Adipurush: ಮತ್ತೊಂದು ವಿವಾದಕ್ಕೆ ಕಾರಣವಾಯ್ತು ‘ಆದಿಪುರುಷ್’ !! ಪೊಲೀಸ್ ಭದ್ರತೆಯೊಂದಿಗೆ ‘ಹನುಮಂತ ದೇವರೇ ಅಲ್ಲ’ ಎಂದ ಸಂಭಾಷಣೆಕಾರ !!
Cinema news Aadipurush co writer Manoj muntashir gives controversial statement Hanuman is not God he is devoteel
Manoj muntashir controversy statement : ರಿಲೀಸ್(Release) ಆದಾಗಿಂದಲೂ ಹಿಗ್ಗಾ ಮುಗ್ಗಾ ಟ್ರೋಲ್(Trolle) ಆಗುತ್ತಿರೋ ಸಿನಿಮಾ ನೆಟ್ಟಿಗರಿಂದ ಭಾರೀ ವಿರೋದಕ್ಕೂ ಕಾರಣವಾಗಿದೆ. ಆದರೀಗ ಈ ನಡುವೆ ಚಿತ್ರ ತಂಡ ವಿವಾದವನ್ನು ಮೈಮೇಲೆ ಎದುಕೊಂಡಿದ್ದು, ಆದಿಪುರುಷ್ ಸಿನಿಮಾಕ್ಕೆ ಸಂಭಾಷಣೆ ಬರೆದಿರುವ ಮನೋಜ್ ಮುಂತಾಶಿರ್ ಹನುಮಂತ ದೇವರೇ ಅಲ್ಲ ಎಂದಿದ್ದಾರೆ (Manoj muntashir controversy statement).
ಹೌದು, ರಾಮಾಯಣ(Ramayana) ಆಧಾರಿತ ಕಥೆ ಇರುವ ಚಿತ್ರ ಎಂದು ಪ್ರಚಾರ ಪಡೆದುಕೊಂಡಿದ್ದ ಈ ಸಿನಿಮಾ ಬಿಡುಗಡೆಯಾಚಿತ್ರದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆಯೇ ಚಿತ್ರದ ವಿರುದ್ಧ ದೊಡ್ಡ ಮಟ್ಟದಲ್ಲಿ ನೆಗೆಟಿವ್ ವಿಮರ್ಶೆಗಳು ಕೇಳಿಬಂದವು. ಸಿನಿಮಾ ಬಿಡುಗಡೆಗೆ ಮುನ್ನ ಶ್ರೀರಾಮನನ್ನು, ಹಿಂದೂ ಸಂಸ್ಕೃತಿಯನ್ನು ಹೊಗಳುತ್ತಿದ್ದ ಚಿತ್ರತಂಡದ ಕೆಲವು ಮುಖ್ಯ ತಂತ್ರಜ್ಞರು ಈಗ ತುಸು ಭಿನ್ನವಾಗಿ ಮಾತನಾಡುತ್ತಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಸಿನಿಮಾಕ್ಕೆ ಹಾಡುಗಳು ಹಾಗೂ ಸಂಭಾಷಣೆ (dialogue) ಬರೆದಿರುವ ಮನೋಜ್ ಮುಂತಶಿರ್ (Manoj Muntashir) ಸಿನಿಮಾದ ಪರವಾಗಿ ಮಾತನಾಡುತ್ತಾ ನೀಡಿರುವ ಹೇಳಿಕೆ ಈಗಾಗಲೇ ಆದಿಪುರುಷ್ ಸಿನಿಮಾದ ಮೇಲೆ ಸಿಟ್ಟಾಗಿರುವ ಪ್ರೇಕ್ಷಕರನ್ನು ಇನ್ನಷ್ಟು ಸಿಟ್ಟಿಗೆಬ್ಬಿಸಿದೆ.
ಯಾಕೆಂದರೆ ಮನೋಜ್ ಮುಂತಾಶೀರ್(Manoj muntashir) ‘ಆಜ್ ತಕ್’ ಜತೆ ನಡೆದ ಸಂದರ್ಶನವೊಂದರಲ್ಲಿ ಹನುಮಂತನ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಹೌದು, “ಹನುಮಂತ ಶ್ರೀರಾಮನ ಹಾಗೆ ಅಲ್ಲ. ಹನುಮಂತ ತಾತ್ವಿಕವಾಗಿ ಮಾತನಾಡುವುದಿಲ್ಲ. ಹನುಮಂತ ದೇವರಲ್ಲ, ಆತ ಓರ್ವ ಭಕ್ತ. ಬಳಿಕ ಆತನನ್ನು ನಾವು ದೇವರನ್ನು ಮಾಡಿದೆವು. ಏಕೆಂದರೆ ಆತನ ಭಕ್ತಿ ಅಂತಹ ಶಕ್ತಿಯನ್ನು ಹೊಂದಿತ್ತು” ಎಂದು ಮನೋಜ್ ಮುಂತಾಶೀರ್ ಹೇಳಿಕೆ ನೀಡಿದ್ದಾರೆ. ಮನೋಜ್ ಹೇಳಿಕೆಗೆ ಇದೀಗ ಎಲ್ಲೆಡೆ ಭಾರೀ ಆಕ್ರೋಶ ವ್ಯಕತ್ತವಾಗುತ್ತಿದೆ.
ಅಂದಹಾಗೆ ಸಂಭಾಷಣೆ ವಿರುದ್ಧ ಆಕ್ರೋಶ ಕೇಳಿಬಂದ ಬೆನ್ನಲ್ಲೇ ಮನೋಜ್ ಮುನ್ತಾಶಿರ್ ಸಮರ್ಥಿಸಿಕೊಂಡಿದ್ದರು. ಇದೇ ವೇಳೆ ಅಭಿಮಾನಿಗಳಿಗೆ ನೋವಾಗಿದೆ ಕಾರಣಕ್ಕೆ ಸಂಭಾಷಣೆಗೆ ಕತ್ತರಿ ಹಾಕಲು ನಿರ್ಧರಿಸಿದ್ದೇವೆ. ಆದರೆ ಸಂಭಾಷಣೆ ತಪ್ಪಾಗಿಲ್ಲ ಎಂದು ಸಮರ್ಥಿಸಿದ್ದರು. ಸಂಭಾಷಣೆ ಸಮರ್ಥಿಸಿಕೊಳ್ಳಲು ನನಗೆ ನೂರು ಕಾರಣವಿರಬಹುದು. ಆದರೆ ಅದು ಅಭಿಮಾನಿಗಳ ನೋವು ದೂರಮಾಡದು. ಪ್ರೇಕ್ಷಕರ ಅಭಿಮತಕ್ಕಿಂತ ನನಗೆ ಯಾವುದೂ ದೊಡ್ಡದಲ್ಲ. ಹೀಗಾಗಿ ಅಭಿಮಾನಿಗಳ ಆಕ್ಷೇಪಕ್ಕೆ ಕಾರಣವಾದ ಕೆಲ ಸಂಭಾಷಣೆಯನ್ನು ಬದಲಾಯಿಸಲು ನಾವು ನಿರ್ಧರಿಸಿದ್ದೇವೆ. ಮುಂದಿನ ವಾರದಿಂದಲೇ ಈ ಬದಲಾವಣೆ ಚಿತ್ರದಲ್ಲಿ ಕಾಣಸಲಿದೆ’ ಎಂದು ಹೇಳಿದ್ದರು.
ಇನ್ನು ಆದಿಪುರುಷ್ ಸಿನಿಮಾವನ್ನು ಹಲವರು ಟೀಕಿಸಿದ್ದಾರೆ. ಕೆಲವರು ಸಿನಿಮಾ ನಿಷೇಧಕ್ಕೆ ಕರೆ ನೀಡಿದ್ದಾರೆ. ಹಿಂದೂ ಸೇನಾ ಸೇರಿದಂತೆ ಕೆಲವು ಸಂಘಟನೆಗಳು ಸಿನಿಮಾ ವಿರುದ್ಧ ದೂರು ದಾಖಲಿಸಿವೆ. ಆಲ್ ಇಂಡಿಯಾ ಸಿನಿ ವರ್ಕರ್ಸ್ ಅಸೋಸಿಯೇಷನ್ನವರು ಪ್ರಧಾನಿ ಮೋದಿಗೆ ಪತ್ರ ಬರೆದು ಸಿನಿಮಾ ಪ್ರದರ್ಶನವನ್ನು ತಡೆ ಹಿಡಿಯಬೇಕೆಂದು ಮನವಿ ಮಾಡಿದ್ದಾರೆ. ಎಲ್ಲ ಟೀಕೆಗಳ ನಡುವೆಯೂ ಆದಿಪುರುಷ್ ಸಿನಿಮಾದ ಕಲೆಕ್ಷನ್ ಮೊದಲ ಮೂರು ದಿನ ಅತ್ಯುತ್ತಮವಾಗಿಯೇ ಇತ್ತು. ಸೋಮವಾರ ತುಸು ಇಳಿಮುಖ ಕಂಡಿದೆ.