Home Breaking Entertainment News Kannada Anushka shetty: ಈಗಾಗಲೇ ನನಗೆ ಐದು ಮದುವೆಗಳಾಗಿವೆ, ಯಾರೊಂದಿಗೆಲ್ಲಾ ಗೊತ್ತಾ!? ಶಾಕಿಂಗ್ ಹೇಳಿಕೆ ನೀಡಿದ ಕರಾವಳಿ...

Anushka shetty: ಈಗಾಗಲೇ ನನಗೆ ಐದು ಮದುವೆಗಳಾಗಿವೆ, ಯಾರೊಂದಿಗೆಲ್ಲಾ ಗೊತ್ತಾ!? ಶಾಕಿಂಗ್ ಹೇಳಿಕೆ ನೀಡಿದ ಕರಾವಳಿ ಚೆಲುವೆ ಅನುಷ್ಕಾ ಶೆಟ್ಟಿ!!

Anushka Shetty marriage
Image source- Telugu360.com

Hindu neighbor gifts plot of land

Hindu neighbour gifts land to Muslim journalist

Anushka Shetty marriage : ತೆಲುಗು ಚಿತ್ರರಂಗದ(Telugu film Industry) ಜನಪ್ರಿಯ ನಾಯಕಿ ತುಳುನಾಡ ಚೆಲುವೆ ಅನುಷ್ಕಾ ಶೆಟ್ಟಿ(Anushka shetty) ವಿವಾಹದ ಬಗ್ಗೆ ಹರಡಿದಷ್ಟು ಸುದ್ದಿಗಳು ಇತರ ಯಾವುದೇ ನಾಯಕಿಯರ ಬಗ್ಗೆ ಬಂದಿರಲಿಲ್ಲವೇನೋ. ಅಂತೆಯೇ ಇದೀಗ ತಮ್ಮ ಮದುವೆಯ ವಿಚಾರವಾಗಿ ಅನುಷ್ಕಾ (Anushka Shetty marriage) ನೀಡಿದ ಹೇಳಿಕೆಯ ಹಳೇ ವಿಡಿಯೋ ತುಣುಕೊಂದು ವೈರಲ್ ಆಗುತ್ತಿದೆ.

ಕರುನಾಡ ಚೆಲುವೆ, ಸ್ವೀಟಿ ಅನುಷ್ಕಾ ಶೆಟ್ಟಿ ಟಾಲಿವುಡ್​(Tollywood)ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಸೂಪರ್ ಸ್ಟಾರ್​ಗಳ ಜೊತೆ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಮಹಿಳಾ ಪ್ರಧಾನ ಸಿನಿಮಾ ಮಾಡಿ ಅನುಷ್ಕಾ ಶೆಟ್ಟಿ ಸೂಪರ್ ಸಕ್ಸಸ್ ಕಂಡಿದ್ದಾರೆ. ಕಳೆದ ಕೆಲ ದಿನಗಳಿಂದ ನಟಿಯ ಮದುವೆಯ ಸುದ್ದಿ ಜೋರಾಗಿ ಸದ್ದು ಮಾಡ್ತಿದೆ. ಇದೀಗ ಈ ಕುರಿತ ಸ್ವೀಟಿಯೇ ಹೇಳಿದ ಹೇಳಿಕೆಯೊಂದು ವೈರಲ್ ಆಗಿದ್ದು, ಅದರಲ್ಲಿ ಅನುಷ್ಕಾ ತನಗೆ ಈಗಾಗಲೇ 5 ಮದುವೆಯಾಗಿದೆ ಎಂದು ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಹೌದು, ಹಿರಿಯ ನಟಿ ಜಯಪ್ರದ(Jayaprada) ಬಹಳ ವರ್ಷಗಳ ಹಿಂದೆ ಕಿರುತೆರೆ ಸಂದರ್ಶನ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ‘ಅರುಂಧತಿ'(Arundati) ಸಿನಿಮಾ ಆಗಷ್ಟೆ ರಿಲೀಸ್ ಆಗಿ ಸ್ವೀಟಿ ಕ್ರೇಜ್ ಹೆಚ್ಚಾಗಿತ್ತು. ಈ ಸಂದರ್ಶನದ ವೇಳೆ ಅನುಷ್ಕಾ ಅವರಿಗೆ ಜಯಪ್ರದ, ನಿಮ್ಮ ಬಗ್ಗೆ ನೀವು ಕೇಳಿದ ಅತಿ ದೊಡ್ಡ ಗಾಸಿಪ್ ಯಾವುದು ಎನ್ನುವ ಪ್ರಶ್ನೆ ಕೇಳಿದ್ದರು. ಜಯಪ್ರದ ಅವರ ಪ್ರಶ್ನೆಗೆ ಕೂಡಲೇ ಉತ್ತರಿಸಿದ ಸ್ವೀಟಿ, ಅನುಷ್ಕಾ ನನಗೆ ಒಂದಲ್ಲ ಎರಡಲ್ಲ 5 ಬಾರಿ ಮದುವೆ ಆಗಿದೆ ಎಂದು ಹೇಳಿದ್ದರು. ಅಲ್ಲದೆ ಅದು ಯಾರ್‍ಯಾರ ಜೊತೆ ಅನ್ನೋದನ್ನು ಕೂಡ ಸ್ವೀಟಿ ಬಹಿರಂಗಗೊಳಿಸಿದ್ದರು.

ಅನುಷ್ಕಾ ಹೀಗೆ ಹೇಳುತ್ತಿದ್ದಂತೆ ಆ ಮಾತು ಕೇಳಿ ನಕ್ಕ ಜಯಪ್ರದ ಯಾರ್‍ಯಾರ ಜೊತೆಗೆ ಎನ್ನುತ್ತಿದ್ದಂತೆ ಎಲ್ಲಾ ನನ್ನ ಸಹನಟರು. ಪ್ರಭಾಸ್, ಸುಮಂತ್, ಗೋಪಿಚಂದ್, ಸೆಂಥಿಲ್ ಎಂದು ಹೇಳಿ ಅನುಷ್ಕಾ ಶೆಟ್ಟಿ ನಕ್ಕಿದ್ದಾರೆ. ತಾವು ನಟಿಸಿದ ಸಹನಟರ ಜೊತೆಗೆಲ್ಲಾ ಮದುವೆ ಆಗುತ್ತದೆ, ಮದುವೆ ಆಗಿದೆ ಎನ್ನುವ ಅರ್ಥದಲ್ಲಿ ಗಾಸಿಪ್‌ಗಳು ಹರಿದಾಡುತ್ತಿದ್ದನ್ನು ಸ್ವೀಟಿ ಈ ರೀತಿ ವಿವರಿಸಿದ್ದಾರೆ. ಸದ್ಯ ಈ ಹಳೇ ವಿಡಿಯೋ ಈಗ ಮತ್ತೆ ವೈರಲ್ ಆಗ್ತಿದೆ.

ಅಂದಹಾಗೆ ಆರಂಭದಲ್ಲಿ ಹೇಳಿದಂತೆ ವಯಸ್ಸು 41 ದಾಟಿದರೂ ಮದುವೆಯಾಗದ ಅನುಷ್ಕಾ ವಿವಾಹದ ಕುರಿತು ಸಾಕಷ್ಟು ಗಾಸಿಪ್ ಗಳು ಹರಿದಾಡಿದ್ದವು. ಹರಿದಾಡುತ್ತಿವೆ. ಈ ಹಿಂದೆ, ಪ್ರಭಾಸ್-ಅನುಷ್ಕಾ(Prabhas anushka) ಮದುವೆಯಾಗಲಿದ್ದಾರೆ ಎಂದು ಸುದ್ದಿಗಳು ಹರಡಿದ್ದವು. ಆದರೆ, ತಾವಿಬ್ಬರೂ ಒಳ್ಳೆಯ ಸ್ನೇಹಿತರು ಮಾತ್ರ ನಮ್ಮಿಬ್ಬರ ನಡುವೆ ಹರಡಿರುವ ಸುದ್ದಿಗಳು ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾಗ ವದಂತಿಗಳು ಅಂತ್ಯಗೊಂಡಿದ್ದವು. ನಂತರ, ಉದ್ಯಮಿಯೊಬ್ಬರೊಂದಿಗೆ ಅನುಷ್ಕಾ ವಿವಾಹ ನಿಶ್ಚಯವಾಗಿದೆ ಎಂಬ ಸುದ್ದಿ ಹರಡಿತ್ತು. ನಂತರ ಅದು ನಕಲಿ ಸುದ್ದಿ ಎಂದು ಸ್ಪಷ್ಟಪಡಿಸಲಾಯಿತು.

ಇನ್ನು ಯೋಗ ಟೀಚರ್(Yoga teacher) ಆಗಿದ್ದ ಅನುಷ್ಕಾ ಶೆಟ್ಟಿ ಪೂರಿ ಜಗನ್ನಾಥ್ ನಿರ್ದೇಶನದ ‘ಸೂಪರ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮಹಾನದಿ ಚಿತ್ರದಲ್ಲಿ ಸುಮಂತ್ ಜೋಡಿಯಾಗಿ ನಟಿಸಿದ್ದರು. ‘ಲಕ್ಷ್ಯಂ’ ಚಿತ್ರದಲ್ಲಿ ಗೋಪಿಚಂದ್ ಹಾಗೂ ‘ಬಿಲ್ಲಾ’, ‘ಮಿರ್ಚಿ’, ‘ಬಾಹುಬಲಿ'(Bahubali) ಸಿನಿಮಾಗಳಲ್ಲಿ ಪ್ರಭಾಸ್ ಜೊತೆ ತೆರೆ ಹಂಚಿಕೊಂಡಿದ್ದರು. ಬಾಹುಬಲಿ’- 2 ನಂತರ ಅನುಷ್ಕಾ ಶೆಟ್ಟಿ ಸಿನಿಮಾಗಳು ಅಷ್ಟಾಗಿ ಗೆಲ್ಲಲಿಲ್ಲ. ‘ಭಾಗಮತಿ’ ಸಿನಿಮಾ ಕೊಂಚಮಟ್ಟಿಗೆ ಸದ್ದು ಮಾಡಿತ್ತು. ಆದರೆ ಅಷ್ಟಾಗಿ ಕಲೆಕ್ಷನ್ ಮಾಡಲಿಲ್ಲ. ‘ಸೈಲೆಂಟ್’ ಸಿನಿಮಾ ಬಂದೋಗಿದ್ದು ಗೊತ್ತಾಗಲಿಲ್ಲ. ಈಗ ಮಹೇಶ್ ಬಾಬು ಎಂಬುವವರು ನಿರ್ದೇಶನದ ‘ಮಿಸ್. ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಚಿತ್ರದಲ್ಲಿ ಸ್ವೀಟಿ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ: Shilpa shetty: ಇಟಲಿಯಲ್ಲಿ ಬಿಕನಿ ತೊಟ್ಟು ಫೋಟೋ ಕ್ಲಿಕ್ಕಿಸಿದ ಶಿಲ್ಪಾ ಶೆಟ್ಟಿ!! ಇತ್ತ ಮುಂಬೈ ಮನೆಗೆ ನುಗ್ಗಿ ಬೆಲೆಬಾಳೋ ವಸ್ತು ದೋಚಿದ ಕಳ್ಳರು!!