Mobile: ಮೊಬೈಲ್ ಕೊಡದ ಹೆತ್ತವರಿಗೇ ಸ್ಕೆಚ್, 13 ವರ್ಷದ ಬಾಲಕಿ ಮಾಡಿದ ಮಾಸ್ಟರ್ ಪ್ಲಾನ್ ಕೇಳಿದ್ರೆ ಬೆವೆತು ಬಿಡ್ತೀರಾ !

What is the plot of the girl because her parents took away her mobile phone

Mobile: ಮೊಬೈಲ್ (Mobile) ಗೀಳು ಮಕ್ಕಳ ಕೈಯಲ್ಲಿ ಏನೆಲ್ಲಾ ಮಾಡಿಸುತ್ತೆ ಅನ್ನೋದು ಕೆಲವೊಮ್ಮೆ ಊಹಿಸುವುದು ಕೂಡ ಕಷ್ಟ ಸಾಧ್ಯ. ಹೌದು, ಇಲ್ಲೊಬ್ಬ ಬಾಲಕಿ ಹೆತ್ತವರು ಮೊಬೈಲ್ ಕಿತ್ತುಕೊಂಡರು ಎಂಬ ಕಾರಣಕ್ಕೆ ಏನೆಲ್ಲಾ ಸಂಚು ಮಾಡಿದ್ದಾಳೆ ನೋಡಿ.

 

ಇದ್ದಕ್ಕಿದ್ದಂತೆ ಮನೆಯ ಅಡುಗೆ ಕೋಣೆಯಲ್ಲಿ ಸಕ್ಕರೆ ಡಬ್ಬದಲ್ಲಿ ಕೀಟನಾಶಕದ ಪುಡಿ ಸಿಗುತ್ತಿತ್ತು! ಬಚ್ಚಲು ಮನೆಯಲ್ಲಿ ಫೆನಾಯಿಲ್ ರೀತಿಯ ದ್ರವ ಕಂಡು ಬರ್ತಿತ್ತು! ಆತಂಕ ಗೊಂಡ ಮನೆಯವರು ತಮ್ಮ 13 ವರ್ಷದ ಮಗಳಿಗೆ ಏನಾದ್ರೂ ಅಪಾಯವಾದ್ರೆ ಕಷ್ಟ ಅಂತಾ ಮುಂಜಾಗ್ರತೆ ವಹಿಸಿದ್ದ ಈ ಕುಟುಂಬ, ಈ ರೀತಿಯ ಕೃತ್ಯ ಎಸಗುತ್ತಿರೋದು ಯಾರು ಎಂದು ಪತ್ತೆ ಹಚ್ಚಲು ಹೊರಟಾಗ ಶಾಕಿಂಗ್ ಸಂಗತಿ ಕಾದಿತ್ತು!
ಆದರೆ ಈ ಪ್ಲಾನ್ ಎಲ್ಲಾ ತಮ್ಮ ಮುದ್ದಿನ ಮಗಳದ್ದೇ ಅನ್ನೋ ವಿಚಾರ ತಿಳಿದಾಗ ಹೆತ್ತವರು ಅಘಾತಗೊಂಡಿದ್ದಾರೆ.

ಸದ್ಯ ವಿಚಾರ ಗೊತ್ತಾಗಿದ್ದೇ ತಡ ಬಾಲಕಿಯ ಪೋಷಕರು ಮಕ್ಕಳ ಹೆಲ್ಪ್‌ಲೈನ್‌ಗೆ ಕರೆ ಮಾಡಿ ನೆರವು ನೀಡುವಂತೆ ಕೇಳಿಕೊಂಡರು. ನಾವು ಮದುವೆಯಾಗಿ 13 ವರ್ಷಗಳ ಬಳಿಕ ಹುಟ್ಟಿದ ಮಗು ಇದು. ನಮಗೆ ನಮ್ಮ ಮಗಳನ್ನು ಬಿಟ್ಟರೆ ಬೇರೆ ಯಾರೂ ಇಲ್ಲ. ಹೀಗಾಗಿ, ಅವಳ ಮಾನಸಿಕ ಸ್ಥಿತಿಯನ್ನು ಸರಿಪಡಿಸಿ ಎಂದು ಹೆತ್ತವರು ಹೆಲ್ಪ್‌ಲೈನ್ ಮೊರೆ ಹೋದರು.

ಹೆಲ್ಪ್‌ಲೈನ್‌ನ ಸಿಬ್ಬಂದಿ ಹಾಗೂ ಮನಃಶಾಸ್ತ್ರಜ್ಞರು ಬಾಲಕಿಯ ಕೌನ್ಸೆಲಿಂಗ್ ನಡೆಸಿದಾಗ ತನ್ನ ಈ ಸಂಚಿಗೆ ಕಾರಣ ಏನು ಎಂದು ಬಾಯ್ಬಿಟ್ಟಳು. ಕೆಲವು ದಿನಗಳ ಹಿಂದೆ ಬಾಲಕಿಯ ಹೆತ್ತವರು ಆಕೆಯ ಬಳಿ ಇದ್ದ ಮೊಬೈಲ್ ಫೋನ್ ಕಿತ್ತುಕೊಂಡಿದ್ದರು. ವಾಪಸ್ ಕೊಡೋದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿದ್ದರು ಎಂಬ ಕಾರಣ ಹೊರ ಬಿದ್ದಿದೆ.

ಆದರೆ ಇದಕ್ಕೆ ಪೋಷಕರು, ಮಗಳು ಇಡೀ ದಿನ ಮೊಬೈಲ್ ಫೋನ್‌ನಲ್ಲೇ ಮುಳುಗಿರುತ್ತಿದ್ದಳು. ಸ್ನೇಹಿತರ ಜೊತೆ ಚಾಟ್ ಮಾಡೋದು, ಮಾತುಕತೆ ನಡೆಸೋದು, ಸೋಷಿಯಲ್ ಮೀಡಿಯಾಗಳಲ್ಲಿ ರೀಲ್ಸ್‌ ಮಾಡೋದು, ಹೀಗೆ ಇಡೀ ದಿನ ಮೊಬೈಲ್‌ನಲ್ಲೇ ಮುಳುಗಿರುತ್ತಿದ್ದಳು, ಓದಿನ ಕಡೆ ಗಮನ ಇಲ್ಲದೆ, ಇತ್ತ ಕುಟುಂಬಸ್ಥರ ಜೊತೆಗೂ ಆಕೆ ಬೆರೆಯದೇ ಇದ್ದಾಗ ಭಯಗೊಂಡು ಮೊಬೈಲ್ ಕಿತ್ತುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಆದರೆ ಮಗಳಿಂದ ಮೊಬೈಲ್ ಕಸಿದುಕೊಂಡಿದ್ದ ಪೋಷಕರಿಗೆ ತಮ್ಮ ಮಗಳು ತಮ್ಮ ವಿರುದ್ದವೇ ಸಂಚು ಮಾಡಬಹುದು, ತಮ್ಮ ಕೊಲೆಗೆ ಯತ್ನಿಸಬಹುದು ಎಂದು ಊಹೆ ಕೂಡ ಇರಲಿಲ್ಲ. ಇದೀಗ ಸತ್ಯ ಗೊತ್ತಾಗಿದ್ದೇ ತಡ, ಹೆತ್ತವರು ಶಾಕ್‌ಗೆ ಒಳಗಾಗಿದ್ದಾರೆ.

 

ಇದನ್ನು ಓದಿ: Health tips: ಧಾರಾಕಾರ ಮಳೆಯಲ್ಲಿ ಒದ್ದೆಯಾಗುತ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಎದುರಾಗುವುದು ಗ್ಯಾರಂಟಿ.! 

Leave A Reply

Your email address will not be published.