Home Entertainment Urfi javed: ಅಯ್ಯಯ್ಯೋ… ಈ ಉರ್ಫಿಗೆ ಸಡನ್ ಏನಾಯ್ತು? ಕೊನೆಗೂ ಮೈತುಂಬಾ ಬಟ್ಟೆ ಹಾಕಿದ ನಟಿಯ...

Urfi javed: ಅಯ್ಯಯ್ಯೋ… ಈ ಉರ್ಫಿಗೆ ಸಡನ್ ಏನಾಯ್ತು? ಕೊನೆಗೂ ಮೈತುಂಬಾ ಬಟ್ಟೆ ಹಾಕಿದ ನಟಿಯ ಕಂಡು ನೆಟ್ಟಿಗರು ಶಾಕ್!!

Urfi javed
Image source- Bollywood Life, Public TV, News 18 kannada

Hindu neighbor gifts plot of land

Hindu neighbour gifts land to Muslim journalist

Urfi javed:ನಟಿ ಉರ್ಫಿ ಜಾವೆದ್‌(Urfi javed) ಇದೇ ಮೊದಲ ಬಾರಿಗೆ ಮೈತುಂಬ ಬಟ್ಟೆ ಹಾಕಿಕೊಂಡಿದ್ದಾರೆ. ಅವರು ಈ ಬಾರಿ ಏಲಿಯನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಡ್ರೆಸ್​ನಲ್ಲಿ ಉರ್ಫಿ ಜಾವೇದ್ ಅವರ ಕಣ್ಣು ಹಾಗೂ ಬಾಯಿಯನ್ನು ಬಿಟ್ಟು ಬೇರೇನೂ ಕಾಣಿಸುತ್ತಿರಲಿಲ್ಲ.

ಹೌದು, ನಟಿ ಉರ್ಫಿ ಜಾವೇದ್​ ಅವರು ಪ್ರತಿ ಬಾರಿಯೂ ಚಿತ್ರ-ವಿಚಿತ್ರವಾದ ಬಟ್ಟೆ ಧರಿಸಿ ಪೋಸ್​ ನೀಡುತ್ತಾರೆ. ಆ ಕಾರಣದಿಂದ ಆಗಾಗ ಅವರು ವಿವಾದ ಮಾಡಿಕೊಂಡಿದ್ದೂ ಇದೆ. ಹೀಗೆ ಅರೆಬರೆ ಉಡುಪು ಧರಿಸುವ ಮೂಲಕವೇ ಫೇಮಸ್ ಆಗಿದ್ದ ಉರ್ಫಿ ಜಾವೇದ್ (Urfi Javed) ಕೊನೆಗೂ ಮೈ ತುಂಬಾ ಬಟ್ಟೆ ಹಾಕಿದ್ದಾರೆ. ವಿಚಿತ್ರ ಬಟ್ಟೆಗಳನ್ನ ಧರಿಸೋದ್ರಲ್ಲಿ ಯಾವಾಗಲೂ ಮುಂದಿದ್ದ ಉರ್ಫಿ ಮೊಟ್ಟ ಮೊದಲ ಬಾರಿಗೆ ಮೈತುಂಬಾ ಬಟ್ಟೆ ಧರಿಸಿ ಏಲಿಯನ್(Alien) ರೂಪದಲ್ಲಿ ಹೊರಗೆ ಬಂದಿದ್ದಾರೆ.

ಅಂದಹಾಗೆ ಉರ್ಫಿ ಇತ್ತೀಚೆಗೆ ಏಲಿಯನ್​ನಂತೆ ಡ್ರೆಸ್ ಮಾಡಿಕೊಂಡುಬಂದರು. ಈ ಡ್ರೆಸ್​ನಲ್ಲಿ ಉರ್ಫಿ ಜಾವೇದ್ ಅವರ ಕಣ್ಣು ಹಾಗೂ ಬಾಯಿಯನ್ನು ಬಿಟ್ಟು ಬೇರೇನೂ ಕಾಣಿಸುತ್ತಿರಲಿಲ್ಲ. ಉರ್ಫಿಯ ಅವತಾರ ನೋಡಿದ ನೆಟ್ಟಿಗರು ನೀವು ದೆವ್ವದಂತೆಯೇ ಕಾಣುತ್ತಿದ್ದೀರಿ ಎಂದಿದ್ದಾರೆ. ಇನ್ನೂ ಕೆಲವರು ಏನಮ್ಮಾ ಇದು ಇವತ್ತೇನೂ ಕಾಣಿಸ್ತಿಲ್ವಲ್ಲಾ? ನಿನಗೆ ಬೇಸಿಗೆ ಬಿಸಿ ತಟ್ಟುತ್ತಿಲ್ವೇ ಎಂದು ಕೇಳಿದ್ದಾರೆ. ಇನ್ನೂ ಕೆಲವರು ನೀವು ಥೇಟ್ ಏಲಿಯನ್ ರೀತಿಯೇ ಕಾಣಿಸುತ್ತಿದ್ದೀರಿ ಎಂದಿದ್ದಾರೆ.

ಅಲ್ಲದೆ ತನ್ನ ವಿಚಿತ್ರ ಕಾಸ್ಟ್ಯೂಮ್(Costumel ಮೂಲಕ ಬಾಲಿವುಡ್(Bollywood) ಸಿನಿ ರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಉರ್ಫಿ ಜಾವೇದ್ ಮೇಲೆ ಉರಿದುಕೊಂಡವರೇ ಹೆಚ್ಚು. ಅವಳು ಧರಿಸುವ ಅರೆಬರೆ ಬಟ್ಟೆಯ ಬಗ್ಗೆ ಸಾಕಷ್ಟು ದೂರುಗಳು ಇವೆ. ಈ ವಿಚಾರವಾಗಿ ಅವಳು ಪೊಲೀಸ್ ಸ್ಟೇಶನ್ ಮೆಟ್ಟಿಲೂ ಹತ್ತಿದ್ದಾರೆ.

ಅಲ್ಲದೆ ಇತ್ತೀಚೆಗೆ ಉರ್ಫಿ ಜಾವೇದ್ ಇದೀಗ ತಾವು ತುಂಡುಗೆ ಧರಿಸುವುದಕ್ಕೆ ಕಾರಣವೇನು ಎನ್ನುವುದನ್ನು ಬಹಿರಂಗ ಮಾಡಿದ್ದರು. ತಾನು ಮೈತುಂಬಾ ಬಟ್ಟೆಗಳನ್ನು ಧರಿಸುವುದರ ಹಿಂದೆ ಆರೋಗ್ಯದ ಸಮಸ್ಯೆ ಇದೆ, ಸ್ಕಿನ್ ಅಲರ್ಜಿ(Skin allergy) ಆಗುವುದರಿಂದ ಸಣ್ಣ ಬಟ್ಟೆಗಳನ್ನು ಧರಿಸುತ್ತೇನೆ ಎಂದು ತನ್ನ ಕಾಲುಗಳಿಗೆ ಆಗಿರುವ ಅಲರ್ಜಿಯ ವೀಡಿಯೊವನ್ನು ಸಹ ಹಂಚಿಕೊಂಡಿದ್ದರು.

ಇದನ್ನೂ ಓದಿ :ಸ್ಯಾಂಡಲ್ ವುಡ್ ನಟ ಕಝಾನ್ ಖಾನ್ ಹೃದಯಾಘಾತದಿಂದ ಸಾವು!