Madhya Pradesh: ಪುಣ್ಣಕೋಟಿ ಕಥೆಗೆ ಹೊಸ ತಿರುವು ನೀಡಿದ ಹಸುಗಳ ಸತ್ಯ ಕಥೆ, ದಾಳಿ ಮಾಡಿದ ವ್ಯಾಘ್ರನನ್ನೇ ಎದುರಿಸಿ ನಿಂತ ಹಸುಗಳು, ವಿಡಿಯೋ ವೈರಲ್

Madhya Pradesh The true story of cows that gave a new twist to the Punnakoti story

Madhya Pradesh: ಅನಾದಿಕಾಲದಿಂದಲೂ ಪುಣ್ಯಕೋಟಿ ಕಥೆ ಕೇಳುತ್ತಾ ಬಂದಿದ್ದೇವೆ. ಇದೀಗ ಪುಣ್ಯಕೋಟಿ ಕಥೆಯ ಸಾರಾಂಶದ ತಿರುವು ಪಡೆದ ಘಟನೆ ನೀವು ಇಲ್ಲಿ ನೋಡಬಹುದು. ಹೌದು, ಗೋವುಗಳ ಗುಂಪಿನ ಹಸುವೊಂದರ ಮೇಲೆ ದಾಳಿ ಮಾಡಿದ್ದ ಹುಲಿಯನ್ನು ಎಲ್ಲಾ ಹಸುಗಳು ಒಗ್ಗೂಡಿ ಹೆದರಿ ಓಡಿಸಿರುವ ಅಪರೂಪದ ಘಟನೆ ಮಧ್ಯ ಪ್ರದೇಶದಲ್ಲಿ (Madhya Pradesh) ನಡೆದಿದೆ. ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್ ನ ಕೆರ್ವಾದಲ್ಲಿನ ಫಾರ್ಮ್ ನಲ್ಲಿ ಈ ಘಟನೆ ನಡೆದಿದ್ದು, ಇಡೀ ದೃಶ್ಯ ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆ ಭಾನುವಾರ ರಾತ್ರಿ ನಡೆದಿದ್ದು, ಅಗು ಹೇಗೋ ಫಾರ್ಮ್ ಹೌಸ್ ನ ಕಾಂಪೌಂಡ್ ಒಳಗೆ ಪ್ರವೇಶ ಮಾಡಿರುವ ಹುಲಿ, ಅಲ್ಲಿಯೇ ಮೇಯುತ್ತಿದ್ದ ಹಸುಗಳ ಗುಂಪಿನತ್ತ ಧಾವಿಸಿದೆ. ಈ ವೇಳೆ ಅಲ್ಲಿಯೇ ಕುಳಿತು ಹಲ್ಲು ಮೇಯುತ್ತಿದ್ದ ಒಂಟಿ ಹಸವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ.

ನೋವಿನಿಂದ ಹಸು ಚೀರಾಟ ಹಾಕಿದ್ದು, ಅಲ್ಲಿಯೇ ಇದ್ದ ಇತರೆ ಹಸುಗಳೆಲ್ಲಾ ಒಗ್ಗೂಡಿ ಹುಲಿಯತ್ತ ಧಾವಿಸಿದೆ. ಹಸುಗಳ ಗುಂಪು ಮತ್ತು ಅವುಗಳ ಕೂಗನ್ನು ಕೇಳಿ ಭಯಗೊಂಡ ಹುಲಿ ಪಕ್ಕಕ್ಕೆ ಹಾರಿ ಹಸುಗಳಿಂದ ದೂರ ಹೋಗಿದೆ. ಈ ಇಡೀ ದೃಶ್ಯ ಫಾರ್ಮ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಸುಮಾರು 75 ಎಕರೆ ಪ್ರದೇಶದಲ್ಲಿರುವ ಈ ಫಾರ್ಮ್ ನಲ್ಲಿ ಅದರ ಮಾಲೀಕ ಸುಮಾರು 50 ಕ್ಕಿಂತ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಈ ಹಸುವಿನ ಫಾರ್ಮ್ ಗೆ ಹುಲಿ ನುಗ್ಗುತ್ತಿರುವುದು ಕಳೆದ 6 ತಿಂಗಳಲ್ಲಿ 5ನೇ ಬಾರಿಯಂತೆ. ಇದು ಹುಲಿಗಳು ಅಡ್ಡಾಡುವ ಪ್ರದೇಶವಾಗಿದ್ದು, 14 ಅಡಿ ಎತ್ತರೆದ ಫೆನ್ಸಿಂಗ್ ಹಾಕಿದ್ದರೂ ಹುಲಿಗಳು ಫಾರ್ಮ್ ಪ್ರವೇಶಿಸುತ್ತಿವೆ. ಕೆಲ ಭಾಗದಲ್ಲಿ ಫೆನ್ಸಿಂಗ್ ಹಾಳಾಗಿದ್ದು ಅವುಗಳನ್ನು ದುರಸ್ತಿ ಮಾಡಬೇಕಿದೆ ಎಂದು ಮಾಲೀಕರು ತಿಳಿಸಿದ್ದಾರೆ.

ಸದ್ಯ ಒಗ್ಗಟ್ಟಿನಲ್ಲಿ ಬಲವಿದೆ ಎಂದು ಈ ಫಾರ್ಮ್ ಹಸುಗಳು ಮತ್ತೆ ಸಾಬೀತು ಪಡಿಸಿದೆ.

 

ಇದನ್ನು ಓದಿ: Matte maduve: ಒಟಿಟಿಗೆ ಲಗ್ಗೆ ಇಡಲು ರೆಡಿಯಾದ ‘ಮತ್ತೆ ಮದುವೆ’ !! ಇನ್ನು ಆನ್ಲೈನಲ್ಲಿ ಬರಲಿದೆ ನರೇಶ್- ಪವಿತ್ರ ಲವ್ ಸ್ಟೋರಿ !! 

Leave A Reply

Your email address will not be published.