Shakti Scheme : ಮನೇಲಿ ಹೆಂಡ್ತಿ ಅಡುಗೆ ಮಾಡ್ತಿಲ್ಲ, 2 ಸೀರೆ ಹಿಡ್ಕೊಂಡು ‘ ನಾಳೆ ಬರ್ತೆ ‘ ಅಂತ ಧರ್ಮಸ್ಥಳ ಫ್ರೀ ಬಸ್ ಹತ್ತಿದೋಳು ಇವತ್ತಿಗೂ ಪತ್ತೆ ಇಲ್ಲ !
Karnataka government Congress guarantees Shakti scheme effects women went Dharmasthala in free bus not returned
Shakti Scheme : ಕರ್ನಾಟಕ ಸರ್ಕಾರದ (karnataka Government) ಶಕ್ತಿ ಯೋಜನೆಯ (Shakti Scheme) ಉಚಿತ ಬಸ್ ಪ್ರಯಾಣಕ್ಕೆ (Free bus travel) ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗಿದೆ. ದಿನೇ ದಿನೇ ನಾರಿಮಣಿಯರ ಪ್ರಯಾಣ ಹೆಚ್ಚಾಗುತ್ತಿದೆ. ಬಸ್ ಗಳು ರಶ್ ಆಗಿ ಸಾಗುತ್ತಿವೆ. ಗಂಡಸರಿಗೆ ಸ್ವಲ್ಪವೂ ಜಾಗ ಸಿಗದ ಹಾಗೇ ಮಹಿಳೆಯರು ಬಸ್ ಪೂರ್ತಿ ಬುಕ್ ಮಾಡಿದವರೂ ಇದ್ದಾರೆ. ಮಹಿಳೆಯರಿಗೆ ಜಾರಿಯಾದ ಯೋಜನೆಯನ್ನು ಚೆನ್ನಾಗಿಯೇ ಹೆಂಗಸರು ಬಳಸಿಕೊಳ್ಳುತ್ತಿದ್ದಾರೆ. ಆದರೆ, ಗಂಡಸರ ಗೋಳು ಯಾರಿಗೂ ಬೇಡ. ಹೌದು, ಮನೇಲಿ ಹೆಂಡ್ತಿ ಅಡುಗೆ ಮಾಡ್ತಿಲ್ಲ, 2 ಸೀರೆ ಹಿಡ್ಕೊಂಡು ‘ ನಾಳೆ ಬರ್ತೆ ‘ ಅಂತ ಧರ್ಮಸ್ಥಳ ಫ್ರೀ ಬಸ್ ಹತ್ತಿದೋಳು ಇವತ್ತಿಗೂ ಪತ್ತೆ ಇಲ್ಲ ಎಂದು ಪತಿಯೊಬ್ಬ ತನ್ನ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಪ್ರಯಾಣಿಕರೊಬ್ಬರು ಪ್ರೀ ಬಸ್ ನಿಂದಾಗಿ ತಮಗಾದ ಎಫೇಕ್ಟ್ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ಹೆಂಡತಿ
ಎರಡು ಸೀರೆ ತೆಗೆದುಕೊಂಡು, ರಾತ್ರಿ ಹೋಗಿ ಬೆಳಗ್ಗೆ ಬರ್ತೀನಿ ಅಂತಾ ಹೇಳಿದ್ದಳು. ಧರ್ಮಸ್ಥಳಕ್ಕೆ ಹೋದ ನನ್ನ ಹೆಂಡ್ತಿ ಇನ್ನೂ ಬಂದೇ ಇಲ್ಲ. ಆಕೆಯನ್ನು ಎಲ್ಲಿ ಹುಡುಕುವುದು? ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಉಚಿತ ಬಸ್ ಸೌಲಭ್ಯ ನೀಡಿದಾಗಿನಿಂದ ಮನೆಯಲ್ಲಿ ಹೆಂಗಸರು ಅಡುಗೆ ಮಾಡುತ್ತಿಲ್ಲ. ಯಾವ ಕೆಲಸವೂ ಆಗುತ್ತಿಲ್ಲ. ಬಸ್ಸಿನಲ್ಲಿ ತಿರುಗುವುದೇ ಆಯಿತು. ಭಾನುವಾರ ಬಂದ್ರೆ ಸಾಕು ಬಸ್ಸು ಹತ್ತಿ ಬೇಕಾದಲ್ಲಿ ಹೋಗುತ್ತಾರೆ. ಗಂಡಸರ ಪಾಡು ಯಾರಿಗೆ ಬೇಕು. ಬಸ್ಸಿನಲ್ಲಿ ಕಾಲಿಡುವಂತಿಲ್ಲ. ಹೆಂಗಸರಿಗೆ ಮಾತ್ರ ಯಾಕೆ ಫ್ರೀ? ಗಂಡಸರೇನು ಓಟ್ ಹಾಕಿಲ್ವಾ? ಮುಂದಿನ ಎಲೆಕ್ಷನ್ ನಲ್ಲಿ ಓಟ್ ನೋಡಿಕೊಡ್ತೀವಿ ಅಂತಾ ಎಂದು ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ವೀಕೆಂಡ್ ಹಿನ್ನೆಲೆಯಲ್ಲಿ ಇಂದು ಮಹಿಳೆಯರು ಪ್ರವಾಸ, ಪುಣ್ಯಕ್ಷೇತ್ರಗಳಿಗೆ ಹೊರಟಿದ್ದಾರೆ. ಭಾನುವಾರ ಶನಿವಾರಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ದಕ್ಷಿಣ ಕನ್ನಡ ಜಿಲ್ಲೆಯ ದರ್ಮಸ್ಥಳ, ಸೌತಡ್ಕ, ಸುಬ್ರಹ್ಮಣ್ಯ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಭೇಟಿ ಮಾಡಿ ದೇವರ ದರ್ಶನ ಪಡೆದಿದ್ದಾರೆ. ಬಸ್ ಪೂರ್ತಿ ಮಹಿಳೆಯರೇ ತುಂಬಿ ಹೋಗಿದ್ದಾರೆ.
ಇದನ್ನೂ ಓದಿ: Actor Vijay Gift: ಹೈಸ್ಕೂಲ್ ವಿದ್ಯಾರ್ಥಿನಿಗೆ ಡೈಮಂಡ್ ನೆಕ್ಲೇಸ್ ಗಿಫ್ಟ್ ನೀಡಿದ ನಟ ವಿಜಯ್ !