Home Technology Honda Unicorn OBD-2: ಗುರುಗುಡುತ್ತ ಬಂದಿದೆ ಹೊಂಡ ಯುನಿಕಾರ್ನ್ 2023, ಮಾರುಕಟ್ಟೆಗೆ ಬಂದ ಈ ಹೊಸ...

Honda Unicorn OBD-2: ಗುರುಗುಡುತ್ತ ಬಂದಿದೆ ಹೊಂಡ ಯುನಿಕಾರ್ನ್ 2023, ಮಾರುಕಟ್ಟೆಗೆ ಬಂದ ಈ ಹೊಸ OBD 2 ವಾಹನದ ಫೀಚರ್ಸ್ ಹೇಗಿದೆ ಗೊತ್ತಾ?

Honda Unicorn OBD-2
Image source: Hero Honda

Hindu neighbor gifts plot of land

Hindu neighbour gifts land to Muslim journalist

Honda Unicorn OBD-2: ಹೋಂಡಾ (Honda) ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (scooter India) ಇಂದು ತನ್ನ ಹೊಸ ʻಒಬಿಡಿ2’ (OBD 2) ಅನುಸರಣೆಯ 2023 ʻಯೂನಿಕಾರ್ನ್ʼ (Honda Unicorn OBD-2) ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆ 1,09,800 ರೂ.ಗಳಿಂದ (ಎಕ್ಸ್ ಶೋರೂಂ ದೆಹಲಿ) ಪ್ರಾರಂಭವಾಗುತ್ತದೆ. 2023 ಯುನಿಕಾರ್ನ್ 4 ಬಣ್ಣಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಪರ್ಲ್ ಅಗ್ನಿ ಬ್ಲ್ಯಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಮತ್ತು ಪರ್ಲ್ ಸೈರನ್ ಬ್ಲೂ ಬಣ್ಣಗಳಾಗಿವೆ.

2023ರ ಯೂನಿಕಾರ್ನ್ ಬೈಕ್‌ನಲ್ಲಿ ʻಬಿಎಸ್-6 ಒಬಿಡಿ2 ಎಂಜಿನ್ʼ ಅಳವಡಿಸಲಾಗಿದೆ. 160 ಸಿಸಿ ಪಿಜಿಎಂ-ಎಫ್ ಐ ಎಂಜಿನ್ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಉತ್ಕೃಷ್ಟ ದಕ್ಷತೆಯನ್ನು ಒದಗಿಸುತ್ತದೆ.
ಇದು ಹೊಸ ಎಂಜಿನ್, ಕೌಂಟರ್ ವೇಟ್ ಬ್ಯಾಲೆನ್ಸರ್ ಅನ್ನು ಹೊಂದಿದ್ದು, ಕಂಪನಗಳನ್ನು ಕಡಿಮೆ ಮಾಡಲು ಮತ್ತು ಕಡಿಮೆಯಿಂದ ಹೆಚ್ಚಿನ ಆರ್‌ಪಿಎಂಗೆ ಸುಗಮ ವೇಗ ಹೆಚ್ಚಳಕ್ಕೆ ಸಹಕಾರಿಯಾಗಿದೆ. ಹಾಗೇ ಬೈಕ್‌ನಲ್ಲಿ ʻಎಬಿಎಸ್ʼ(ಆಂಟಿ-ಬ್ರೇಕ್ ಸಿಸ್ಟಂ) ಅಳವಡಿಸಲಾಗಿದ್ದು, ರಸ್ತೆಗಳಲ್ಲಿ ಹೆಚ್ಚುವರಿ ಬ್ರೇಕಿಂಗ್ ಕಾರ್ಯಕ್ಷಮತೆಯನ್ನು ನೀಡುತ್ತದೆ.

ಬೈಕ್ ನ ಮುಂಭಾಗ ಮತ್ತು ಹಿಂಭಾಗದಲ್ಲಿ ಟ್ಯೂಬ್ ಲೆಸ್ ಟೈರ್ ಗಳು ಇದ್ದು, ಪಂಕ್ಚರ್ ಸಂದರ್ಭದಲ್ಲಿ ಟೈರ್‌ ತಕ್ಷಣ ಸಂಪೂರ್ಣ ಚಪ್ಪಟೆಯಾಗುವುದನ್ನು ತಡೆಯುತ್ತದೆ. ಹೆಚ್ಚಿನ ಕಾರ್ಯಕ್ಷಮತೆಯ ʻರಿಯರ್ ಮೊನೊ ಶಾಕ್ʼ ಸಸ್ಪೆಂಷನ್ ಅನ್ನು ಸೀಟಿನ ಕೆಳಗೆ ಇರಿಸಲಾಗಿದೆ. ಇದು ಆರಾಮದಾಯಕತೆ ಮತ್ತು ಅತ್ಯುತ್ತಮ ಸ್ಥಿರತೆಯನ್ನು ನೀಡುತ್ತದೆ. ಹೈ ಗ್ರೌಂಡ್ ಕ್ಲಿಯರೆನ್ಸ್ (187 ಎಂಎಂ) ಮತ್ತು ಲಾಂಗ್ ವ್ಹೀಲ್ ಬೇಸ್ (1335 ಎಂಎಂ) ಉದ್ದನೆಯ ಸೀಟ್ (715 ಎಂಎಂ) ಆರಾಮಾದಾಯಕ ಪ್ರಯಾಣಕ್ಕೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ. ತಾತ್ಕಾಲಿಕ ನಿಲುಗಡೆಗಳ ಸಮಯದಲ್ಲಿ ಅನುಕೂಲಕ್ಕಾಗಿ ʻಎಂಜಿನ್ ಸ್ಟಾಪ್ ಸ್ವಿಚ್ʼ ಇದೆ.

ಸೈಡ್ ಕವರ್ ನಲ್ಲಿ ಕ್ರೋಮ್ ಸ್ಟ್ರೋಕ್, ಮುಂಭಾಗದ ಕೌಲ್‌ನಲ್ಲಿ ಕ್ರೋಮ್ ಅಲಂಕಾರ ಮತ್ತು ಫ್ಯೂಯಲ್ ಟ್ಯಾಂಕ್ ನಲ್ಲಿ 3ಡಿ
ಹೋಂಡಾ ವಿಂಗ್ ಮಾರ್ಕ್ ಈ ಬೈಕ್‌ಗೆ ಪ್ರೀಮಿಯಂ ಆಕರ್ಷಣೆಯನ್ನು ನೀಡುತ್ತವೆ. ಸಿಗ್ನೇಚರ್ ಟೈಲ್ ಲ್ಯಾಂಪ್ ವಿನ್ಯಾಸ ಮತ್ತು ಮೀಟರ್ ಕನ್ಸೋಲ್ ಬೈಕ್‌ನ ವಿಶಿಷ್ಟತೆಯನ್ನು ಹೆಚ್ಚಿಸುತ್ತವೆ.
ʻಎಚ್ಎಂಎಸ್ಐʼ, 2023 ಯುನಿಕಾರ್ನ್‌ನಲ್ಲಿ ವಿಶೇಷ 10 ವರ್ಷಗಳ ವ್ಯಾರಂಟಿ ಪ್ಯಾಕೇಜ್‌ (3 ವರ್ಷಗಳ ಸ್ಟ್ಯಾಂಡರ್ಡ್ + 7 ವರ್ಷಗಳ ಐಚ್ಛಿಕ ವಿಸ್ತರಿತ ವಾರಂಟಿ) ಅನ್ನು ನೀಡಲಾಗಿದೆ.

ಇದನ್ನೂ ಓದಿ: Optical illusion: ಓದುಗರೇ ನಿಮಗೊಂದು ಸವಾಲ್ ; 10 ಸೆಕೆಂಡ್’ನಲ್ಲಿ ಎಲೆಗಳ ಮಧ್ಯೆ ಅಡಗಿರುವ ಹಾವನ್ನು ಪತ್ತೆ ಹಚ್ಚಿ!!