Tulasi Plant: ತುಳಸಿ ಗಿಡ ಹೀಗಿದ್ದಲ್ಲಿ ಗಂಡಾಂತರ ತಪ್ಪಿದ್ದಲ್ಲ, ಅದಕ್ಕಾಗಿ ಈ ರೀತಿ ಮಾಡಿ!

Religious belives astrology news Vastu shastra news Tulasi plant vastu shastra

Tulasi Plant: ತುಳಸಿ ಗಿಡವು (Tulasi Plant) ಮನೆಯ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡುತ್ತದೆ ಎಂದು ಹೇಳಲಾಗುತ್ತದೆ. ತುಳಸಿ ಎಲೆಗಳಿಲ್ಲದೆ, ವಿಷ್ಣು ಮತ್ತು ಕೃಷ್ಣನ ದೈನಂದಿನ ಪೂಜೆ ಪೂರ್ಣಗೊಳ್ಳುವುದಿಲ್ಲ ಅಂತ ಸಹ ಹೇಳಲಾಗುತ್ತದೆ. ಅಲ್ಲದೆ ತುಳಸಿ ಗಿಡ ಇದೊಂದು ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ ಅಂತ ಹೇಳಬಹುದು.

 

ದೇವರ ಆರಾಧನೆಯ ಸಮಯದಲ್ಲಿ ಅರ್ಚನೆಗೂ ಇದನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಬಹು ಮುಖ್ಯವಾಗಿ ಈ ತುಳಸಿ ಗಿಡವು ಮನೆಗೆ ವಿಪತ್ತು ಸಂಭವಿಸುವ ಮೊದಲೇ ಎಚ್ಚರಿಕೆ ಸಂಕೇತವನ್ನು ನೀಡುತ್ತವಂತೆ. ಈ ಗಿಡಗಳು ಒಳ್ಳೆಯ ಸುದ್ದಿಯನ್ನು ಸಹ ಸೂಚಿಸುತ್ತದೆ ಅಂತ ಹೇಳಲಾಗುತ್ತದೆ.

ತುಳಸಿಯು ನಿಮ್ಮನ್ನು ವೈಕುಂಠದ ಕಡೆಗೆ ಕರೆದೊಯ್ಯುವ ಮತ್ತು ಜನ್ಮ ಚಕ್ರದಿಂದ ನಿಮ್ಮನ್ನು ಮುಕ್ತಗೊಳಿಸುವ ರಾಜಮಾರ್ಗವಾಗಿದೆ. ತುಳಸಿಯ ಪ್ರತಿಯೊಂದು ಭಾಗವು ವಿವಿಧ ದೇವತೆಗಳ ಉಪಸ್ಥಿತಿಯನ್ನು ಹೊಂದಿದೆ. ಲಕ್ಷ್ಮಿ ದೇವಿಯ ಅವತಾರವಾದ ತುಳಸಿಯನ್ನು ಪ್ರತಿದಿನ ಪೂಜಿಸಿದರೆ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ.

ಹಿಂದೂ ಸಂಪ್ರದಾಯ ಪ್ರಕಾರ ಮುಸ್ಸಂಜೆ ವೇಳೆ ಅಥವಾ ಸೂರ್ಯಾಸ್ತದ ಸಮಯದಲ್ಲಿ ನೀವು ತುಳಸಿಯ ಮುಂದೆ ತಪ್ಪದೇ ದೀಪವನ್ನು ಹಚ್ಚಿಡಬೇಕು ಇದರಿಂದ ನಿಮ್ಮ ಜೀವನ ಸುಖಮಯ ಆಗಲಿದೆ.

ತುಳಸಿ ಹಸಿರು ಬಣ್ಣದ ಸಸ್ಯವಾಗಿರುವುದರಿಂದ, ಇದನ್ನು ಹಸಿರು, ಹುಲ್ಲು ಮತ್ತು ಸಸ್ಯಗಳನ್ನು ಪ್ರತಿನಿಧಿಸುವ ಬುಧ ಗ್ರಹವು ಆಳುತ್ತದೆ. ಬುಧನು ತುಳಸಿ ಗಿಡದಲ್ಲಿ ಹೂಬಿಡಲು ಪ್ರೇರೇಪಿಸುತ್ತಾನೆ, ಇದು ವಾಸ್ತು ಶಾಸ್ತ್ರದ ಪ್ರಕಾರ, ಮನೆಯೊಳಗೆ ಸಕಾರಾತ್ಮಕ ಕಂಪನಗಳನ್ನು ಹೆಚ್ಚಿಸುತ್ತದೆ ಎಂದು ಎನ್ನಲಾಗಿದೆ.

ತುಳಸಿ ಸಸ್ಯ ಮನೆಗೆ ಸಮೃದ್ಧಿಯನ್ನು ನೀಡುತ್ತದೆ, ರೋಗಗಳನ್ನು ಗುಣಪಡಿಸುತ್ತದೆ ಮತ್ತು ಎಲ್ಲಾ ಕೆಟ್ಟದ್ದನ್ನು ನಿರ್ಮೂಲನೆ ಮಾಡುತ್ತದೆ. ಶೀತ, ಕೆಮ್ಮು ಮತ್ತು ಇತರ ಸೋಂಕುಗಳ ವಿರುದ್ಧ ಹೋರಾಡುವ ಕಷಾಯವನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಸಹ ಸುಧಾರಿಸುತ್ತದೆ.

ಎಲ್ಲಿ ಬಡತನ ಮತ್ತು ತೊಂದರೆ ಇದೆಯೋ, ಅಲ್ಲಿ ತುಳಸಿ ಸಸ್ಯ ಚೆನ್ನಾಗಿ ಬೆಳೆಯುವುದಿಲ್ಲ. ತುಳಸಿ ಗಿಡವನ್ನು ಅಡುಗೆಮನೆಯ ಬಳಿ ಇಟ್ಟರೆ, ನಡೆಯುತ್ತಿರುವ ಕುಟುಂಬ ಕಲಹವು ಬಗೆಹರಿಯುತ್ತದೆ. ಇದನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು, ಏಕೆಂದರೆ ಇದು ಜೀವನದಲ್ಲಿ ತೀವ್ರ ನಷ್ಟ ಮತ್ತು ತೊಂದರೆಗಳನ್ನು ಉಂಟು ಮಾಡುತ್ತದೆ.

ತುಳಸಿ ಗಿಡವು ಇದ್ದಕ್ಕಿದ್ದಂತೆ ಒಣಗಿದರೆ, ಅದು ಕುಟುಂಬಕ್ಕೆ ವಿಪತ್ತು ಬರಲಿದೆ ಎಂದು ಸೂಚನೆ ಆಗಿರುತ್ತದೆಯಂತೆ. ಇದು ಲಕ್ಷ್ಮಿಯ ಸಂಕೇತವಾಗಿರುವುದರಿಂದ, ಇದು ಕುಟುಂಬದಲ್ಲಿನ ಆರ್ಥಿಕ ಸಮಸ್ಯೆಗಳನ್ನು ಸೂಚಿಸುತ್ತದೆ. ನಿಮ್ಮ ತುಳಸಿ ಸಸ್ಯಗಳು ಒಣಗಿದರೆ ನಿಮ್ಮ ವ್ಯವಹಾರವು ಕುಸಿಯಬಹುದು.

ತುಳಸಿ ಸಸ್ಯವನ್ನು ಒಣಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಪದೇ ಪದೇ ಈ ಸಸ್ಯ ಒಣಗಿದರೆ, ಮನೆಯಲ್ಲಿನ ಸಂಪತ್ತನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆಯಂತೆ. ಪದೇ ಪದೇ ತುಳಸಿ ಸಸ್ಯವು ಒಣಗುವುದು ಪಿತೃ ದೋಷವನ್ನು ಸಹ ತೋರಿಸುತ್ತದೆ ಮತ್ತು ಪೂರ್ವಜರ ಕೋಪವನ್ನು ಸೂಚಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಈ ದೋಷವನ್ನು ದೂರ ಮಾಡಿಕೊಳ್ಳಲು ವಸ್ತುಗಳನ್ನು ದಾನವಾಗಿ ನೀಡುವುದು ಮತ್ತು ಸಂತರಿಗೆ ಆಹಾರವನ್ನು ಅರ್ಪಿಸುವುದು ಮಾಡಬೇಕು.

ತುಳಸಿ ಸಸ್ಯದಲ್ಲಿರುವ ಒಣಗಿದ ಎಲೆಗಳನ್ನು ತಕ್ಷಣವೇ ತೆಗೆದು ಹಾಕಬೇಕು, ಇದರಿಂದಾಗಿ ಮನೆಯ ಮಾಲೀಕರ ಭುಜದ ಮೇಲೆ ಸಾಲದ ಹೊರೆ ಬೀಳುತ್ತದೆ. ಒಣಗಿದ ಹೂವನ್ನು ಔಷಧೀಯ ಉದ್ದೇಶಗಳಿಗಾಗಿ ಸಂಗ್ರಹಿಸಬಹುದಾದ ಬೀಜಗಳಾಗಿಯೂ ಬಳಸಬಹುದು.

ತುಳಸಿ ಒಣಗಿ ಹಳದಿ ಬಣ್ಣಕ್ಕೆ ತಿರುಗಿದರೆ, ನಿಮ್ಮ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಅಥವಾ ಕುಟುಂಬದಲ್ಲಿನ ಬಿಕ್ಕಟ್ಟು ನಿಮ್ಮನ್ನು ದುರ್ಬಲಗೊಳಿಸಬಹುದು ಎಂದು ಸೂಚಕವಾಗಿರುತ್ತದೆ. ದೇವರ ನಾಮವನ್ನು ಜಪಿಸುತ್ತ ಆ ಹಳದಿ ಎಲೆಗಳನ್ನು ತೆಗೆದು ನೀರಿನಲ್ಲಿ ಎಸೆಯಿರಿ. ಮನೆಯಲ್ಲಿ ಮಹಾ ಮೃತ್ಯುಂಜಯ ಮಂತ್ರವನ್ನು ಪಠಿಸಿ. ಇದು ದುಷ್ಟ ಗ್ರಹಗಳಿಂದ ಉಂಟಾಗುವ ದುಃಖವನ್ನು ನಿವಾರಿಸುತ್ತದೆ.

ಶಾಸ್ತ್ರಗಳ ಪ್ರಕಾರ ತುಳಸಿಗೆ ಸೂರ್ಯೋದಯದ ನಂತರವೇ ನೀರು ಅರ್ಪಿಸಬೇಕೇ ಹೊರತು ಸೂರ್ಯಾಸ್ತದ ನಂತರ ತುಳಸಿಗೆ ನೀರನ್ನು ನೀಡಬಾರದು ಎಂದು ಹೇಳಲಾಗಿದೆ. ಸೂರ್ಯಾಸ್ತದ ನಂತರ ತುಳಸಿಗೆ ನೀರನ್ನು ಅರ್ಪಿಸುವುದು ಮಾತ್ರವಲ್ಲ, ಈ ಸಮಯದಲ್ಲಿ ತುಳಸಿಯನ್ನು ನೀವು ಸ್ಪರ್ಶಿಸಲೂಬಾರದು.

ಹಸಿರು ತುಳಸಿ ವಿಷ್ಣುವಿನ ಎಲ್ಲಾ ಅನುಗ್ರಹವನ್ನು ಹೊಂದಿದೆ ಮತ್ತು ಮನೆಯನ್ನು ಸಂಪತ್ತು ಮತ್ತು ಕೌಟುಂಬಿಕ ಸಾಮರಸ್ಯದಿಂದ ಆಶೀರ್ವದಿಸುತ್ತದೆ. ಮನೆಗೆ ಅಪಾಯ ಎದುರಾದಾಗಲೆಲ್ಲಾ, ತುಳಸಿ ಗಿಡವು ಹೇಗಿದೆ ಅಂತ ಮೊದಲು ನೋಡಿ, ಅದು ತುಂಬಾನೇ ಒಣಗಿ ಹೋಗಿದ್ದರೆ, ಅದನ್ನು ಮನೆಯಿಂದ ಹೊರ ಹಾಕಿ.

ತುಳಸಿಗೆ ನೀರನ್ನು ನೀಡುವಾಗ ನೀವು ಈ ತುಳಸಿ ಮಂತ್ರವನ್ನು ಪಠಿಸುವುದು ಹೆಚ್ಚು ಫಲ ನೀಡುತ್ತದೆ. ತುಳಸಿಗೆ ನೀರನ್ನು ಅರ್ಪಿಸುವಾಗ ”ಓಂ ಸುಭದ್ರಾಯ ನಮಃ” ಮಂತ್ರವನ್ನು ಪಠಿಸುವುದು ಉತ್ತಮ.

ಇದನ್ನೂ ಓದಿ: Amarnath Yatra: ಅಮರನಾಥ ಯತ್ರೆಗೆ ಹೋಗೋ ಮುನ್ನ ಇವುಗಳನ್ನು ಅರಿತಿರಿ! ದೋಸೆ ಸೇರಿ 40 ತಿಂಡಿ ನಿಷೇಧ! ಯಾಕೆ ಈ ಕ್ರಮ?

Leave A Reply

Your email address will not be published.