Udupi: ಉಡುಪಿಯಲ್ಲಿ ಹೆಚ್ಚಲಿದೆ ಸರ್ಕಾರಿ ಬಸ್: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಯಿಂದ ಆತಂಕದಲ್ಲಿ ಪ್ರೈವೇಟ್ ಬಸ್ ವ್ಯವಸ್ಥೆ !

Udupi: ರಾಜ್ಯದಲ್ಲಿ ಕಾಂಗ್ರೆಸ್ (congress) ಸರ್ಕಾರ ಘೋಷಿಸಿದಂತೆ ಗ್ಯಾರಂಟಿಯನ್ನು ಜಾರಿಗೆ ತಂದಿದೆ. ಜೂ.11 ರಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆ ಅನುಷ್ಠಾನಕ್ಕೆ ಬಂದಿದೆ. ಈ ಮಧ್ಯೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Laxmi Hebbalkar) ಅವರು ಉಡುಪಿಯಲ್ಲಿ (Udupi) ಸರ್ಕಾರಿ ಬಸ್​ಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ

ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

 

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಉಡುಪಿ ಜಿಲ್ಲೆಯಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ಕೊಟ್ಟರು. ಈ ವೇಳೆ ಸರ್ಕಾರಿ ಬಸ್ ಸಂಖ್ಯೆ ಕಡಿಮೆ ಇದ್ದು, ಜನರು ಬಸ್ಸಿನಲ್ಲಿ ತುಂಬಿತುಳುಕುವುದನ್ನು ಕಂಡ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸರ್ಕಾರಿ ಬಸ್ ಸಂಖ್ಯೆ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದರು.

 

“ಉಡುಪಿ ಜಿಲ್ಲೆಯಲ್ಲಿ ಸರ್ಕಾರಿ ಬಸ್​ಗಳ ಸಂಖ್ಯೆ ಎಷ್ಟಿದೆ ಎಂದು ಮಾಹಿತಿ ಪಡೆದಿದ್ದೇನೆ. ಕೇವಲ 95 ಬಸ್​ಗಳು ಮಾತ್ರ ಇವೆ. ಈ ಭಾಗದಲ್ಲಿ ಖಾಸಗಿ ಬಸ್​ಗಳೇ ಹೆಚ್ಚಿದೆ. ಹೀಗಾಗಿ ಉಡುಪಿ ಮಹಿಳೆಯರು ಸರ್ಕಾರದ ಯೋಜನೆಯಿಂದ ವಂಚಿತರಾಗುತ್ತಾರೆ. ಉಡುಪಿ ಭಾಗದಲ್ಲಿ ಸರ್ಕಾರಿ ಬಸ್​ಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ಮುಖ್ಯಮಂತ್ರಿಗಳಲ್ಲಿ ಮಾತಾಡುತ್ತೇನೆ. ಸಾರಿಗೆ ಸಚಿವರ ಗಮನಕ್ಕೂ ತರುತ್ತೇನೆ” ಎಂದು ಹೇಳಿದರು.

 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದಿನಿಂದಲೂ ನಗರ ಸಹಿತ ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಬಸ್’ಗಳಿಗಿಂತ ಖಾಸಗಿ ಬಸ್ ಗಳದ್ದೇ ಓಡಾಟ ಹೆಚ್ಚು. ಆದರೆ, ಇದೀಗ ಖಾಸಗಿ ಬಸ್ ವ್ಯವಸ್ಥೆಗೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಸಚಿವೆ ಲಕ್ಷ್ಮೀ ಅವರ ಹೇಳಿಕೆಯಿಂದ ಖಾಸಗಿ ಬಸ್ ವ್ಯವಸ್ಥೆ ಆತಂಕದಲ್ಲಿವೆ. ಸದ್ಯ ಉಚಿತ ಬಸ್ ಪ್ರಯಾಣ ಇರುವುದರಿಂದ ಸರ್ಕಾರಿ ಬಸ್ ಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಉಡುಪಿಯಲ್ಲಿ ಸರ್ಕಾರಿ ಬಸ್ ಗಳ ಸಂಖ್ಯೆ ಹೆಚ್ಚಳ ಮಾಡುವ ಬಗ್ಗೆ ಸಚಿವೆ ಭರವಸೆಯೂ ಕೊಟ್ಟಿದ್ದಾರೆ.

 

ಅಲ್ಲದೆ, ಈ ಹಿಂದೆಯೂ ಸರ್ಕಾರಿ ಬಸ್ ಗಳ ಸಂಖ್ಯೆ ಹೆಚ್ಚಳದ ಬಗ್ಗೆ ಸುದ್ದಿ ಕೇಳಿಬರುತ್ತಿತ್ತು. ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ಖಾಸಗಿ ಬಸ್ ಗಳ ಓಡಾಟ ಹೆಚ್ಚಾಗಿದೆ. ಗ್ರಾಮೀಣ ಭಾಗಗಳಿಂದ ನಗರಕ್ಕೆ ಬರುವ ಬಸ್ ಗಳಲ್ಲಿ ಪ್ರತೀ ನಿತ್ಯವೂ ಜನ ತುಂಬಿ ತುಳುಕುತ್ತಿದ್ದು, ಈ ನಡುವೆ ಕೆಲವೊಂದು ಕಡೆಗಳಲ್ಲಿ ಕೋಮು ಸಂಘರ್ಷಗಳಾದ ವರದಿಯಾಗಿದೆ. ಆಕಸ್ಮಿಕವಾಗಿ ಭಿನ್ನಕೋಮಿನ ಜೋಡಿ ಒಂದೇ ಸೀಟ್ ನಲ್ಲಿ ಕಂಡರೆ ಹಲ್ಲೆ, ಮಾನಹಾನಿ ಪ್ರಕರಣ ಹೆಚ್ಚಾಗುತ್ತಿದೆ.

 

ಜಿಲ್ಲೆಯಲ್ಲಿ ಜನರಿಗೆ ಉತ್ತಮ ಸೇವೆಯ ಜೊತೆಗೆ ಕೋಮು ವಾದ-ಸಂಘರ್ಷಕ್ಕೂ ಖಾಸಗಿ ಬಸ್ ವೇದಿಕೆಯಾಗಿದೆ ಎನ್ನುವ ಗಂಭೀರ ವಿಚಾರದ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸರ್ಕಾರ ದಕ್ಷಿಣ ಕನ್ನಡ ನಗರ ಸಹಿತ ಇಡೀ ಜಿಲ್ಲೆಯಲ್ಲಿ ಖಾಸಗಿ ಬಸ್ ಓಡಾಟ ಸ್ಥಗಿತಗೊಳಿಸಿ, ಸರ್ಕಾರಿ ಬಸ್ ಗಳ ಸಂಖ್ಯೆ ಹೆಚ್ಚು ಮಾಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಸದ್ಯ ಮಂಗಳೂರು ನಗರದಲ್ಲಿ ಸುಮಾರು 500 ಕ್ಕೂ ಹೆಚ್ಚು ಖಾಸಗಿ ಬಸ್ ಗಳು ಓಡಾಟ ನಡೆಸುತ್ತಿದ್ದು, ಸರ್ಕಾರದ ಚಿಂತನೆಯ ಪ್ರಕಾರ ಸರ್ಕಾರಿ ಬಸ್ ಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ :ಗೃಹಜ್ಯೊತಿ ಹೊಸ ಮಾರ್ಗ ಸೂಚಿ ಪ್ರಕಟಮನೆ ಕಟ್ಟಿದವರಿಗೆ, ಹೊಸ ಬಾಡಿಗೆದಾರರಿಗೆ ವಿದ್ಯುತ್ ಯೂನಿಟ್ ನಿಗದಿ ಮಾಡಿ ಆದೇಶ

Leave A Reply

Your email address will not be published.