IAS Officers Transfer: ರಾಜ್ಯ ಸರಕಾರದಿಂದ 10 ಐಎಎಸ್ ಅಧಿಕಾರಿಗಳ ವರ್ಗಾವಣೆ! ದ.ಕ ಡಿಸಿ, ಜಿ.ಪಂ. ಸಿಇಓ ಎಲ್ಲಿಗೆ ವರ್ಗಾವಣೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್!
karnataka politics Congress Government Transfer of 10 IAS Officers from State Govt
Congress Government: 2023 ರಾಜ್ಯ ಚುನಾವಣೆ ನಂತರ, ಕಾಂಗ್ರೆಸ್ ಆಳ್ವಿಕೆಯಲ್ಲಿ (Congress government) ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, 10 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹೌದು, ಐಎಎಸ್-ಐಪಿಎಸ್ ನ 10 ಅಧಿಕಾರಿಗಳನ್ನು ವರ್ಗಾವಣೆ (IAS officers transfer) ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಯಾವೆಲ್ಲ ಐಎಎಸ್ಇ ಅಧಿಕಾರಿಗಳನ್ನ ಎಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.
10 ಐಎಎಸ್ ಅಧಿಕಾರಿಗಳ ವರ್ಗಾವಣೆ
ರವೀಂದ್ರ ಪಿ.ಎನ್ – ಡಿಸಿ ಚಿಕ್ಕಬಳ್ಳಾಪುರ
ಶ್ರೀನಿವಾಸ್ ಕೆ -ಡಿಸಿ ತುಮಕೂರು
ಜಾನಕಿ ಕೆ.ಎಂ -ಡಿಸಿ ಬಾಗಲಕೋಟೆ
ಮುಲ್ಲೈ ಮುಹಿಲನ್ – ಡಿಸಿ ದಕ್ಷಿಣ ಕನ್ನಡ
ಯೋಗೇಶ್ ಎ.ಎಂ – ಆಯುಕ್ತ, ಸಾರಿಗೆ ಮತ್ತು ರಸ್ತೆ ಸುರಕ್ಷತೆ
ಡಾ. ಕುಮಾರ- ಡಿಸಿ ಮಂಡ್ಯ
ಪ್ರಭು ಜಿ.-ಆಯುಕ್ತ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ
ನವೀನ್ ಕುಮಾರ್ ರಾಜು- ಇಡಿ ವಸತಿ ಶಿಕ್ಷಣ ಸೊಸೈಟಿ
ಪಲ್ಲವಿ ಆಕುರಾತಿ-ಹೆಚ್ಚುವರಿ ಯೋಜನಾ ನಿರ್ದೇಶಕಿ, ಸಕಾಲ ಮಿಷನ್
ಡಾ. ವೆಂಕಟೇಶ್ ಎಂ.ವಿ – ಆಯುಕ್ತ, ಪಶುಸಂಗೋಪನಾ ಇಲಾಖೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದ ಡಾ. ಕುಮಾರ ಅವರನ್ನು ಮಂಡ್ಯ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ಮುಖ್ಯವಾಗಿ ಜಿಲ್ಲಾಧಿಕಾರಿಯಾಗಿದ್ದ ರವಿಕುಮಾರ್
ಎಂ.ಆರ್ . ಅವರನ್ನು ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಸ್ಮಾರ್ಟ್ ಗವರ್ನೆನ್ಸ್ ಸೆಂಟರ್ ಹೆಚ್ಚುವರಿ ನಿರ್ದೇಶಕರಾಗಿದ್ದ ಮುಲ್ಫ್ ಮುಹಿಲನ್ ಅವರನ್ನು ದಕ್ಷಿಣ ಕನ್ನಡ ಡಿಸಿಯಾಗಿ ನೇಮಿಸಲಾಗಿದೆ.
ಇದನ್ನು ಓದಿ: ತುಳಸಿ ಗಿಡ ಹೀಗಿದ್ದಲ್ಲಿ ಗಂಡಾಂತರ ತಪ್ಪಿದ್ದಲ್ಲ ಅದಕ್ಕಾಗಿ ತಪ್ಪದೇ ಈ ರೀತಿ ಮಾಡಿ!