Alcohol: 4 ನೈಂಟಿ ತರುತ್ತೇನೆ ಎಂದವನ ಪತ್ತೆಯಿಲ್ಲ, ಕೊನೆಗೆ 4 ರಲ್ಲಿ ಸಿಕ್ಕಿದ್ದು 2 ನೈಂಟಿ, ನೈಟಿ ಹಾಕಿಕೊಂಡು ನೈಂಟಿಗಾಗಿ ಕಾದಿದ್ದ ಆಂಟೀರು ನಂತ್ರ ಮಾಡಿದ್ದೇನು ಗೊತ್ತಾ ?*

Alcohol There is no clue that he will bring 4 ninety

Alcohol: ಕೋತಿ ಕೈಯಲ್ಲಿ ಬಾಳೆಹಣ್ಣು ಇರೋದು ಒಂದೇ, ಕುಡುಕನ ಕೈಯಲ್ಲಿ ಫುಲ್ ಬಾಟಲ್ ಇರೋದು ಒಂದೇ. ಹೌದು, ಕೋತಿಗೆ ಬಾಳೆಹಣ್ಣು ಪಂಚಪ್ರಾಣ ಆದ್ರೆ, ಕುಡುಕನಿಗೆ ಎಣ್ಣೆ (Alcohol) ಅಂದ್ರೆ ಪಂಚಪ್ರಾಣ. ಹಾಗಿರುವಾಗ ಒಬ್ಬ ಕುಡುಕನನ್ನು ನಂಬಿ ಬಾಟಲ್ ತರಲು ಹೇಳಿದ್ರೆ ಕೈ ಮತ್ತು ಬಾಯಿ ಸುಮ್ಮನಿರಲು ಸಾಧ್ಯನಾ!

 

ಹೌದು, ಎಣ್ಣೆ ಅಮಲಿಗೆ ಆಡಿಕ್ಟ್ ಆದವರು ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಸುಳ್ಳು ಹೇಳಲೂ ಸೂಪರ್ ಪಾಸ್ಟ್. ಹಾಗೆಯೇ ಇಲ್ಲೊಬ್ಬ ಮಹಾರಾಯ 4 ಮದ್ಯದ ಬಾಟಲಿಯನ್ನು ತಂದುಕೊಡುತ್ತೇನೆ ಎಂದು ಹೇಳಿ ಮಹಿಳೆಯರಿಂದ ಹಣ ಪಡೆದು ಮೋಸ ಮಾಡಿದ್ದಕ್ಕೆ ಅದೇ ಮಹಿಳೆಯರ (women) ಕೈಯಿಂದ ಸಾಕು ಸಾಕು ಅನ್ನುವಷ್ಟು ಗೂಸಾ ತಿಂದಿರುವ ವಿಡಿಯೊ ವೈರಲ್ ಆಗಿದೆ.

ಕೊಪ್ಪಳ (koppala) ಜಿಲ್ಲೆಯ ಕನಕಗಿರಿಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಮೂವರು ಮಹಿಳೆಯರಿಗೆ ಮದ್ಯ ಸೇವನೆ ಮಾಡಬೇಕು ಎಂದು ಆಸೆಯಾಗಿದೆ. ಹಾಗಾಗಿ ದಾರಿಯಲ್ಲಿ ಹೋಗುವ ಒಬ್ಬ ವ್ಯಕ್ತಿಯನ್ನು ನೋಡಿದ ಮಹಿಳೆಯರಿಗೆ ಒಂದು ಯೋಚನೆ ಬಂದಿದೆ. ಈತನಿಗೆ ಹಣ ಕೊಟ್ಟು ಕಳಿಸಿದರೆ ಮದ್ಯವನ್ನು ತಂದು ಕೊಡುತ್ತಾನೆ. ನಾವು ಅಲ್ಲಿಗೆ ಹೋಗುವ ಪ್ರಮೇಯವೂ ತಪ್ಪುತ್ತದೆ ಎಂದು ಐಡಿಯಾ ಮಾಡಿ ದುಡ್ಡು ಕೊಟ್ಟು ನಾಲ್ಕು ನೈಂಟಿ ಬಾಟಲಿಯನ್ನು ತಂದುಕೊಡುವಂತೆ ಹೇಳಿದರು. ಆತನೋ ಬಹಳ ಖುಷಿಯಿಂದ ಹಣ ಪಡೆದು ಹೋಗಿದ್ದಾನೆ.

ಹೀಗೆ ನೈಂಟಿಗಾಗಿ ಹಣ ಕೊಟ್ಟು ದಾರಿಯಲ್ಲಿ ಕಾದು ಕುಳಿತಿದ್ದ ಮಹಿಳೆಯರಿಗೆ ಗಂಟೆಯಾದರೂ ಆಸಾಮಿ ಪತ್ತೆಯೇ ಇರದಿರುವುದು ಗಾಬರಿ ಮೂಡಿಸಿದ್ದು, ಹುಡುಕಿಕೊಂಡು ಬಾರ್‌ಗೆ ಬಂದಿದ್ದಾರೆ. ಅಲ್ಲಿ ಆಸಾಮಿ ಆರಾಮವಾಗಿ ಕುಡಿಯುತ್ತಿದ್ದ, ಮಹಿಳೆಯರು ಕೇಳಿದರೆ ತನ್ನ ಬಳಿ ಇದ್ದ ಎರಡು ಮದ್ಯದ ಬಾಟಲಿಯನ್ನು ಕೊಟ್ಟಿದ್ದಾನೆ.

ತಾವು ಹಣ ಕೊಟ್ಟಿದ್ದು ನಾಲ್ಕು ನೈಂಟಿ ತರಲು. ಇನ್ನೆರೆಡು ಎಲ್ಲಿ ಎಂದು ಕೇಳಿದ್ದಾರೆ. ಆದರೆ, ಅಷ್ಟರೊಳಗೆ ಆತ ಎರಡು ಬಾಟಲಿ ಸಾರಾಯಿಯನ್ನು ತಾನೇ ಕುಡಿದು ಬಿಟ್ಟಿದ್ದ. ಇದನ್ನು ಸಹಿಸದ ಮಹಿಳೆಯರು ಆತನನ್ನು ಸುತ್ತುವರಿದು ಹಿಗ್ಗಾಮುಗ್ಗ ಜಾಡಿಸಿದ್ದಾರೆ, ಎಳೆದಾಡಿದ್ದಾರೆ. ಜೊತೆಗೆ ಸಾಕಷ್ಟು ಬಾರಿಸಿದ್ದಾರೆ. ಈ ಗಲಾಟೆ ನೋಡಿದ ನಾಗರಿಕರು ಮಧ್ಯಪ್ರವೇಶಿಸಿ ಮದ್ಯದ ಗಲಾಟೆಯನ್ನು ಬಗೆಹರಿಸಿದ್ದಾರೆ. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ (video viral) ಆಗಿದೆ.

ಇದನ್ನು ಓದಿ: Kantara-2: ಕಾಂತಾರ-2 ಸಿನಿಮಾಗಾಗಿ ರಿಷಬ್ ಶೆಟ್ಟಿ ಭರ್ಜರಿ ಸಿದ್ಧತೆ ; ನಟನ ಮುಂದಿವೆ ಹೊಸ ಸವಾಲು ! 

Leave A Reply

Your email address will not be published.