Shakti Free Bus: ಒಂದು ವಾರದಲ್ಲಿ 3,00,00,000 ಗೂ ಅಧಿಕ ಮಹಿಳೆಯರಿಂದ ಬಸ್ ಯಾತ್ರೆ, ಟಿಕೆಟ್ ವೆಚ್ಚ ಎಷ್ಟಾಗಿರಬಹುದು ?

Shakti Free Bus free bus free bus for women Bus travel by more than 3,00,00,000 women in a week, how much can the ticket cost

Shakti Free Bus: ಕಾಂಗ್ರೆಸ್ ಸರ್ಕಾರದ (Congress Government) ತೀವ್ರ ಜನ ಬೇಡಿಕೆಯ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆಗೆ (Shakti Scheme) ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಚಾಲನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಿದರು. ಜೂ.11 ರಿಂದ ರಾಜ್ಯಾದ್ಯಂತ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್‍ ಗಳಲ್ಲಿ (Government Bus) ಉಚಿತ ಪ್ರಯಾಣ ಸೌಲಭ್ಯ ಆರಂಭಗೊಂಡಿದೆ.

 

ರಾಜ್ಯದ ಉದ್ದಗಲಕ್ಕೆ ಕರ್ನಾಟಕ ಸಾರಿಗೆಯ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ (Shakti Free Bus) ಸೌಲಭ್ಯ ರಾಜ್ಯ ಸರ್ಕಾರ ಒದಗಿಸಿದೆ. ಸದ್ಯ ಕರ್ನಾಟಕ ಸರ್ಕಾರದ (karnataka Government) ಶಕ್ತಿ ಯೋಜನೆಯ (Shakthi Scheme) ಉಚಿತ ಬಸ್‌ ಪ್ರಯಾಣಕ್ಕೆ (Free bus travel) ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗಿದೆ. ದಿನೇ ದಿನೇ ನಾರಿಮಣಿಯರ ಪ್ರಯಾಣ ಹೆಚ್ಚಾಗುತ್ತಿದೆ. ಬಸ್ ಗಳು ರಶ್ ಆಗಿ ಸಾಗುತ್ತಿವೆ. ಒಂದು ವಾರದಲ್ಲಿಯೇ 3,00,00,000 ಗೂ ಅಧಿಕ ಮಹಿಳೆಯರು ಬಸ್ ನಲ್ಲಿ ಪ್ರಯಾಣಿಸಿದ್ದಾರೆ. ಟಿಕೆಟ್ ವೆಚ್ಚ ಎಷ್ಟಾಗಿದೆ ಗೊತ್ತಾ? ದಿನಾಂಕ 11ರಿಂದ 17ರ ವರೆಗೆ ಎಷ್ಟು ಮಹಿಳೆಯರು ಪ್ರಯಾಣಿಸಿದರು? ಎಂಬುದರ ವಿವರ ಇಲ್ಲಿದೆ.

ಜೂನ್ 11ರಿಂದ 17ರ ವರೆಗೆ ಎಷ್ಟು ಮಹಿಳೆಯರು ಪ್ರಯಾಣಿಸಿದರು? ಟಿಕೆಟ್ ವೆಚ್ಚ ಎಷ್ಟು?

• ಜೂನ್ 11ರಂದು ಭಾನುವಾರ 5,71,023 ಮಂದಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಪ್ರಯಾಣದ ವೆಚ್ಚ 1,40,22,878 ರೂಪಾಯಿ ಆಗಿದೆ.
• ಜೂನ್ 12ರಂದು ಸೋಮವಾರ 41,34,726 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ವೆಚ್ಚ 8,83,53,434 ರೂಪಾಯಿ ಆಗಿದೆ.
• ಜೂನ್ 13ರ ಮಂಗಳವಾರ 51,52,769 ಮಂದಿ ಮಹಿಳೆಯರು ಪ್ರಯಾಣಿಸಿದ್ದಾರೆ. ಪ್ರಯಾಣದ ವೆಚ್ಚ 10,82,02,191 ರೂಪಾಯಿ.
• ಬುಧವಾರ 50,17,174 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 11,51,08,324 ರೂಪಾಯಿ.
• ಗುರುವಾರ 54,05,629 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 12,37,89,585 ರೂಪಾಯಿ.
• ಶುಕ್ರವಾರ 55,09,770 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣ ವೆಚ್ಚ 12,45,19,265 ರೂಪಾಯಿ.
• ಶನಿವಾರ 54,30,150 ಮಂದಿ ಮಹಿಳಾ ಪ್ರಯಾಣಿಕರ ಪ್ರಯಾಣ. ಪ್ರಯಾಣದ ವೆಚ್ಚ 12,88,81,618 ರೂಪಾಯಿ.
• ಜೂನ್ 11ರಿಂದ ಜೂನ್ 17ರ ಶನಿವಾರದವರೆಗೆ ಒಟ್ಟು 3,12, 9, 696 ಮಂದಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಪ್ರಯಾಣದ ವೆಚ್ಚ 69,77, 68, 971 ರೂ. ಆಗಿದೆ.

ಶಕ್ತಿ ಯೋಜನೆ ಜಾರಿಯಾಗುವ ಮುನ್ನ ಪ್ರಯಾಣಿಕರ ಸಂಖ್ಯೆ ಎಷ್ಟು?

ಪ್ರಯಾಣಿಕರ ಸಂಖ್ಯೆ ಪ್ರತಿದಿನ 23, 59000 ಅದರಲ್ಲಿ 50% ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಒಂದು ದಿನದ ಆಗಿನ ಆದಾಯ 9 ಕೋಟಿ 79 ಲಕ್ಷದ 47 ಸಾವಿರ ರುಪಾಯಿ.

ವಾಯುಯ್ಯ- (ಎನ್ ಡಬ್ಲೂಕೆಆರ್ಟಿಸಿ) ಯಲ್ಲಿ ಪ್ರತಿದಿನ 16 ಲಕ್ಷದ 94 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅದರಲ್ಲಿ 50% ರಷ್ಟು ‌ಮಹಿಳಾ ಪ್ರಯಾಣಿಕರು. ಒಂದು ದಿನದ ಆದಾಯ- 4 ಕೋಟಿ 73 ಲಕ್ಷದ 8 ಸಾವಿರ ರುಪಾಯಿ.

ಬಿಎಂಟಿಸಿ ಬಸ್ಸುಗಳಲ್ಲಿ ಪ್ರತಿದಿನ 28 ಲಕ್ಷ ಜನ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಅದರಲ್ಲಿ 50% ಮಹಿಳಾ ಪ್ರಯಾಣಿಕರು ಆಗಿದ್ದರು. ಆಗಿನ ಒಂದು ‌ದಿನದ ಆದಾಯ- 4 ಕೋಟಿ 44 ಲಕ್ಷ 5 ಸಾವಿರ ರುಪಾಯಿ.

ಕಲ್ಯಾಟ ಕರ್ನಾಟಕ , ಕೆಕೆಆರ್ಟಿಸಿಯಲ್ಲಿ ಪ್ರತಿದಿನ 14 ಲಕ್ಷದ 64 ಸಾವಿರ ಜನರು ಪ್ರಯಾಣಿಸುತ್ತಿದ್ದರು. 50% ರಷ್ಟು ಮಹಿಳೆಯರು. ಒಂದು ದಿನದ ಸಾರಿಗೆ ಆದಾಯ- 4 ಕೋಟಿ 16 ಲಕ್ಷದ 72 ಸಾವಿರ ಆಗಿತ್ತು. ಒಟ್ಟು ನಾಲ್ಕು ನಿಗಮದ ಸಾರಿಗೆ ಆದಾಯ- 23 ಕೋಟಿ 13 ಲಕ್ಷ 32 ಸಾವಿರ ರುಪಾಯಿ ಆಗಿತ್ತು.

 

ಇದನ್ನು ಓದಿ: Modi Govt Schemes: ಮೋದಿ ಸರ್ಕಾರದ ಈ 3 ಯೋಜನೆಗಳು ಜನರಿಗೆ ದೊಡ್ಡ ಉಳಿತಾಯವನ್ನು ನೀಡುತ್ತದೆ! ಯಾವುದೀ ಯೋಜನೆ? ಬನ್ನಿ ತಿಳಿಯೋಣ

Leave A Reply

Your email address will not be published.