Matte maduve: ಒಟಿಟಿಗೆ ಲಗ್ಗೆ ಇಡಲು ರೆಡಿಯಾದ ‘ಮತ್ತೆ ಮದುವೆ’ !! ಇನ್ನು ಆನ್ಲೈನಲ್ಲಿ ಬರಲಿದೆ ನರೇಶ್- ಪವಿತ್ರ ಲವ್ ಸ್ಟೋರಿ !!

Naresh- Pavitra cini news film industry 'Matte Maduve' film ready to come to OTT

Matte maduve: ತೆಲುಗು ನಟ ನರೇಶ್(Naresh) ಮತ್ತು ಪವಿತ್ರಾ ಲಕೋಶ್(Pavitra lokesh) ನಟನೆಯ ಮತ್ತೆ ಮದುವೆ ಸಿನಿಮಾ ಒಟಿಟಿಗೆ ಬರ್ತಿದೆ. ಇದೇ ತಿಂಗಳು ಜೂನ್ 23ಕ್ಕೆ ರಿಲೀಸ್ ಆಗುತ್ತಿದೆ.

 

ಹೌದು, ತೆಲುಗಿನ ನಟ ನರೇಶ್ ಕೃಷ್ಣ (Naresh) ಹಾಗೂ ಪವಿತ್ರಾ ಲೋಕೇಶ್ (Pavitra Lokesh) ಅಭಿನಯದ ‘ಮತ್ತೆ ಮದುವೆ’ (Matte maduve) ಸಿನಿಮಾ ಒಟಿಟಿ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ತಿಂಗಳ 23ಕ್ಕೆ ಪ್ರತಿಷ್ಠಿತ ಒಟಿಟಿ ಅಮೇಜಾನ್ ಪ್ರೈಮ್(Amazon prime) ನಲ್ಲಿ ಸ್ಕ್ರೀಮಿಂಗ್ ಆಗಲಿದೆ. ಕನ್ನಡ ಸಿನಿಪ್ರಿಯರು ಹಾಗೂ ಸಿನಿತಾರೆಯರು ಮೆಚ್ಚಿದ್ದ ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಿನಿಮಾ ಒಟಿಟಿಗೆ ಬರ್ತಿದೆ.

ನರೇಶ್ (Naresh) ಮತ್ತು ಪವಿತ್ರಾ ಲೋಕೇಶ್ (Pavitra Lokesh)​ ಕಳೆದ ಒಂದು ವರ್ಷದಿಂದ ಭಾರೀ ಸುದ್ಧಿಯಲ್ಲಿದ್ದರು. ಇವರಿಬ್ಬರ ಲಿವಿಂಗ್ ರಿಲೇಶನ್ ಶಿಪ್ (Living Relationship) ಬಗ್ಗೆ ಮಾಧ್ಯಮಗಳು ನಾನಾ ಸುದ್ದಿಗಳನ್ನು ಬಿತ್ತರಿಸಿದ್ದವು. ಇವೆಲ್ಲದಕ್ಕೂ ಟಾಂಗ್ ಕೊಡುವಂತೆ ನರೇಶ್ ‘ಮತ್ತೆ ಮದುವೆ’ (Matte Maduve) ಸಿನಿಮಾ ಮಾಡಿದ್ದಾರೆ. ಅವರ ಜೀವನದಲ್ಲಿ ನಡೆದ ಕೆಲವು ನೈಜ ಘಟನೆಗಳನ್ನು ತಮ್ಮದೇ ಶೈಲಿಯಲ್ಲಿ ಜನರ ಮುಂದೆ ತಂದಿದ್ದಾರೆ. ತೆಲುಗು ಹಾಗೂ ಕನ್ನಡ ಎರಡು ಭಾಷೆಯಲ್ಲಿ ರಿಲೀಸ್ ಆಗಿದ್ದ ಮತ್ತೆ ಮದುವೆ ಸಿನಿಮಾ ಥಿಯೇಟರ್ ಕೆಲ ಕಡೆ ಉತ್ತಮ ಪ್ರದರ್ಶನ ಕಂಡಿದೆ.

ಅಂದಹಾಗೆ ಅಮೇಜಾನ್ ಪ್ರೈಮ್ ನಲ್ಲಿ ಮತ್ತೆ ಮದುವೆ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಮಿಸ್ ಮಾಡಿಕೊಂಡವರು ಮೊಬೈಲ್ ನಲ್ಲೇ ಜೂನ್ 23ಕ್ಕೆ ಸಿನಿಮಾ ನೋಡಬಹುದು. ನರೇಶ್ ಅವರ ತಾಯಿ, ಹಿರಿಯ ನಟಿ, ನಿರ್ದೇಶಕಿ ವಿಜಯಾ ನಿರ್ಮಲಾ ಅವರು 1973ರಲ್ಲಿ ‘ಸೂಪರ್ ಸ್ಟಾರ್‌’ ಕೃಷ್ಣ ಅವರ ಜತೆಗೂಡಿ ವಿಜಯ ಕೃಷ್ಣ ಮೂವೀಸ್ ಆರಂಭಿಸಿದ್ದರು. ಆ ಬ್ಯಾನರ್‌ಗೆ ಭರ್ತಿ 50 ವರ್ಷ ತುಂಬಿದೆ. ಆ ಹಿನ್ನೆಲೆಯಲ್ಲಿ ಆ ಬ್ಯಾನರ್‌ ಮೂಲಕ ಮತ್ತೆ ಮದುವೆ ಸಿನಿಮಾವನ್ನು ನರೇಶ್ ನಿರ್ಮಾಣ ಮಾಡಿದ್ದರು.

ವನಿತಾ ವಿಜಯಕುಮಾರ್, ಅನನ್ಯ ನಾಗೆಲ್ಲ, ರೋಶನ್, ರವಿವರ್ಮ, ಅನ್ನಪೂರ್ಣ, ಭದ್ರಂ, ಯುಕ್ತ, ಪ್ರವೀಣ್ ಯಂಡಮುರಿ, ಮಧು ಹಾಗೂ ಇನ್ನಿತರರು ಮತ್ತೆ ಮದುವೆಯ ಭಾಗವಾಗಿದ್ದರು. ಬೋಲ್ಡೆಸ್ಸ್ ಜೋಡಿಯ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಹಾನಿಯನ್ನು ಥಿಯೇಟರ್ ನಲ್ಲಿ ಮಿಸ್ ಮಾಡಿಕೊಂಡವರು ಅಮೇಜಾನ್ ನಲ್ಲಿ ನೋಡಬಹುದು.

 

ಇದನ್ನು ಓದಿ: Free Bus: ಫ್ರೀ ಅಂತ ಉಮ್ಮೇದಿಯಲ್ಲಿ ಹೊರಟ ಮಹಿಳೆಯರು, ವಾಪಸ್ ಹೋಗಲು ಬಸ್ಸಿಲ್ಲದೇ ತೀವ್ರ ಪರದಾಟ ! 

Leave A Reply

Your email address will not be published.