Home National Marriage: ಕೊನೆಕ್ಷಣದಲ್ಲಿ ಮಂಟಪದಿಂದ ವಧು ಎಸ್ಕೇಪ್ ; ಲೆಹೆಂಗಾ ಬಿಚ್ಚಿಟ್ಟು ವಧು ಓಡಿಹೋದದ್ದಾದರೂ ಯಾಕೆ?!

Marriage: ಕೊನೆಕ್ಷಣದಲ್ಲಿ ಮಂಟಪದಿಂದ ವಧು ಎಸ್ಕೇಪ್ ; ಲೆಹೆಂಗಾ ಬಿಚ್ಚಿಟ್ಟು ವಧು ಓಡಿಹೋದದ್ದಾದರೂ ಯಾಕೆ?!

Marriage
Image source: IStock

Hindu neighbor gifts plot of land

Hindu neighbour gifts land to Muslim journalist

Marriage: ಹಲವಾರು ಕಾರಣಗಳಿಂದ ಮದುವೆ (Marriage) ತಪ್ಪಿ ಹೋಗುವ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿದೆ. ಇದೀಗ ಅಂತಹದೇ ಪ್ರಕರಣವೊಂದು ಜಾರ್ಖಂಡ್‌ನ ಗಿರಿದಿಹ್ ಜಿಲ್ಲೆಯಲ್ಲಿ ನಡೆದಿದೆ. ಹೌದು, ಮದುವೆಯ ಸಂದರ್ಭದಲ್ಲಿ ಹಾರ ಬದಲಿಸುವ ವೇಳೆ ವಧು (bride) ಲೆಹೆಂಗಾ ಬಿಚ್ಚಿಟ್ಟು ಮಂಟಪದಿಂದ ಪರಾರಿಯಾಗಿರುವ ಘಟನೆ ನಡೆದಿದೆ‌. ಅಷ್ಟಕ್ಕೂ ವಧು ಲೆಹೆಂಗಾ ಬಿಚ್ಚಿಟ್ಟು ಓಡಿ ಹೋಗಿದ್ದು ಯಾಕೆ?

ಗವಾನ್ ಬ್ಲಾಕ್‌ನ ಬಡಿದಿಹ್ ಗ್ರಾಮದ ನಿವಾಸಿ ವೀರೇಂದ್ರ ಸಾವ್ ಅವರ ಪುತ್ರ ತ್ರಿಲೋಕ್ ಕುಮಾರ್ ಅವರ ವಿವಾಹವು ಇದೇ ಬ್ಲಾಕ್‌ನ ಮಾಲ್ಡಾದಲ್ಲಿ ನಿಶ್ಚಯವಾಗಿತ್ತು. ಎರಡೂ ಕಡೆಯವರು ಇಲ್ಲಿನ ಬಡಿದಿಹ್‌ನಲ್ಲಿರುವ ಬಾಗ್ಲಾಸೋಟ್ ಶಿವ ದೇವಾಲಯದಲ್ಲಿ ವಿವಾಹ ಸಮಾರಂಭವನ್ನು ನಡೆಸಲು ನಿರ್ಧರಿಸಿ, ಭರ್ಜರಿ ತಯಾರಿ ನಡೆದಿತ್ತು.

ಎರಡೂ ಕಡೆಯವರು ವಿವಾಹಕ್ಕಾಗಿ ಭರ್ಜರಿ ತಯಾರಿ ನಡೆಸಿದ್ದರು. ಇತ್ತ ವಧು ಕೂಡ ಬೇರೆನೇ ತಯಾರಿ ನಡೆಸಿದ್ದಳು. ಹೌದು, ವಿವಾಹ ಕಾರ್ಯಕ್ರಮಗಳು ಎಲ್ಲಾ ಸಂಪ್ರಾದಾಯದಂತೆ ನಡೆಯಿತು. ನಂತರ ವಧು-ವರ ಹಾರ ಬದಲಾಯಿಸುವ ವೇಳೆ 5 ನಿಮಿಷದಲ್ಲಿ ಈಗ ಬರುತ್ತೇನೆ ಎಂದು ಹೇಳಿ ವಧು ಮಂಟಪದಿಂದ ಕಾಲ್ಕಿತ್ತಿದ್ದಾಳೆ.‌

5 ನಿಮಿಷ ಎಂದವಳು ಎಷ್ಟು ಹೊತ್ತಾದರೂ ಮಂಟಪಕ್ಕೆ ಮರಳಿ ಬರಲೇ ಇಲ್ಲ. ಕಾದು ಕಾದು ಸುಸ್ತಾದ ಕುಟುಂಬಸ್ಥರು ವಧುವನ್ನು ಹುಡುಕಲು ಹೊರಟರು. ಅದಾಗಲೇ ವಧು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ವಧು ಯುವಕನೊಡನೆ ಬೈಕ್ ನಲ್ಲಿ ಓಡಿ ಹೋಗಿದ್ದಾಳೆ ಎಂದು ನೋಡಿದವರು ಹೇಳಿದ್ದು, ಕುಟುಂಬಸ್ಥರಿಗೆ ಆಘಾತವೇ ಉಂಟಾಯಿತು.

ಲೆಹೆಂಗಾ ಧರಿಸಿ ಹೊರಬಂದ ವಧು, ಲೆಹೆಂಗಾವನ್ನು ಕಳಚಿಟ್ಟು ಮೊದಲೇ ಧರಿಸಿದ್ದ ಜೀನ್ಸ್ ನಲ್ಲಿ ಬೈಕ್ ಏರಿದ್ದಾಳೆ. ವಧು ಮೊದಲೇ ಪ್ಲ್ಯಾನ್ ಮಾಡಿ ಪರಾರಿಯಾಗಿದ್ದಳು. ಮದುವೆ ಮಂಟಪದಿಂದ ಸುಮಾರು ದೂರದಲ್ಲಿ ಹೆಲ್ಮೆಟ್ ಧರಿಸಿ ಬೈಕ್ ನಲ್ಲಿ ವಧುವಿನ ಪ್ರಿಯತಮ (lover) ಕಾದುಕುಳಿತಿದ್ದ. ಮಂಟಪದಿಂದ ಹೊರಬಂದ ವಧು ಲೆಹೆಂಗಾ ಬಿಚ್ಚಿಟ್ಟು ಜೀನ್ಸ್ ನಲ್ಲಿ ಬೈಕ್ ಏರಿ ಎಸ್ಕೇಪ್ ಆಗಿದ್ದಾಳೆ. ವರ ಪೆಚ್ಚು ಮೋರೆ‌ಹಾಕಿ ಮನೆಗೆ ವಾಪಾಸ್ಸಾಗಿದ್ದಾನೆ. ಸದ್ಯ ಈ ಬಗ್ಗೆ ವಧುವಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: Old Pension Scheme: NPS ನೌಕರರಿಗೆ ಸಿಹಿಸುದ್ದಿ ; ಹಳೆ ಪಿಂಚಣಿ ಯೋಜನೆ ಮರು ಜಾರಿ ಬಗ್ಗೆ ಬಜೆಟ್ ನಲ್ಲಿ ಘೋಷಣೆ !