Private House: ವಿಶ್ವದ ಅತಿ ದೊಡ್ಡ ಖಾಸಗಿ ನಿವಾಸ ಅಂಬಾನಿ ಮನೆ ಅಲ್ಲ! ಮತ್ಯಾರದು?

Latest national news largest private residence in world its in India but not Mukesh Ambani Neeta Ambani rupees 15000 crore antilia

Private House: ಭಾರತ ದೇಶದಲ್ಲಿ ಹಳೆ ಕಾಲದ ವೈಭವದಿಂದ ಕೂಡಿರುವ ದೊಡ್ಡ ದೊಡ್ಡ ಅರಮನೆಗಳಿವೆ. ಅಂತೆಯೇ ಕೆಲವು ಶ್ರೀಮಂತ ಉದ್ಯಮಿಗಳು (Richest Businessmen) ಸಹ ಇದೇ ರೀತಿಯ ವೈಭವದಿಂದ ಕೂಡಿದ ಅರಮನೆಯಂತಿರುವ ಮನೆಗಳನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಮುಖೇಶ್ ಮತ್ತು ನೀತಾ ಅಂಬಾನಿ (Mukesh Ambani) ಅವರ ಒಡೆತನದ ಆಂಟಿಲಿಯಾ ಐಷಾರಾಮಿ ಮನೆ ದಕ್ಷಿಣ ಮುಂಬೈನ ಅಲ್ಟಾಮೌಂಟ್ ರಸ್ತೆಯಲ್ಲಿರುವ ಗಗನಚುಂಬಿರುವ ಕಟ್ಟಡವಾಗಿದ್ದು, ಇದರ ಮೌಲ್ಯ 15,000 ಕೋಟಿ ರೂಪಾಯಿ ಅಂತ ಹೇಳಲಾಗುತ್ತಿದೆ.

ಈ ಕಟ್ಟಡವು 27 ಮಹಡಿಗಳನ್ನು ಹೊಂದಿದ್ದು, ಇದು ಸರಾಸರಿ 60 ಅಂತಸ್ತಿನ ಕಟ್ಟಡದಷ್ಟು ಎತ್ತರವಾಗಿದೆ. ಅನೇಕರು ಈ ಕಟ್ಟಡವೇ ಭಾರತದ ಅತೀ ದೊಡ್ಡ ಕಟ್ಟಡ ಅಂತ ತಿಳಿದುಕೊಂಡಿರಬಹುದು. ಆದರೆ ಭಾರತದ ಅತಿದೊಡ್ಡ ಖಾಸಗಿ ನಿವಾಸ ಬೇರೆನೆ ಇದೆಯಂತೆ. ಹೌದು, ಲಕ್ಷ್ಮಿ ವಿಲಾಸ್ ಅರಮನೆ ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಂತೆ.

ಬರೋಡಾದ ಗಾಯಕ್ವಾಡ್ ಒಡೆತನದ ಲಕ್ಷ್ಮಿ ವಿಲಾಸ್ ಅರಮನೆ ಭಾರತ ಅಷ್ಟೇ ಅಲ್ಲದೆ ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಾಗಿದೆಯಂತೆ. ಈ ಐಷಾರಾಮಿ ಅರಮನೆಯನ್ನು ಮಹಾರಾಜ ಮೂರನೇ ಸಯಾಜಿರಾವ್ ಗಾಯಕ್ವಾಡ್ 1890 ರಲ್ಲಿ ನಿರ್ಮಿಸಿದ್ದಾರೆ. ಆ ಸಮಯದಲ್ಲಿ, ಈ ಅರಮನೆಯನ್ನು ನಿರ್ಮಿಸಲು ಸುಮಾರು ಜಿಬಿಪಿ 180,000 ವೆಚ್ಚವಾಗಿತ್ತಂತೆ. ವಾಸ್ತವವಾಗಿ, ಲಕ್ಷ್ಮಿ ವಿಲಾಸ್ ಅರಮನೆ ಬಕಿಂಗ್‌ಹ್ಯಾಮ್ ಅರಮನೆಗಿಂತ ನಾಲ್ಕು ಪಟ್ಟು ದೊಡ್ಡದಾಗಿರುವುದರಿಂದ ಇದು ವಿಶ್ವದ ಅತಿದೊಡ್ಡ ಖಾಸಗಿ ನಿವಾಸವಾಗಿದೆಯಂತೆ.

ಮಾಹಿತಿ ಪ್ರಕಾರ, ಲಕ್ಷ್ಮಿ ವಿಲಾಸ್ ಅರಮನೆ 3,04,92,000 ಚದರ ಅಡಿ ವಿಸ್ತೀರ್ಣದಲ್ಲಿದೆ. ಮತ್ತೊಂದೆಡೆ, ಬಕಿಂಗ್‌ಹ್ಯಾಮ್ ಅರಮನೆ 828,821 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದರೆ, ಮುಖೇಶ್ ಅಂಬಾನಿಯ ಆಂಟಿಲಿಯಾ 48,780 ಚದರ ಅಡಿ ಪ್ರದೇಶದಲ್ಲಿ ವ್ಯಾಪಿಸಿದೆ. ಲಕ್ಷ್ಮಿ ವಿಲಾಸ್ ಅರಮನೆಯಲ್ಲಿ 170 ಕ್ಕೂ ಹೆಚ್ಚು ಕೊಠಡಿಗಳಿವೆ.

ಲಕ್ಷ್ಮಿ ವಿಲಾಸ್ ಅರಮನೆಯಲ್ಲಿ ಎಲ್‌ವಿಪಿ ಔತಣಕೂಟಗಳು ಮತ್ತು ಸಮಾವೇಶಗಳು, ಮೋತಿ ಬಾಗ್ ಅರಮನೆ ಮತ್ತು ಮಹಾರಾಜ ಫತೇಹ್ ಸಿಂಗ್ ಮ್ಯೂಸಿಯಂ ಕಟ್ಟಡವಿದೆ. ಪ್ರೇಮ್ ರೋಗ್, ದಿಲ್ ಹಿ ತೋ ಹೈ, ಸರ್ದಾರ್ ಗಬ್ಬರ್ ಸಿಂಗ್ ಮತ್ತು ಗ್ರ್ಯಾಂಡ್ ಮಸ್ತಿಯಂತಹ ಅನೇಕ ಬಾಲಿವುಡ್ ಚಲನಚಿತ್ರಗಳನ್ನು ಈ ಲಕ್ಷ್ಮಿ ವಿಲಾಸ್ ಅರಮನೆಯಲ್ಲಿ ಚಿತ್ರೀಕರಿಸಲಾಗಿದೆ.

ಮಹಾರಾಜ ಫತೇಹ್ ಸಿಂಗ್ ವಸ್ತುಸಂಗ್ರಹಾಲಯದಲ್ಲಿ ರಾಜಾ ರವಿ ವರ್ಮಾ ಅವರ ಹಲವಾರು ಅಪರೂಪದ ವರ್ಣಚಿತ್ರಗಳಿವೆ. ಅರಮನೆ ಕಾಂಪೌಂಡ್ ಒಳಗಿರುವ ಮೋತಿ ಬಾಗ್ ಕ್ರಿಕೆಟ್ ಮೈದಾನದಲ್ಲಿ ಈಜುಕೊಳ, ಕ್ಲಬ್ ಹೌಸ್ ಮತ್ತು ವ್ಯಾಯಾಮ ಶಾಲೆ ಇದೆಯಂತೆ.
ಇನ್ನು ಅನೇಕ ಚಿತ್ರಗಳನ್ನು ಸಹ ಈ ಅರಮನೆಯಲ್ಲಿ ಚಿತ್ರೀಕರಿಸಲಾಗಿದೆಯಂತೆ.

ಲಕ್ಷ್ಮಿ ವಿಲಾಸ್ ಅರಮನೆಯ ದರ್ಬಾರ್ ಹಾಲ್ ವೆನೆಷಿಯನ್ ಮೊಸಾಯಿಕ್ ಫ್ಲೋರ್ ಅನ್ನು ಹೊಂದಿದೆ ಮತ್ತು ದರ್ಬಾರ್ ನ ಹೊರಗೆ ನೀರಿನ ಕಾರಂಜಿಗಳೊಂದಿಗೆ ವಿಶಾಲವಾದ ಉದ್ಯಾನವಿದೆ. ಅರಮನೆಯು ಹಳೆಯ ಶಸ್ತ್ರಾಗಾರ ಮತ್ತು ಶಿಲ್ಪಗಳ ಅದ್ಭುತ ಸಂಗ್ರಹವನ್ನು ಸಹ ಹೊಂದಿದೆ.

ಇದನ್ನೂ ಓದಿ: NPS: ಎನ್‌ಪಿಎಸ್‌ನಲ್ಲಿ ನಿಯಮ ಬದಲಾವಣೆ : ಶೇ.45 ಪಿಂಚಣಿ ಸಿಗುವ ಸಾಧ್ಯತೆ

Leave A Reply

Your email address will not be published.