Aaliya Siddiqui: ಬಾಲಿವುಡ್‌ ನಟ ನವಾಜುದ್ದೀನ್‌ ಸಿದ್ಧಿಕಿ ಮಾಜಿ ಪತ್ನಿ ಆಲಿಯಾ ಬಿಗ್‌ಬಾಸ್‌ಗೆ ಎಂಟ್ರಿ! ಹೊಸ ಬಾಯ್‌ಫ್ರೆಂಡ್‌, ವೈಯಕ್ತಿಕ ಜೀವನ ಟಿಆರ್‌ಪಿ ಹಬ್ಬ!

Bollywood news TV Show Big boss OTT 2 final list Nawazuddin Siddiqui’s estranged wife Aaliya Siddiqui participating in Bigg Boss OTT 2

Aaliya Siddiqui: ಬಾಲಿವುಡ್‌ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರು ನವಾಜುದ್ದೀನ್‌ ಸಿದ್ಧಿಕಿ (Nawazuddin Siddiqui). ಇತ್ತೀಚೆಗೆ ಇವರ ಸುದ್ದಿ ಬಹಳ ಪ್ರಚಲಿತವಾಗಿದೆ. ಸಿನಿಮಾ ವಿಚಾರದಿಂದ ಅಲ್ಲ. ತನ್ನ ಪರ್ಸನಲ್‌ ಲೈಫ್‌ನಿಂದಾಗಿ. ಹೌದು. ಎಲ್ಲರಿಗೂ ತಿಳಿದಿರುವ ಹಾಗೆ ನವಾಜುದ್ದೀನ್‌ ಸಿದ್ಧಿಕಿ ಹಾಗೂ ಆತನ ಪತ್ನಿ ಆಲಿಯಾ ಸಿದ್ಧಿಕಿ ನಡುವೆ ನಡೆದ ಕಿತ್ತಾಟ ಎಲ್ಲಾ ಕಡೆ ಸುದ್ದಿಯಾಯಿತು. ನಂತರ ಇಬ್ಬರೂ ಬೇರೆ ಆಗುವ ನಿರ್ಧಾರ ತಗೊಂಡರು. ಆದರೆ ಇದರ ಮಧ್ಯೆ ನವಾಜುದ್ದೀನ್‌ ಸಿದ್ಧಿಕಿ ಅವರ ಪತ್ನಿ ಆಲಿಯಾ (Aaliya Siddiqui) ಹೊಸ ವ್ಯಕ್ತಿ ಜೊತೆ ತನ್ನ ಒಡನಾಟ ಬೆಳೆಸಿಕೊಂಡಿದ್ದಾರೆ ಎಂಬ ಸುದ್ದಿ ಕೂಡಾ ಬಂತು. ಫೋಟೋ ಕೂಡಾ ಹರಿದಾಡಿತು. ಈ ಸುದ್ದಿ ಬಿಸಿ ಬಿಸಿಯಾಗಿ ಸೇಲ್‌ ಆಗುತ್ತಿರುವಾಗಲೇ ಈಗ ಮತ್ತೊಂದು ಮಸ್ತ್‌ ಸುದ್ದಿ ಹೊರ ಬಿದ್ದಿದ್ದೆ. ಅದೇನೆಂದರೆ ಆಲಿಯಾ ʼಬಿಗ್‌ಬಾಸ್‌ ಹಿಂದಿ ಒಟಿಟಿ ಸೀಸನ್‌ 2′ ಗೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆಂದು. ಆ ಮೂಲಕ ಅಲ್ಲದಿದ್ದರೂ ಈ ಮೂಲಕ ಎನ್ನುವ ಹಾಗೆ ಫೇಮಸ್‌ ಆಗುವ ಉದ್ದೇಶದಿಂದ ಇಷ್ಟೆಲ್ಲಾ ಡ್ರಾಮ ಮಾಡ್ತಿದ್ದಾರಾ ಎನ್ನುವ ಕುತೂಹಲ ಜನರಿಗೆ ಇದ್ದೇ ಇದೆ.

 

ಬಿಗ್‌ಬಾಸ್‌ ಒಟಿಟಿ ಮೊದಲ ಸೀಸನ್‌ ಅಷ್ಟರ ಮಟ್ಟಿಗೆ ಯಶಸ್ಸು ಕಂಡಿಲ್ಲ ಎಂದೇ ಹೇಳಬಹುದು. ಇದನ್ನು ಕರಣ್‌ ಜೋಹರ್‌ ನಡೆಸಿಕೊಟ್ಟಿದ್ದರು. ಆದರೆ ಈ ಬಾರಿ ಸಲ್ಮಾನ್‌ ಖಾನ್‌ ಅವರೇ ಒಟಿಟಿ ಶೋ ನಡೆಸಿಕೊಡಲಿದ್ದಾರೆ. ಟಿಆರ್‌ಪಿ ಇರೋ ಸ್ಪರ್ಧಿಗಳನ್ನು ಇಲ್ಲಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಇದರಲ್ಲಿ ಆಲಿಯಾ ಕೂಡಾ ಇದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರೊಮೋ ಒಂದನ್ನು ಬಿಡುಗಡೆಯಾಗಿದ್ದು, ಇದರಲ್ಲಿ ಯಾರ ಮುಖ ಕೂಡಾ ಸ್ಪಷ್ಟವಾಗಿಲ್ಲ. ಆದರೆ ಅಲ್ಲಿ ಕೇಳಿ ಬಂದ ವಾಕ್ಯ ಮಾತ್ರ ಆಲಿಯಾ ಅವರದ್ದೇ ಎಂದು ಸ್ಪಷ್ಟವಾಗಿದೆ. ʼ ನಾನೋರ್ವ ಸ್ಟಾರ್‌ ನಟನ ಪತ್ನಿ, ನನ್ನ ವೈವಾಹಿಕ ಜೀವನದಲ್ಲಿ ನಾನು ತುಂಬಾ ಕಷ್ಟ ಅನುಭವಿಸಿದೆ. ಪತಿಯಿಂದ ತೊಂದರೆಗೊಳಗಾಗಿ ನಾನು ವೈವಾಹಿಕ ಜೀವನದಿಂದ ಹೊರಬರಲು ನಿರ್ಧರಿಸಿದೆ. ಇದುವೇ ನಾನು ಬಿಗ್‌ಬಾಸ್‌ನಲ್ಲಿ ಇರಲು ಕಾರಣʼ ಎಂಬುವುದಾಗಿ ಮಹಿಳೆಯೋರ್ವಳು ಹೇಳಿದ್ದಾರೆ. ಇದು ಆಲಿಯಾ ಅವರೇ ಎಂದು ಎಲ್ಲರೂ ಭಾವಿಸಿದ್ದಾರೆ.

ಇದನ್ನೂ ಓದಿ: ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ರೂ.20ಸಾವಿರ ಗೆಲ್ಲಿ! ನೋಂದಣಿಗಾಗಿ ಇಲ್ಲಿದೆ ಮಾಹಿತಿ

Leave A Reply

Your email address will not be published.