Home Karnataka State Politics Updates Shivraj kumar: ಸಿಎಂ ಭೇಟಿ ಬಳಿಕ ಗರಂ ಆಗಿಯೇ ಹೊರನಡೆದ ಶಿವರಾಜ್ ಕುಮಾರ್!! ಮಾಧ್ಯಮಗಳಿಗೂ ಪ್ರತಿಕ್ರಿಸದೆ...

Shivraj kumar: ಸಿಎಂ ಭೇಟಿ ಬಳಿಕ ಗರಂ ಆಗಿಯೇ ಹೊರನಡೆದ ಶಿವರಾಜ್ ಕುಮಾರ್!! ಮಾಧ್ಯಮಗಳಿಗೂ ಪ್ರತಿಕ್ರಿಸದೆ ಸೀದಾ ಕಾರು ಹತ್ತಿ ಹೋಗಿದ್ಯಾಕೆ?

Shivraj kumar
image source : India Today, Jsnewstimes

Hindu neighbor gifts plot of land

Hindu neighbour gifts land to Muslim journalist

Shivraj kumar :ಖ್ಯಾತ ನಟ ಹ್ಯಾಟ್ರಿಕ್ ಹೀರೋ(Hatric hero)ಶಿವರಾಜ್ ಕುಮಾರ್(Shivraj kumar)ಅವರು ತುಸು ಇತ್ತೀಚೆಗೆ ರಾಜ್ಯ ರಾಜಕೀಯ ವಲಯದಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್(Congress) ಪರವಾಗಿರೋ ಅವರು ಆಗಾಗ ನಾಯಕರುಗಳೊಂದಿಗೆ ಕಾಣಿಸುತ್ತಾರೆ. ಸಿಎಂ ಸಿದ್ದುಗೂ(CM Siddaramaiah) ಶಿವಣ್ಣ ಆಪ್ತರೇ. ಆದರಿಂದು ಸಿಎಂ ಭೇಟಿಗಾಗಿ ಬಂದಿದ್ದ ಶಿವಣ್ಣ, ಅವರೊಂದಿಗೆ ಮಾತುಕತೆ ನಡೆಸಿ ಕೊಂಚ ಗರಂ ಆಗಿಯೇ ಹೊರಬಂದಿದ್ದಾರೆ. ಅಲ್ಲದೆ ಯಾವ ಪ್ರತಿಕ್ರಿಯೆಯೂ ನೀಡದೆ ಕಾರು ಹತ್ತಿ ಹೊರಟುಹೋಗಿದ್ದಾರೆ. ಹಾಗಾದರೆ ಶಿವಣ್ಣ-ಸಿದ್ದು ನಡುವೆ ನಡೆದ ಮಾತುಕತೆಯೇನು?

ಹೌದು, ಕರ್ನಾಟಕದಲ್ಲಿ ಈ ಸಲ ನಡೆದ ವಿಧಾನಸಭಾ ಚುನಾವಣೆಯ(Assembly election) ಒಂದು ರೀತಿಯಲ್ಲಿ ಕೊಂಚ ಸ್ಪೆಷಲ್ ಎಂದೇ ಹೇಳಬಹುದು. ಯಾಕೆಂದರೆ ಈ ಬಾರಿ ಹೆಚ್ಚಿನ ಸಿನಿಮಾ ತಾರೆಯರು ಸ್ಟಾರ್ ಪ್ರಚಾರಕರಾಗಿ ಬೇರೆ ಬೇರೆ ಪಾರ್ಟಿಗಳಿಂದ ಚುನಾವಣಾ ಅಕಾಡಕ್ಕಿಳಿದಿದ್ದರು. ಅಂತೆಯೇ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivraj kumar)ಅವರು ಇತ್ತೀಚೆಗೆ ರಾಜ್ಯ ರಾಜಕೀಯ ವಲಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ಸಿದ್ದು ಆಪ್ತರಲ್ಲಿ ಒಬ್ಬರಾಗಿದ್ದಾರೆ. ಇಂದು ಸಿಎಂ ಭೇಟಿಗಾಗಿ ಸ್ವತಃ ಕಾರು ಓಡಿಸಿಕೊಂಡು ಬಂದಿದ್ದ ಶಿವಣ್ಣ, ಸಿಎಂ ಜೊತೆ ಮಾತುಕತೆ ನಡೆಸಿ ಕೊಂಚ ಗರಂ ಆಗಿಯೇ ಹೊರಬಂದಿದ್ದಾರೆ. ಅಲ್ಲದೆ ಯಾವ ಪ್ರತಿಕ್ರಿಯೆಯೂ ನೀಡದೆ ಕಾರು ಹತ್ತಿ ಹೊರಟುಹೋಗಿದ್ದಾರೆ.

ಇಂದು ಮುಖ್ಯಮಂತ್ರಿಗಳನ್ನು(CM) ಭೇಟಿ ಮಾಡಲು ಸ್ವತಃ ಕಾರು ಡ್ರೈವ್ ಮಾಡಿಕೊಂಡು ಬಂದಿದ್ದರು ಶಿವರಾಜ್ ಕುಮಾರ್. ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸದಲ್ಲಿ ಪತ್ನಿ ಗೀತಾ(Geeta) ಅವರ ಜತೆ ಬಂದು ಸಿಎಂ ಭೇಟಿ ‌ಮಾಡಿದ ನಟ ಶಿವರಾಜ್ ಕುಮಾರ್, ಕೆಲ ಹೊತ್ತು ಅವರೊಂದಿಗೆ ಮಾತನಾಡಿದ್ದಾರೆ. ಮಾತುಕತೆ ಬಳಿಕ ಹೊರ ಬಂದ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಪ್ರತಿಕ್ರಿಯೆ ಕೊಡದೇ ತೆರಳಿದರು. ವಿಶೇಷಿ ಅಂದರೆ ವಣ್ಣ ದಂಪತಿ ಜೊತೆ ಸಚಿವ ಮಧು ಬಂಗಾರಪ್ಪ(Minister madhu bangarappa)ಕೂಡ ಆಗಮಿಸಿದ್ದರು! ಇಷ್ಟಾಗಿಯೂ ಒಳಗಡೆ ಶಿವಣ್ಣ- ಸಿದ್ದರಾಮಯ್ಯ ನಡುವೆ ಏನು ಮಾತುಕತೆ ನಡೆಯಿತು ಎಂಬುದು ತಿಳಿದಿಲ್ಲ. ಆದರೆ ಶಿವಣ್ಣ ಮಾತ್ರ ಕೊಂಚ ಗಂಭೀರವಾಗಿ ಹೊರನಡೆದದ್ದು ನಿಜ.

ಅಂದಹಾಗೆ ಮಧು ಬಂಗಾರಪ್ಪ (Madhu Bangarappa), ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಪರವಾಗಿ ಪ್ರಚಾರ ಮಾಡಿ ಕಾಂಗ್ರೆಸ್ ಗೆಲುವಿಗೆ ಕಾರಣರಾಗಿದ್ದ ಶಿವರಾಜ್ ಕುಮಾರ್ ಭೇಟಿಯಾಗಿ ಕಾಂಗ್ರೆಸ್ ಮುಖಂಡ ಸುರ್ಜೆವಾಲಾ ಸ್ವತಃ ಶಿವಣ್ಣ ಮನೆಗೆ ಬಂದಿದ್ದರು. ಆನಂತರ ಸಂಬಂಧಿ ಮಧು ಬಂಗಾರಪ್ಪ ಮಂತ್ರಿಯಾದರು. ಮಧು ಮಂತ್ರಿಯಾಗಿದ್ದರ ಹಿಂದೆ ಶಿವರಾಜ್ ಕುಮಾರ್ ಪ್ರಭಾವವೂ ಇದೆ ಎಂದು ಹೇಳಲಾಗುತ್ತಿದೆ.

ಅಲ್ಲದೆ ನಿರಂತರ ಚಿತ್ರೀಕರಣ ಮಧ್ಯೆಯೂ ಶಿವರಾಜ್ ಕುಮಾರ್, ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇತ್ತೀಚೆಗಷ್ಟೇ ನಡೆದ ಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದಲ್ಲೂ ಶಿವಣ್ಣ ಪತ್ನಿ ಸಮೇತ ಹಾಜರಿದ್ದರು. ಆದರೆ ಇಂದು ಯಾವ ಕಾರಣಕ್ಕೆ ಇಬ್ಬರ ಭೇಟಿ ಆಯಿತು? ಎಂಬುದು ಪ್ರಶ್ನೆಯಾಗಿದೆ.

ಇದನ್ನೂ ಓದಿ : Address change in PAN: ಪಾನ್​ ಕಾರ್ಡ್​ನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸಬೇಕಾ?ಇಷ್ಟು ಮಾಡಿ ಸಾಕು !