Pomeranian Puppy: ಪೊಮೆರೇನಿಯನ್ ನಾಯಿಮರಿ ತಂದು ಸಾಕಿದ ಯುವತಿ ; ಪುಟ್ಟನಾಯಿ ಬೆಳೆದ ಮೇಲೆ ಶ್ವಾನಪ್ರಿಯೆಗೇ ಶಾಕ್ ! ಯಾಕೆ ಗೊತ್ತಾ?!

A young woman brought a Pomeranian puppy

Pomeranian Puppy: ಯುಎಸ್​​ನ ಅಮಂಡಾ ಹ್ಯಾಮಿಲ್ಟನ್ ಎಂಬ ಯುವತಿ ಶ್ವಾನಪ್ರಿಯೆ ಆಗಿದ್ದಳು. ತನ್ನ ಜೊತೆಗೆ ಮನೆಯಲ್ಲಿ ಮುದ್ದಾದ ನಾಯಿ ಇರಬೇಕು ಎಂಬ ಹಂಬಲದಿಂದ ಪೊಮೆರೇನಿಯನ್​ ನಾಯಿಮರಿಯನ್ನು (Pomeranian Puppy) ಮನೆಗೆ ತಂದು ಸಾಕಿಕೊಂಡಿದ್ದಳು. ಆದರೆ, ಈ ನಾಯಿಮರಿ ಬೆಳೆದು ನಿಂತ ಮೇಲೆ ಯುವತಿಗೆ ಅಚ್ಚರಿ ಉಂಟಾಗಿದೆ. ಯಾಕೆ ಗೊತ್ತಾ?! ಮುದ್ದಾದ ನಾಯಿಮರಿ ಎಂದುಕೊಂಡವಳಿಗೆ ತಾನು ಸಾಕಿದ್ದು ನಾಯಿಯಲ್ಲ ತೋಳ ಎಂದು ಗೊತ್ತಾಗಿ ಬೇಸ್ತುಬಿದ್ದಿದ್ದಾಳೆ. ಈ ಬಗ್ಗೆ ಯುವತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.

 

ಯುವತಿ ಪೊಮೆರೇನಿಯನ್ ನಾಯಿ ಸಾಕುವ ಹಂಬಲದಿಂದ ಮೆಕ್ಸಿಕನ್​ ಗಡಿ ಭಾಗದ ವ್ಯಕ್ತಿಯೊಬ್ಬರಿಂದ ನಾಯಿ ಮರಿಯನ್ನು ಖರೀದಿಸಿ ತಂದಿದ್ದಳು. 50 ಯುಎಸ್​ ಡಾಲರ್​ (4000 ರೂಪಾಯಿ) ಕೊಟ್ಟು ನಾಯಿಮರಿ ಖರೀದಿಸಿದ್ದಳು. ಮೊದಲೇ ಈ ತಳಿಯ ನಾಯಿ ಮರಿಗಳಿಗೆ ಬೆಲೆ ಜಾಸ್ತಿ. ಯುವತಿ ಇದ್ದದ್ದರಲ್ಲಿಯೇ ಕಡಿಮೆ ಬೆಲೆಗೆ, ತುಂಬಾ ಮುದ್ದಾಗಿ ಸುಂದರವಾಗಿರುವ, ಕಪ್ಪು-ಬಿಳುಪು ಬಣ್ಣದ ನಾಯಿ ಮರಿ ಮನೆಗೆ ತಂದಳು. ಅದಕ್ಕೆ ಕ್ರಿಪ್ಟೋ ಎಂದು ಹೆಸರು ಕೂಡ ಇಟ್ಟಳು.

ಪ್ರತಿದಿನ ಕ್ರಿಪ್ಟೋಗೆ ನಾಯಿಗಳಿಗೆ ಕೊಡುವ ಆಹಾರವನ್ನೇ ಕೊಡುತ್ತಿದ್ದಳು. ತುಂಬಾ ಪ್ರೀತಿಯಿಂದ ಸಾಕಿದಳು. ಎಲ್ಲರಂತೆ ಈಕೆಯೂ ನಾಯಿ ಮರಿಯನ್ನು ಮಡಿಲಲ್ಲಿ ಕೂರಿಸಿಕೊಂಡು ಮುದ್ದಾಡುತ್ತಿದ್ದಳು. ಬೆಡ್​ ಮೇಲೆ ತನ್ನ ಜೊತೆಗೇ ಮಲಗಿಸಿಕೊಳ್ಳುತ್ತಿದ್ದಳು. ಆದರೆ ಈ ನಾಯಿ ಕ್ರಮೇಣ ದೊಡ್ಡದಾಗಿ ಬೆಳೆಯುತ್ತಿದ್ದಂತೆ ಯುವತಿಗೆ ಅನುಮಾನ ಶುರುವಾಯಿತು. ಯಾಕೆಂದರೆ, ಕ್ರಿಪ್ಟೋ ನೋಡಲು ಹಾಗೂ ಅದರ ಧ್ವನಿ ನಾಯಿಯಂತಿರಲಿಲ್ಲ. ಹಾಗಾಗಿ ತಾನು ತಂದಿದ್ದು ಪೊಮೆರೇನಿಯನ್ ನಾಯಿ ಆಗಿರಲಿಕ್ಕಿಲ್ಲ ಎಂದು ಭಾವಿಸಿದಳು.

ನಾಯಿಯ ವಿಭಿನ್ನತೆ ನೋಡಿ ಯುವತಿ ಪಶು ವೈದ್ಯರ ಬಳಿಗೆ
ನಾಯಿಯೆಂದು ಭಾವಿಸಿರುವ ಕ್ರಿಪ್ಟೋವನ್ನು ತಪಾಸಣೆಗೆ ಕರೆದೊಯ್ದಳು. ವೈದ್ಯರು ‘ಇದು ನಾಯಿಯಲ್ಲ, ತೋಳ’ ಎಂದು ಹೇಳಿದರು. ಯುವತಿ ಒಂದೇ ಸಮನೆ ಗಾಬರಿ, ಆಶ್ಚರ್ಯಗೊಂಡಳು. ನಾಯಿ ಕೊಟ್ಟವ ಯುವತಿಗೆ ಮೋಸ ಮಾಡಿದ್ದ. ಪೊಮೆರೇನಿಯನ್​ ನಾಯಿಮರಿ ಎಂದು ಹೇಳಿ ತೋಳದ ಮೀರಿ ಕೊಟ್ಟಿದ್ದ ಎಂದು ಯುವತಿ ಹೇಳಿದ್ದಾರೆ. ಯುವತಿ ತೋಳವನ್ನು ಮಡಿಲಲ್ಲಿ ಕೂರಿಸಿಕೊಂಡಿರುವ ಒಂದು ವಿಡಿಯೊವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ವಿಡಿಯೋ, ಯುವತಿಯ ಕಥೆ ಕೇಳಿದ ಕೆಲವು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಗಾಬರಿಗೊಂಡು ನಾಯಿಯೆಂದು ಹೇಳಿ, ತೋಳ ಜತೆಗಿಟ್ಟುಕೊಂಡಿದ್ದಿರಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ‘ಇಲ್ಲ ಇದು ಥೇಟ್ ನಾಯಿಯಂತೆಯೇ ಇದೆ. ಗೊಂದಲ ಆಗುತ್ತದೆ’ ಎಂದಿದ್ದಾರೆ.

 

ಇದನ್ನು ಓದಿ: Ramcharan-Venu swamy: ರಾಮ್‌ ಚರಣ್‌ಗೆ ಮುಂದೆ ಮತ್ತೊಂದು ಮಗು ಆಗೋದಿಲ್ಲ…!! ಶಾಕಿಂಗ್ ಭವಿಷ್ಯ ನುಡಿದ ವೇಣು ಸ್ವಾಮಿ!!

Leave A Reply

Your email address will not be published.