FD Schemes: ಈ ಮೂರು ಎಫ್‌ಡಿ ಯೋಜನೆ ಶೀಘ್ರ ಅಂತ್ಯ!
Business FD schemes news Fixed Deposit scheme three profitable fixed deposits Ending soon here is complete details
FD Schemes: ರಿಸರ್ವ್ ಬ್ಯಾಂಕ್ ಒಫ್ ಇಂಡಿಯ (Reserve Bank Of India) ಪ್ರಕಾರ ಕಳೆದ ಒಂದು ವರ್ಷದ ಅವಧಿಯ ನಡುವೆ ಭಾರತದಲ್ಲಿ ಫಿಕ್ಸಿಡ್ ಡೆಪಾಸಿಟ್ ಬಡ್ಡಿದರವು ಅಧಿಕ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದ್ದು, ಪ್ರಸ್ತುತ ಹಣದುಬ್ಬರ ದರವು ನಿಯಂತ್ರಣಕ್ಕೆ ಬರುತ್ತಿದೆ.
ಸದ್ಯ ಭಾರತದ ಕೇಂದ್ರ ಬ್ಯಾಂಕ್ ರೆಪೋ ದರ ಏರಿಕೆಯನ್ನು ನಿಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಇನ್ನು ಶೀಘ್ರದಲ್ಲೇ ಎಫ್‌ಡಿ ಬಡ್ಡಿದರಗಳು ಏರಿಕೆಯಾಗುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು.
ಆದರೆ ಕೆಲವು ಬ್ಯಾಂಕ್‌ಗಳು ಎಫ್‌ಡಿ ಬಡ್ಡಿದರವನ್ನು ಇಳಿಕೆ ಮಾಡುತ್ತಿದೆ. ಎಫ್‌ಡಿ ದರಗಳು ಇನ್ನಷ್ಟು ಇಳಿಕೆಯಾಗುವುದಕ್ಕೂ ಮುನ್ನ ನಾವು ಅಧಿಕ ಎಫ್‌ಡಿ ಬಡ್ಡಿದರದ ಲಾಭವನ್ನು ಪಡೆಯುವುದು ಮುಖ್ಯವಾಗುತ್ತದೆ. ಪ್ರಮುಖವಾಗಿ ಮೂರು ಎಫ್‌ಡಿ ಯೋಜನೆಗಳು(FD Schemes) ಶೀಘ್ರವೇ ಕೊನೆಯಾಗಲಿದ್ದು, ಅವುಗಳ ಮಾಹಿತಿ ಈ ಕೆಳಗಿದೆ.
ಇಂಡಿಯನ್ ಬ್ಯಾಂಕ್ ವಿಶೇಷ ಎಫ್‌ಡಿ:
ಇಂಡಿಯನ್ ಬ್ಯಾಂಕ್ “ಇಂಡ್ ಸೂಪರ್ 400 ಡೇಸ್” ಎಂಬ ವಿಶೇಷ ಫಿಕ್ಸಿಡ್ ಡೆಪಾಸಿಟ್ ಯೋಜನೆಯನ್ನು ಹೊಂದಿದೆ. ಈ ಯೋಜನೆಯಲ್ಲಿ ಸಾಮಾನ್ಯ ನಾಗರಿಕರು ತಮ್ಮ ಹೂಡಿಕೆಯ ಮೇಲೆ ಶೇಕಡ 7.25ರಷ್ಟು ಮತ್ತು ಹಿರಿಯ ನಾಗರಿಕರು ಶೇಕಡ 7.75ರಷ್ಟು ಬಡ್ಡಿದರವನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಹಿಂದೆ ಇಂಡಿಯನ್ ಬ್ಯಾಂಕ್ ಈ ವಿಶೇಷ ಯೋಜನೆಯನ್ನು ಜೂನ್ 30, 2023ರವರೆಗೆ ವಿಸ್ತರಣೆ ಮಾಡಿದೆ.
ಎಸ್‌ಬಿಐ ವಿ ಕೇರ್ ಎಫ್‌ಡಿ:
ಎಸ್‌ಬಿಐ ವಿ ಕೇರ್ ಎಫ್‌ಡಿ ಯೋಜನೆಯಲ್ಲಿ 5 ವರ್ಷದಿಂದ 10 ವರ್ಷದ ಅವಧಿಯ ಹೂಡಿಕೆಗೆ ಅವಕಾಶವಿದೆ. ಇನ್ನು ಈ ಯೋಜನೆಯು ಜೂನ್ 30, 2023ಕ್ಕೆ ಕೊನೆಯಾಗಲಿದೆ. ಎಸ್‌ಬಿಐ ವಿ ಕೇರ್ ಎಫ್‌ಡಿ ಈ ಯೋಜನೆಯು ಕೇವಲ ಹಿರಿಯ ನಾಗರಿಕರಿಗಾಗಿ ಇರುವ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರು ಶೇಕಡ 7.50ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ.
ಎಸ್‌ಬಿಐ ಅಮೃತ ಕಲಶ :
ಈ ಹಿಂದೆ ಅಂತ್ಯವಾಗಿದ್ದ ಎಫ್‌ಡಿ ಯೋಜನೆ ಇದಾಗಿದ್ದು ಎಸ್‌ಬಿಐ ಮತ್ತೆ ಆರಂಭ ಮಾಡಿದೆ. ಆದರೆ ಜೂನ್ 30ರಂದು ಇದು ಕೊನೆಯಾಗಲಿದೆ. ಎಸ್‌ಬಿಐ ಅಮೃತ್ ಕಲಾಶ್ ಎಫ್‌ಡಿ ಸ್ಕೀಮ್ 400 ದಿನಗಳ ವಿಶೇಷ ಅವಧಿಗೆ ಬರುತ್ತದೆ, ಇದರಲ್ಲಿ ಸಾಮಾನ್ಯ ಜನರು 7.10% ಬಡ್ಡಿದರವನ್ನು ಪಡೆಯುತ್ತಾರೆ ಮತ್ತು ಹಿರಿಯ ನಾಗರಿಕರು 7.60% ಬಡ್ಡಿದರವನ್ನು ಪಡೆಯುತ್ತಾರೆ, ಇದು ಪ್ರಮಾಣಿತ ದರದಲ್ಲಿ ಅನ್ವಯವಾಗುತ್ತದೆ ಮತ್ತು ಹಿರಿಯ ನಾಗರಿಕರಿಗೆ 50 ಬಿಪಿಎಸ್ ಹೆಚ್ಚಾಗಿರುತ್ತದೆ.ಸಿಬ್ಬಂದಿ ಮತ್ತು ಸಿಬ್ಬಂದಿ ಪಿಂಚಣಿದಾರರು ಅವರಿಗೆ ಹೆಚ್ಚುವರಿ ಬಡ್ಡಿ ದರಕ್ಕೆ ಅರ್ಹರಾಗುತ್ತಾರೆ.
ಇದನ್ನೂ ಓದಿ: ಕಪಿಲ್ ಶರ್ಮಾ ಶೋ ಸಹನಟ ಫೇಸ್ ಬುಕ್ ಲೈವ್ ಬಂದು ವಿಷ ಸೇವನೆ! ಕಾರಣವೇನು?