Police Force Recruitment: ಬಾರ್ಡರ್ ಪೊಲೀಸ್ ಫೋರ್ಸ್ ಕಾನ್ಸ್‌ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ ! ಇಲ್ಲಿದೆ ಎಲ್ಲಾ ವಿವರ
Police Force Recruitment: ಗ್ರೂಪ್ ಸಿ ನಾನ್-ಗೆಜೆಟೆಡ್ (ನಾನ್ ಮಿನಿಸ್ಟ್ರೇರಿಯಲ್) ಹುದ್ದೆಗಳಾಗಿರುವ, ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್‌ನಲ್ಲಿ ( Police Force Recruitment) ಅಗತ್ಯ ಕಾನ್ಸ್‌ಟೇಬಲ್ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಇದೀಗ ಶಾರ್ಟ್ ನೋಟಿಸ್ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಯನ್ನು ಜೂನ್ 26 ರಿಂದ ಜುಲೈ 27 ರವರೆಗೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ಹೆಸರು : ಕಾನ್ಸ್‌ಟೇಬಲ್ (ಡ್ರೈವರ್)
ಹುದ್ದೆಗಳ ಸಂಖ್ಯೆ : 458 (UR-195, SC-74, ST-37, OBC-110, EWS-42)
ವಿದ್ಯಾರ್ಹತೆ : ಮೆಟ್ರಿಕ್ಯೂಲೇಷನ್ ಅಥವಾ 10ನೇ ತರಗತಿ ಪಾಸ್ ಮಾಡಿರಬೇಕು.
ಅರ್ಜಿ ಶುಲ್ಕ : ರೂ.100.
ವಯಸ್ಸಿನ ಅರ್ಹತೆ : ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು.
ವೇತನ ಶ್ರೇಣಿ: ರೂ.21,700-69100
ಐಟಿಬಿಪಿ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆಯ ಪಠ್ಯಕ್ರಮ ಎಸ್ಎಸ್‌ಎಲ್‌ಸಿ ಹಂತದ ಪಠ್ಯಕ್ರಮದ ಜತೆಗೆ ಪ್ರಚಲಿತ ವಿದ್ಯಮಾನಗಳನ್ನು ಹೊಂದಿರುತ್ತದೆ.
ಮುಖ್ಯವಾಗಿ ಹೆವಿ ವೆಹಿಕಲ್ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ಪ್ರಮುಖ ದಿನಾಂಕಗಳು:
ಆನ್‌ಲೈನ್ ರಿಜಿಸ್ಟ್ರೇಷನ್ ಸಲ್ಲಿಸಲು ಆರಂಭಿಕ ದಿನಾಂಕ : 27-06-2023
ಆನ್‌ಲೈನ್ ರಿಜಿಸ್ಟ್ರೇಷನ್ ಸಲ್ಲಿಸಲು ಕೊನೆ ದಿನಾಂಕ : 26-07-2023 ರ 11:59 ಗಂಟೆವರೆಗೆ.
ಆನ್‌ಲೈನ್ ಅರ್ಜಿ ಸಲ್ಲಿಸಲು ಹಾಗೂ ನೇಮಕಾತಿ ಡೀಟೇಲ್ಡ್ ಅಧಿಸೂಚನೆಯನ್ನು ತಿಳಿಯಲು ಲಿಂಕ್ ಅನ್ನು ಕ್ಲಿಕ್ ಮಾಡಿ
ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ ಅಧಿಕೃತ ವೆಬ್‌ಸೈಟ್ ವಿಳಾಸ: www.recruitment.itbpolice.nic.in
ಅಭ್ಯರ್ಥಿಗಳನ್ನು ದೈಹಿಕ ಸಾಮರ್ಥ್ಯ ಪರೀಕ್ಷೆ / ಸಹಿಷ್ಣುತಾ ಪರೀಕ್ಷೆ / ಲಿಖಿತ ಪರೀಕ್ಷೆ / ಮೂಲ ದಾಖಲೆಗಳ ಪರಿಶೀಲನೆ / ಪ್ರಾಯೋಗಿಕ ಪರೀಕ್ಷೆ / ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ. ಷರತ್ತುಗಳು ಅನ್ವಯ.
ಇದನ್ನೂ ಓದಿ :5 ತಿಂಗಳ ಬಾಕಿ ತುಟ್ಟಿಭತ್ಯೆ ಯಾವ ಶ್ರೇಣಿಯವರಿಗೆ ಎಷ್ಟು?ಅಧಿಕಾರಿ ವರ್ಗದಲ್ಲಿ ನಡೆದಿದೆ ಭಾರೀ ಚರ್ಚೆ