Pratap Simha -M.B patil: ಕಂತೆ ಕಂತೆ ಕಾಸ್ ಸಿಗೋ ಖಾತೆ ಸಿಕ್ಕಿಲ್ಲ ಅಂತ ‘ ಕಾಕಾ ಪಾಟೀಲ್ ‘ ಒದ್ದಾಟ – ಈ ಮಾತನ್ನು ಯಾರು ಯಾರಿಗೆ ಹೇಳಿದ್ರು ?!

kannada news latest news Karnataka political matter

Pratap Simha -M.B patil: ಸಚಿವ ಎಂ.ಬಿ. ಪಾಟೀಲ್ (M.B patil) ಹಾಗೂ ಸಂಸದ ಪ್ರತಾಪ್ ಸಿಂಹ ನಡುವೆ ವಾಕ್ಸಮರಗಳು ನಡೆಯುತ್ತಲೇ ಇದೆ. ಪ್ರತಾಪ್ ಸಿಂಹ (Pratap Simha -M.B patil) ಚಿಲ್ಲರೆ ರಾಜಕಾರಣ ಬಿಡಲಿ ಎಂದು ಸಚಿವ ಎಂ.ಬಿ. ಪಾಟೀಲ್ ಈ ಹಿಂದೆ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಕಂತೆ ಕಂತೆ ಕಾಸ್ ಸಿಗೋ ಖಾತೆ ಸಿಕ್ಕಿಲ್ಲ ಅಂತ ‘ ಕಾಕಾ ಪಾಟೀಲ್ ‘ ಒದ್ದಾಟ ಎಂದು ಪಾಟೀಲ್ ಗೆ ತಿರುಗೇಟು ನೀಡಿದ್ದಾರೆ.

 

ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಎಂ.ಬಿ. ಪಾಟೀಲ್ ಗೆ ಕೂತಲ್ಲಿಯೇ ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ. ಈಗ ಸಿಕ್ಕಿರುವ ಖಾತೆಯಲ್ಲಿ ಬರೀ ಚಿಲ್ಲರೆ ಸಿಗುತ್ತದೆ. ಹಾಗಾಗಿ ಒದ್ದಾಡುತ್ತಿದ್ದಾರೆ. ಪಾಟೀರಲಿಗೆ ಚಿಲ್ಲರೆ, ನೋಟು ಇದರದ್ದೇ ಚಿಂತೆ ಎಂದು ಖಾರವಾಗಿ ಉತ್ತರ ನೀಡಿದರು.

ಸಿದ್ದರಾಮಯ್ಯರನ್ನು ಓಲೈಕೆ ಮಾಡುವುದೇ ತಮ್ಮ ಖಾತೆ ಜವಾಬ್ದಾರಿ ಅಂತಾ ಪಾಟೀಲ್ ಅಂದುಕೊಂಡಿದ್ದಾರೆ. ಸಿದ್ದರಾಮಯ್ಯ ಬಂದೂಕಿಗೆ ಹೆಗಲು ಕೊಡೋದೆ ನಿಮ್ಮ ಕೆಲಸನಾ ? ಎಂದು ಕೂಡ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ವಿದ್ಯುತ್ ದರ ಕಡಿಮೆ ಮಾಡಲ್ಲ ಎಂದು ಹೇಳಿದೆ. ಅಂದರೆ ಕೈಗಾರಿಕೆಗಳು ಮುಚ್ಚಿ ಹೋಗಲಿ ಎಂಬ ಭಾವನೆ ಸರ್ಕಾರಕ್ಕೆ ಇರಬಹುದು. ನಿಮ್ಮ ಬಿಟ್ಟಿ ಭಾಗ್ಯಗಳಿಗೆ ದುಡ್ಡು ಎಲ್ಲಿಂದ ಬರಬೇಕು. ಇಂಡಸ್ಟ್ರೀಸ್ ಗೆ ಬರೆ ಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರದ ನಿಲುವನ್ನು ನಾವು ಖಂಡಿಸುತ್ತೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

 

ಇದನ್ನು ಓದಿ: Kolkata: ಬಾಲ್‌ ಎಂದು ಬಾಂಬ್‌ ಎತ್ತಿಕೊಂಡ ಮಕ್ಕಳು, ತೀವ್ರ ಸ್ಫೋಟ! ಸ್ಫೋಟದಲ್ಲಿ ಐವರಿಗೆ ಗಾಯ

Leave A Reply

Your email address will not be published.