತ ಮುದ್ದಾದ ‘ಅಮುಲ್ ಬಾಲಕಿ’ಯಾಗಿ ಪರಿಚಯ ಪಡೆದುಕೊಂಡಿತು. ಈ ಅಭಿಯಾನ ಈಗಲೂ ಕೂಡ ಜನರ ಮನದಲ್ಲಿ ವಿಶೇಷ ಸ್ಥಾನ ಪಡೆದಿದೆ.

ಅಮುಲ್ ಬ್ಯಾಂಡ್‌ನ ಮಾಲಕತ್ವ ಹೊಂದಿರುವ ಗುಜರಾತ್ ಸಹಕಾರ ಹಾಲು ಮಾರುಕಟ್ಟೆ ಮಹಾ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ರಾ, ಡಕುನ್ಹಾರ ನಿಧನದ ಸುದ್ದಿಯನ್ನು ದೃಢಪಡಿಸಿದ್ದಾರೆ. “1960ರಿಂದ ಅಮುಲ್‌ನೊಂದಿಗೆ ಸಹಭಾಗಿತ್ವ ಹೊಂದಿದ್ದು ಮಾತ್ರವಲ್ಲದೇ, ಡಕುನ್ಹಾ ಕಮ್ಯುನಿಕೇಶನ್ಸ್‌ನ ಅಧ್ಯಕ್ಷ ಹಾಗೂ ಭಾರತೀಯ ಜಾಹೀರಾತು ಉದ್ಯಮದ ದಂತಕತೆಯಾಗಿದ್ದಂತಹ ಶ್ರೀ ಸಿಲ್ವೆಸ್ಟರ್ ಡಕುನ್ಹಾ ಅವರು ಕಳೆದ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಲು ವಿಷಾದವಾಗುತ್ತಿದೆ. ಅವರ ದುಃಖಕರ ಸಾವಿನ ಸಂತಾಪದಲ್ಲಿ ಅಮುಲ್ ಕುಟುಂಬವೂ ಭಾಗಿಯಾಗುತ್ತದೆ’ ಎಂದು ಟ್ವಿಟ್ ಮಾಡಿದ್ದಾರೆ.

ಡಕುನ್ಹಾರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿರುವ ಅಮುಲ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಭಾರತೀಯ ಹೈಸ್ಕೋದ್ಯಮ ಒಕ್ಕೂಟದ ಹಾಲಿ ಅಧ್ಯಕ್ಷ ಆರ್.ಎಸ್.ಸೋಧಿ, ಅಮುಲ್ ಬಾಲಕಿ ಅಳುತ್ತಿರುವ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

 

ಇದನ್ನು ಓದಿ: Dr. Pramod Sawant: ರಾಜ್ಯದ ಈ ಎಲ್ಲಾ ಶಾಲೆಗಳಲ್ಲಿ ಇಂಟರ್ನೆಟ್ ಸೇವೆ ಪ್ರಾರಂಭ!

Leave A Reply

Your email address will not be published.