Rakhi Sawant: ರಾಖಿ ಸಾವಂತ್ ಗೆ ಸಿಕ್ಕ ಮತ್ತೊಬ್ಬ ಹೊಸ ಬಾಯ್ ಫ್ರೆಂಡ್! ಈ ಬಾರಿ ಯಾರು?

Entertainment Bollywood news actress Rakhi Sawant shares photo of new friend people guess he is her new boyfriend

Rakhi Sawant: ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಹೊಸ ವರಸೆ ನೋಡಿ ನೀವು ಶಾಕ್ ಆಗ್ತೀರಾ! ಹೌದು, ಈಗಾಗಲೇ ಜೀವನದಲ್ಲಿ ಇದುವರೆಗೆ ನಡೆದ ಎಲ್ಲಾ ಕಹಿ ಘಟನೆಗಳನ್ನು ಮತ್ತು ನೋವು ತಂದಿರುವ ಘಟನೆಗಳನ್ನು ಮರೆತು ಜೀವನದಲ್ಲಿ ಮುಂದೆ ಸಾಗುವುದಾಗಿ ಹೇಳಿಕೊಂಡಿದ್ದರು.

 

ಅಂತೆಯೇ ಇದೀಗ ದುಬೈನಲ್ಲಿ ಒಂದಷ್ಟು ದಿನ ಇದ್ದು, ರಾಖಿ ಸಾವಂತ್ ಅವರು ಈಗ ಮುಂಬೈಗೆ ಮರಳಿದ್ದಾರೆ. ಅಲ್ಲಿಂದ ತಾಯ್ನಾಡಿಗೆ ಬರುತ್ತಿದ್ದಂತೆ ಮಾಧ್ಯಮದ ಮೂಲಕ ಅವರು ಇನ್ನೋರ್ವ ಹುಡುಗನನ್ನು ಹುಡುಕಿಕೊಂಡಿರೋದಾಗಿ ಹೇಳಿದ್ದಾರೆ.

“ನಾನೊಬ್ಬರನ್ನು ಭೇಟಿಯಾಗಿದ್ದೇನೆ, ಅವರು ತುಂಬ ಒಳ್ಳೆಯವರು. ಮೊದಲ ಮದುವೆಯಲ್ಲಿ ಏನಾಯ್ತು ಅಂತ ನಿಮಗೆಲ್ಲ ಗೊತ್ತಿದೆ. ಅದಕ್ಕೆ ನನಗೆ ಈಗ ಭಯವಾಗ್ತಿದೆ. ನನ್ನ ಜೀವನದಲ್ಲಿಯೂ ಖುಷಿ ಬೇಕು. ಜೀವನದಲ್ಲಿ ಸಿಕ್ಕಾಪಟ್ಟೆ ಅತ್ತಿದ್ದೇನೆ. ಡಿಪ್ರೆಶನ್‌ನಲ್ಲಿ ಇದ್ದಿದ್ದಕ್ಕೆ ನಾನು ದುಬೈಗೆ ಹಾರಿದ್ದೆ. ಅಲ್ಲಿಂದ ಒಂದಷ್ಟು ಔಷಧ ತಂದಿದ್ದೇನೆ” ಎಂದಿದ್ದಾರೆ ರಾಖಿ ಸಾವಂತ್.

ಇನ್ನು ನಟಿ ರಾಖಿ ಸಾವಂತ್
ಹುಡುಗ ಬರೋದು ಯಾವಾಗ? ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸಿದ್ದಾರೆ.
“ನನ್ನ ಹುಡುಗ ಆರಾಮಾಗಿ ಬರ್ತಾನೆ. ಜೀವನದಲ್ಲಿ ನಮ್ಮನ್ನು ನೋಯಿಸುವವರು ಇರುತ್ತಾರೆ. ಕೆಲವರು ಗಾಯಕ್ಕೆ ಉಪ್ಪು ಹಾಕ್ತಾರೆ. ಕೆಲವರು ನಮ್ಮ ಗಾಯಕ್ಕೆ ಔಷಧಿ ಹಚ್ಚುತ್ತಾರೆ. ಅವರನ್ನು ನಾವು ಹತ್ತಿರದಲ್ಲಿ ಇಟ್ಟುಕೊಳ್ಳಬೇಕು” ಎಂದು ರಾಖಿ ಸಾವಂತ್ ಹೇಳಿದ್ದಾರೆ.

ಆದರೆ “ನನಗೆ ಆದಿಲ್‌ನಿಂದ ಇನ್ನೂ ವಿಚ್ಛೇದನ ಸಿಕ್ಕಿಲ್ಲ. ಸಿಕ್ಕಿದಕೂಡಲೇ ನಾನು ಬೇರೆ ಜೀವನ ಶುರು ಮಾಡಬಹುದು ಎಂದು ಕಾಯುತ್ತಿದ್ದೇನೆ” ಎಂದು ರಾಖಿ ಸಾವಂತ್ ಹೇಳಿದ್ದಾರೆ.

“ಬದುಕಿನಲ್ಲಿ ಏರಿಳಿತಗಳು ಸಹಜ. ಆದಿಲ್ ಇನ್ನೂ ಜೈಲಿನಲ್ಲಿದ್ದಾನೆ. ದುಬೈನಲ್ಲಿದ್ದಾಗ ಅವನು ನನಗೆ ತುಂಬ ಸಲ ಫೋನ್ ಮಾಡಿದ್ದಾನೆ. ನನ್ನನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಿ ಸ್ವಾತಂತ್ರ್ಯ ಕೊಡು ಅಂತ ಕೇಳಿದ್ದಾನೆ. ಅದು ನನ್ನಿಂದ ಆಗದು. ಅವನಿಗೆ ಜಾಮೀನು ಸಿಕ್ಕಿದರೆ ನನಗೆ ವಿಚ್ಛೇದನವೂ ಸಿಗುತ್ತದೆ. ಇದಕ್ಕೂ ಮುನ್ನ ಆದಿಲ್‌ಗೆ ಎರಡು ಬಾರಿ ವಿಚ್ಛೇದನ ಆಗಿದೆ. ನನಗೆ ವಿಚ್ಛೇದನ ಸಿಗೋದು ಮುಖ್ಯ” ಎಂದು ರಾಖಿ ಸಾವಂತ್ ಮಾಧ್ಯಮ ಮೂಲಕ ಬೋಲ್ಡ್ ಆಗಿ ಹೇಳಿದ್ದಾರೆ.

ಇದನ್ನೂ ಓದಿ: APMC ಕಾಯ್ದೆ ಹಿಂಪಡೆಯಲು ರಾಜ್ಯ ಸರಕಾರ ನಿರ್ಧಾರ?!

Leave A Reply

Your email address will not be published.