Mangaluru News: ಕಳವು ನಡೆದ ಮೂರೇ ಗಂಟೆಯೊಳಗೆ ಅರೆಸ್ಟ್ ಮಾಡಿದ ಮಂಗಳೂರು ಸಿಟಿ ಪೊಲೀಸರು! ಏನಿದು ಘಟನೆ? ಇಲ್ಲಿದೆ ವಿವರ
Latest mangaluru crime news mangaluru city police arrested four people house theft case in just for 3 hours
Mangaluru News: ಮಂಗಳೂರಿನ (Mangaluru News) ಅಪಾರ್ಟ್‌ಮೆಂಟ್‌ವೊಂದರ ಮನೆಯಲ್ಲಿ ಕಳ್ಳತನ ನಡೆಸಿ ದೆಹಲಿಗೆ ಪರಾರಿಯಾಗಲು ಯತ್ನಿಸಿದ್ದ ಆರೋಪಿಗಳನ್ನು ಪ್ರಕರಣ ದಾಖಲಾದ ಮೂರು ಗಂಟೆಯ ಒಳಗಡೆ ಬಂಧನ ಮಾಡಲಾಗಿದೆ. ಈ ಆರೋಪಿಗಳು ದೆಹಲಿ ಮತ್ತು ಪಶ್ಚಿಮ ಬಂಗಾಳ ಮೂಲದವರೆಂದು ಹೇಳಲಾಗಿದೆ. ಕಳ್ಳತನದ ಪ್ರಕರಣ ಬ್ರಿಜೇಶ್ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ನಡೆದಿದೆ. ಆದರೆ ಇಲ್ಲೊಂದು ವಿಚಿತ್ರ ನಡೆದಿದೆ. ಏಕೆಂದರೆ ದೂರು ಕೊಟ್ಟ ಮೂರೇ ಗಂಟೆಯಲ್ಲಿ ಆಪಾದಿತರನ್ನು ಹಿಡಿದಿರುವ ಘಟನೆ ನಡೆದಿದೆ.
ಏಕೆಂದರೆ ಏನೇ ಕಳವು, ಕಳ್ಳತನ ನಡೆದರೂ ದೂರು ಕೊಟ್ಟು ಹಲವು ವರ್ಷಗಳು ಕಳೆದರೂ ತಮ್ಮ ಕಳೆದು ಹೋದ ಸ್ವತ್ತು ಸಿಗಲು ಪರದಾಟ ನಡೆಸಬೇಕಾದ ಈ ಕಾಲದಲ್ಲಿ ಈ ವಿಶೇಷ ನಡೆದಿರುವು ನಿಜಕ್ಕೂ ಖುಷಿಯ ಸಂಗತಿ ಎಂದೇ ಹೇಳಬಹುದು. ಈ ಶ್ಲಾಘನೀಯ ಕೆಲಸ ಮಾಡಿದ್ದು ಮಂಗಳೂರಿನ ಸಿಟಿ ಪೊಲೀಸರು. ಬಂಧಿತರಿಂದ ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನಾಭರಣ ಹಾಗೂ ನಗದು ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಶ್ಚಿಮ ದೆಹಲಿಯ ಮೊಹಮ್ಮದ್ ಅಶೀಪ್ ಯಾನೆ ಆಶೀಷ್ (23), ಶೇಕ್ ಮೈದುಲ್ (25), ವಕೀಲ್ ಅಹಮ್ಮದ್ (34), ಪಶ್ಚಿಮ ಬಂಗಾಲದ ರಫೀಕ್ ಖಾನ್ (24) ಬಂಧಿತ ಆರೋಪಿಗಳು.
ಜೂನ್.15 ರ ಮಧ್ಯಾಹ್ನ 1-3ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಬ್ರಿಜೇಶ್ ಅಪಾರ್ಟ್‌ಮೆಂಟ್‌ನ ಮನೆಯ ಎದುರು ಬಾಗಿಲನ್ನು ಮುರಿದು ಕಪಾಟಿನಲ್ಲಿದ್ದ ಚಿನ್ನಾಭರಣ ಸೇರಿ ನಗದು ಹಣವನ್ನು ದೋಚಲಾಗಿತ್ತು. ಇದರ ಒಟ್ಟು ಮೌಲ್ಯ 4,45,000 ಎಂದು ಹೇಳಲಾಗಿದೆ. ಈ ಬಗ್ಗೆ ವಿಜಯಪುರ ಜಿಲ್ಲೆಯ ಪೂಜಾ ಅವರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅದರಂತೆ ಮಂಗಳೂರು ದಕ್ಷಿಣ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಅದೇ ದಿನ ಸಂಜೆ ಈ ಕಳವು ನಡೆಸಿದ ವ್ಯಕ್ತಿಗಳು ಮಂಗಳೂರು ನಗರದ ಪಣಂಬೂರು ಬೀಚ್ ಬಳಿ ಸಂಶಯಾಸ್ಪದ ರೀತಿಯಲ್ಲಿ ನಾಲ್ವರು ಯುವಕರು ತಿರುಗಾಡುತ್ತಿದ್ದರು. ಇದನ್ನು ನೋಡಿದ ಪೊಲೀಸರು ಸಂಶಯಕ್ಕೊಳಗಾಗಿ ಆ ಯುವಕರನ್ನು ವಶಕ್ಕೆ ಪಡೆಯುತ್ತಾರೆ. ಅನಂತರ ಠಾಣಗೆ ಕರೆತಂದಾಗಿ ಪೊಲೀಸ್ ನಿರೀಕ್ಷಕರು ಕೂಲಂಕುಷವಾಗಿ ವಿಚಾರಣೆ ನಡೆಸಿದಾಗ ಈ ಕಳ್ಳತನದ ಮಾಹಿತಿ ಹೊರಬಂದಿದೆ. ಈ ಆರೋಪಿಗಳು ಸಿ ಸಿ ಕ್ಯಾಮೆರಾ ಇಲ್ಲದೇ ಇರುವ ಬೀಗ ಹಾಕಿರುವ ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳನ್ನೇ ಗುರಿಯಾಗಿಸಿಕೊಂಡು ಕಳವು ನಡೆಸುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ.