MARAKKAR: ಅಬ್ಬಬ್ಬಾ… ಅಟ್ಟರ್ ಫ್ಲಾಪ್ ಆಗುತ್ತೆ ಅಂದ್ಕೊಂಡ್ರೆ ರಿಲೀಸ್ಗೂ ಮೊದ್ಲೇ 100 ಕೋಟಿ ಬಾಚಿ ಬಿಡ್ತು ಈ ಸೌತ್ ಸಿನಿಮಾ!!
Cinema news Makkar film box office collection first India film to earn rupees 100 crore before release
MARAKKAR: ಸಾಮಾನ್ಯವಾಗಿ ಸಿನಿಮಾಗಳು ಟೀಸರ್(Teaser) ಮೂಲಕ ಹವಾ ಕ್ರಿಯೇಟ್ ಮಾಡಿ, ಕ್ಯೂರಿಯಾಸಿಟಿ ಹುಟ್ಟಿಸಿ ಬಿಡುಗಡೆಯ ಬಳಿಕ ಬಾಕ್ಸ್ ಆಫೀಸನ್ನೇ(Box Office) ಉಡೀಸ್ ಮಾಡೋ ರೀತಿ ಕಲೆಕ್ಷನ್(Collection) ಮಾಡಿಬಿಡುತ್ತವೆ. ಹೆಸರೊಂದಿಗೆ ದುಡ್ಡನ್ನೂ ಗಳಿಸಿಬಿಡುತ್ತವೆ. ಆದರೆ ಇಲ್ಲೊಂದು ಸಿನಿಮಾ ಬಿಡುಗಡೆಗೂ ಮುನ್ನ, ಬರೀ ಟೀಸರ್ ಮೂಲಕವೇ ಬರೋಬ್ಬರಿ 100 ಕೋಟಿಗೂ ಅಧಿಕವಾಗಿ ಕಲೆಕ್ಷನ್ ಮಾಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿತ್ತು.
ಹೌದು, ಇಂದು ಅನೇಕ ಸಿನಿಮಾಗಳು ದಾಖಲೆಗಳ ಮೇಲೆ ದಾಖಲೆ ಮಾಡುತ್ತಿವೆ. ಒಂದರ ದಾಖಲೆಯನ್ನು ಮತ್ತೊಂದು ಮುರಿಯುತ್ತಿವೆ. ಆದರೆ ಅಲ್ಲೊಂದು ಸಿನಿಮಾ ಈ ಹಿಂದೆಯೇ ಯಾರೂ ಮಾಡದ ದಾಖಲೆ ಮಾಡಿ ಸೈ ಎನಿಸಿಕೊಂಡಿತ್ತು. ತೋಪೆದ್ದು ಹೋಗುತ್ತೆ ಅಂದುಕೊಂಡ್ರೆ ರಿಲೀಸ್ ಗೂ ಮುಂಚೆಯೇ ಟೀಸರ್ ಮೂಲಕ 100 ಕೋಟಿ ಬಾಚಿಕೊಂಡಿತ್ತು. ಹಾಗಂತ ಅದು ಬಾಲಿವುಡ್(Bollywood) ಚಿತ್ರವೇನಲ್ಲ. ಹಾಲಿವುಡ್(Hollywood) ಕೂಡ ಅಲ್ಲ. ನಮ್ಮ ಸೌತ್ ಇಂಡಿಯಾ(South India) ಸಿನಿಮಾವದು!! ಹಾಗಾದರೆ ಯಾವುದಾ ಸಿನಿಮಾ? ಏನದರ ವಿಶೇಷತೆ ಗೊತ್ತಾ? ಅಥವಾ ಈಗಲೇ ತಲೆಯಲ್ಲಿ ಹೊಳೆದಿರಬಹುದಾ??
ಯಸ್ ನಾವು ಹೇಳ ಹೊರಟಿರುವುದು ಮೋಹನ್ಲಾಲ್(Mohanlal) ಸೇರಿದಂತೆ ಹಲವು ಖ್ಯಾತ ಕಲಾವಿದರು ಬಣ್ಣಹಚ್ಚಿರುವ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರ ಮಲೆಯಾಳಂ ಸಿನಿಮಾ ‘ಮರಕ್ಕರ್’ (MARAKKAR) ಅರ್ಥಾತ್ ಅರೇಬಿಯನ್ ಸಮುದ್ರದ ಸಿಂಹ ಬಗ್ಗೆ. ಕೆಲವೊಮ್ಮೆ ಸೂಪರ್‌ಸ್ಟಾರ್‌ಗಳನ್ನು ಹಾಕಿಕೊಂಡು, ನೂರಾರು ಕೋಟಿ ರೂಪಾಯಿ ಬಂಡವಾಳ ಹಾಕಿ ಚಿತ್ರ ಮಾಡಿದರೂ ತೋಪೆದ್ದು ಹೋಗುವುದು ಇದೆ. ಆದರೆ ಕೆಲವೇ ಕೆಲವು ಚಿತ್ರಗಳು ಬಾಕ್ಸ್ ಆಫೀಸ್ (Box office) ಕೊಳ್ಳೆ ಹೊಡೆಯುವುದೂ ಇದೆ. ಇನ್ನು ಬೆರಳೆಣಿಕೆ ಚಿತ್ರಗಳು ಬಿಡುಗಡೆಗೂ ಮುನ್ನವೇ ದಾಖಲೆ ಸೃಷ್ಟಿಸುವುದು ಇದೆ. ಈ ಕೊನೆಯ ಸಾಲಿಗೆ ಸೇರಿದ ಸಿನಿಮಾಗಳಲ್ಲಿ ರಾರಾಜಿಸುತ್ತಿರೋ ಸಿನಿಮಾ ಅಂದ್ರೆ ಅದು ‘ಮರಕ್ಕರ್’
ಮಲಯಾಳಂನ ಸ್ಟಾರ್ ನಟ ಮೋಹನ್ ಲಾಲ್ (Mohan Lal) ನಾಯಕರಾಗಿ ನಟಿಸಿರೋ ಮಲಯಾಳಂ ಚಿತ್ರವಿದು. ಈ ಚಿತ್ರ ಕನ್ನಡ, ತೆಲಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಆಗಿ ಬಿಡುಗಡೆಯಾಗಿದೆ. ಸುಮಾರು ನೂರು ಕೋಟಿ ಬಜೆಟ್ ನಲ್ಲಿ ಸಿದ್ಧವಾದ ಈ ಚಿತ್ರ ಬಜೆಟ್‌ನಲ್ಲಿ ಮಲಯಾಳಂನ ಚಿತ್ರರಂಗದಲ್ಲಿಯೇ ದಾಖಲೆ ಮಾಡಿದ್ದು, ಬಿಡುಗಡೆಗೂ ಮುನ್ನವೇ ನೂರು ಕೋಟಿ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಬರೀ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಯ ಮೂಲಕ ವಿಶ್ವಾದ್ಯಂತ ರಿಲೀಸ್‌ಗು ಮುನ್ನವೇ ಸಿನಿಮಾ 100 ಕೋಟಿ ಕ್ಲಬ್ ಸೇರಿಸಿಕೊಂಡಿತ್ತು. ಆ ಸಮಯದಲ್ಲಿ, ದಕ್ಷಿಣದ ಸೂಪರ್‌ಸ್ಟಾರ್ ಸಿನಿಮಾವು ವಿಶ್ವಾದ್ಯಂತ 100 ಕೋಟಿ ಕ್ಲಬ್‌ಗೆ ಪ್ರವೇಶಿಸಿದೆ ಎಂದು ಹೇಳಿಕೊಂಡಿದ್ದರು. ಈ ಚಿತ್ರದಲ್ಲಿ ಸೂಪರ್ ಸೌತ್ ನಟಿ ಕೀರ್ತಿ ಸುರೇಶ್ ಹಾಗೂ ಬಾಲಿವುಡ್ ನಟ ಸುನಿಲ್ ಶೆಟ್ಟಿ (Sunil Shetty) ಅವರೂ ನಟಿಸಿದ್ದಾರೆ.
ಅಷ್ಟಕ್ಕೂ ಈ ಸಿನಿಮಾ ಬಿಡುಗಡೆಗೂ ಒಂದು ಇಂಟರೆಸ್ಟಿಂಗ್ ಸ್ಟೋರಿ ಇದೆ. ಅದೇನೆಂದರೆ, ಸಿನಿಮಾ ಈ ಪರಿಯ ಸಕ್ಸಸ್ ಕಾಣುವುದನ್ನು ಕನಿಸಿನಲ್ಲಿಯೂ ಯೋಜನೆ ಮಾಡದಿದ್ದ ನಿರ್ಮಾಪಕ ಆಂಟೊನಿ, ಕೊರೊನಾ ಕಾರಣದಿಂದ ನೇರವಾಗಿ ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಿದರು. ಆದರೆ ಈ ಕುರಿತು ಕೇರಳ ಸರ್ಕಾರದ ಸಚಿವರು ಚಿತ್ರತಂಡದೊಂದಿಗೆ ಮಾತುಕತೆ ನಡೆಸಿ ಚಿತ್ರಮಂದಿರಗಳಲ್ಲೇ ಸಿನಿಮಾವನ್ನು ಬಿಡುಗಡೆ ಮಾಡಬೇಕೆಂದು ಕೋರಿದರು. ಅಂತಿಮವಾಗಿ ಚಿತ್ರತಂಡ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಒಪ್ಪಿಕೊಂಡಿತು. ನಂತರ ಆಗಿದ್ದೇ ಬೇರೆ. ಮುಂಗಡ ಕಾಯ್ದಿರಿಸುವಿಕೆಯಿಂದ ಬಂದ ಕಲೆಕ್ಷನ್ ನಿಜಕ್ಕೂ ಸಿನಿಮಾ ತಂಡಕ್ಕೆ ಅನಿರೀಕ್ಷಿತವಾಗಿತ್ತು. ಕೋವಿಡ್‌ನಿಂದ ಮಕಾಡೆ ಮಲಗಿದ್ದ ಚಲನಚಿತ್ರೋದ್ಯಮವು ಮತ್ತೆ ಯಶಸ್ಸು ಗಳಿಸಲು ಈ ಸಿನಿಮಾದ ಸಕ್ಸಸ್ ಬಹಳಷ್ಟು ಸಹಾಯ ಮಾಡಿತ್ತು. ಇದನ್ನು ಖುದ್ದು ಕೇಂದ್ರವೇ ಹೇಳಿತ್ತು.
ಅಂದಹಾಗೆ ಈ ಸಿನಿಮಾವು 16 ನೇ ಶತಮಾನದಲ್ಲಿನ ಕೇರಳದ ಕ್ಯಾಲಿಕಟ್‌ನ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಕುಂಜಾಲಿ ಮರಕ್ಕಾರ್ (ಮೋಹನ್ ಲಾಲ್) ಕ್ಯಾಲಿಕಟ್‌ನ ಜಾಮೋರಿನ್ ದೊರೆಗಳ ಕೆಳೆಗೆ ಕೆಲಸ ಮಾಡುವ ನಾವಿಕ ಸೇನಾಧಿಪತಿ. ಈತ ಕುಂಜಾಲಿ ಪೋರ್ಚುಗೀಸ್ (Portuguese) ದಾಳಿಯಲ್ಲಿ ತನ್ನ ತಂದೆ-ತಾಯಿ ಮತ್ತು ಪತ್ನಿಯನ್ನು ಕಳೆದುಕೊಂಡು, ಚಿಕ್ಕಪ್ಪನ ಸಹಾಯದಿಂದ ಬದುಕುಳಿದಿರುತ್ತಾನೆ. ನಂತರ ಜಾಮೋರಿನ ದೊರೆಯು ತನ್ನ ಮುಖ್ಯ ಸೇನಾಧಿಪತಿ ಆನಂದನ್ ಮನಗಟ್ಟಚನ್ ಮಾತಿನಂತೆ `ಕುಂಜಾಲಿ’ಯನ್ನು ನಾವಿಕ ಪಡೆಯ ಸೇನಾಧಿಪತಿಯನ್ನಾಗಿ ಮಾಡಿರುತ್ತಾನೆ. ಮರಕ್ಕಾರ್ ಪ್ರಪ್ರಥಮ ಬಾರಿಗೆ ನಾವಿಕ ಸೇನೆಯನ್ನು ಸಿದ್ಧಪಡಿಸಿ ಕ್ಯಾಲಿಕಟ್ ಅನ್ನು ಪೋರ್ಚುಗೀಸ್‌ರಿಂದ ಸುರಕ್ಷಿತಗೊಳಿಸುತ್ತಾನೆ. ಈ ನಾವಿಕ ದಳ ಸುಮಾರು ಒಂದು ಶತಮಾನಗಳ ಕಾಲ ಪೋರ್ಚುಗೀಸ್ ರ ಆಕ್ರಮಣ ತಡೆಯುವುದೇ ಈ ಕಥೆಯ ಕಥಾಹಂದರವಾಗಿದೆ.