Hair Care Tips: ನಯವಾದ ಉದ್ದ ಕೂದಲಿಗಾಗಿ ದಾಸವಾಳವನ್ನು ಈ ರೀತಿ ಬಳಸಿ !

Hair Care Tips Life style Use hibiscus for long hair

Hair Care Tips: ಸದೃಢ, ಕಾಂತಿಯುಕ್ತ ಮತ್ತು ಆರೋಗ್ಯಕರ ಕೇಶರಾಶಿಯನ್ನು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಹಲವು ರೀತಿಯ ಪ್ರಯೋಗಗಳನ್ನೂ ಮಾಡುತ್ತಾರೆ. ಆದರೆ, ನೀವು ಕೇವಲ ನಿಮ್ಮ ಮನೆಯಲ್ಲೇ ಇರುವ ದಾಸವಾಳದಿಂದ ದಪ್ಪ ಹಾಗೂ ಉದ್ದವಾದ ಕೂದಲು ಪಡೆಯಬಹುದು. ಹೌದು, ದಾಸವಾಳದ ಎಲೆಗಳು ಮತ್ತು ಹೂವುಗಳು ಕೂದಲಿನ ಆರೋಗ್ಯಕ್ಕೆ ಪ್ರಯೋಜನಕಾರಿ ಗುಣಗಳನ್ನು ಹೊಂದಿದೆ. ಇದು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.

 

ತಲೆ ಕೂದಲು ಉದುರುವಿಕೆಯನ್ನು ತಡೆಯುವುದರಿಂದ ಹಿಡಿದು ಕೂದಲಿಗೆ ಉತ್ತಮ ಹೊಳಪು ನೀಡುವಲ್ಲಿ ದಾಸವಾಳ (Hibiscus For Hair Care) ಪಾತ್ರ ಬಹಳ ಮಹತ್ವವಾಗಿದೆ. ಮುಖ್ಯವಾಗಿ ತಲೆ ಕೂದಲಿನ ಭಾಗದಲ್ಲಿ ಕಲ್ಮಶಗಳನ್ನು ದೂರ ಮಾಡಿ ತಲೆಯನ್ನು ಆರೋಗ್ಯಕರವಾಗಿ ಇರಿಸುತ್ತದೆ. ದಾಸವಾಳದ ಎಲೆಗಳು ಮತ್ತು ಹೂವುಗಳು ನೈಸರ್ಗಿಕ ವರ್ಣದ್ರವ್ಯವಾಗಿದೆ. ಆಕ್ಸಿಡೀಶನ್‌ ನಿರೋಧಕಗಳು ಮತ್ತು ವಿಟಮಿನ್‌ಗಳನ್ನು ಒಳಗೊಂಡಿರುತ್ತವೆ. ಸದ್ಯ ಸದೃಡ, ಕಾಂತಿಯುಕ್ತ ಮತ್ತು ಆರೋಗ್ಯಕರ ಕೂದಲು ಪಡೆಯಲು ದಾಸವಾಳವನ್ನು ಈ ರೀತಿ ಬಳಸಿ (Hair Care Tips).

ದಾಸವಾಳ ಮತ್ತು ತೆಂಗಿನೆಣ್ಣೆ: 8-10 ಎಲೆಗಳು ಮತ್ತು 4-5 ದಾಸವಾಳ ಹೂಗಳನ್ನು ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಿ. 100 ಮಿಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಈ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಿ. ಇದನ್ನು ನಿಮ್ಮ ನೆತ್ತಿಯ ಮೇಲೆ ಹಚ್ಚಿ ಮಸಾಜ್ ಮಾಡಿ. ಈ ಎಣ್ಣೆಯು ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ನಿಮ್ಮ ಕೂದಲನ್ನು ಪೋಷಿಸಲು ಸಹಾಯ ಮಾಡುತ್ತದೆ. ಇದು ವೇಗವಾಗಿ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ.

ದಾಸವಾಳ ಮತ್ತು ಅಲೋವೆರಾ : 5 ದಾಸವಾಳದ ಎಲೆ ಮತ್ತು 8 ದಾಸವಾಳದ ಹೂಗಳನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ 1 ಕಪ್ ಅಲೋವೆರಾ ಜೆಲ್ ಅನ್ನು ಮಿಶ್ರಣ ಮಾಡಿ. ನಂತರ ತಲೆಗೆ ಹಚ್ಚಿರಿ. 20 ನಿಮಿಷಗಳ ಬಳಿಕ ಸ್ನಾನ ಮಾಡಿ. ಇದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ. ಹಾಗೂ ನಯವಾಗುತ್ತದೆ.

ದಾಸವಾಳ ಮತ್ತು ಲಿಂಬೆಹಣ್ಣು: 8 ದಾಸವಾಳದ ಎಲೆಗಳನ್ನು ತೆಗೆದುಕೊಂಡು ಅದನ್ನು ನಯವಾಗಿ ರುಬ್ಬಿಕೊಳ್ಳಿ. ನಂತರ ಇದಕ್ಕೆ 1 ಲಿಂಬೆಹಣ್ಣಿನ ರಸವನ್ನು ಮಿಶ್ರಣ ಮಾಡಿ. ತಲೆಯ ಬುಡಕ್ಕೆ ಚೆನ್ನಾಗಿ ಹಚ್ಚಿರಿ. 15 ನಿಮಿಷದ ಬಳಿಕ ತಲೆಸ್ನಾನ ಮಾಡಿ. ಇದರಿಂದ ತಲೆಯ ಹೊಟ್ಟಿನ ಸಮಸ್ಯೆ ನಿವಾರಣೆ ಆಗುತ್ತದೆ. ಈ ರೀತಿಯಾಗಿ ನೈಸರ್ಗಿಕವಾಗಿ ತಯಾರು ಮಾಡಿದ ಪೇಸ್ಟ್ ಅನ್ನು ಕೂದಲಿಗೆ ಅಪ್ಲೈ ಮಾಡುವ ಮೂಲಕ ಕ್ರಮೇಣ ಕೂದಲ ಬೆಳವಣಿಗೆ ವೇಗವಾಗಿ ಮತ್ತು ದಪ್ಪವಾಗಿ ಬೆಳೆಯಲು ಸಹಾಯ ಆಗುತ್ತದೆ.

 

ಇದನ್ನು ಓದಿ: Nandini vs Milma: ಕರ್ನಾಟಕದ ಖ್ಯಾತ ನಂದಿನಿ ಉತ್ಪನ್ನಕ್ಕೆ ಕೇರಳದಲ್ಲಿ ವಿರೋಧ! ಸಚಿವೆಯಿಂದ ನಂದಿನಿ ಕಳಪೆ ಗುಣಮಟ್ಟ ಎಂದು ಆರೋಪ! 

Leave A Reply

Your email address will not be published.