MYTH: ತನ್ನ ಕಣ್ಣೀರು ಕುಡಿದು ನವಿಲು ಗರ್ಭಿಣಿಯಾಗುತ್ತದೆಯೇ? ಇದರಲ್ಲಿ ಎಷ್ಟು ಸತ್ಯವಿದೆ?

Myth and science interesting news peahen get pregnant after drinking peacock tears is it true

Peacock tears pregnant: ಕೆಲವೊಂದು ವಿಷಯಗಳು ನಮಗೆ ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ಅದೇ ರೀತಿ ಕೆಲವೊಂದು ಸತ್ಯ ನಮ್ಮ ಕಣ್ಣ ಮುಂದೆ ಬಂದಾಗ ಇದು ನಿಜವಾಗಲೂ ನಿಜವಾ ಎಂಬ ಗೊಂದಲಕ್ಕೆ ಒಳಗಾಗುತ್ತೇವೆ. ಅದೇನೆಂದರೆ, ನವಿಲು ಕಣ್ಣೀರು ಕುಡಿದು ಗರ್ಭವತಿಯಾಗುತ್ತೆ(Peacock tears pregnant) ಎಂಬುವುದಾಗಿ. ಏನಿದು ಹೊಸ ವಿಷಯ? ನಿಜವಾಗಿಯೂ ಇದು ಸತ್ಯವೇ? ಇದನ್ನು ಓದಿ ನಿಮ್ಮ ಮನಸ್ಸಲ್ಲೂ ಗೊಂದಲ ಮೂಡುವುದು ನಿಜ.

ಈ ವಿಷಯದ ಬಗ್ಗೆ ನಿಮಗೇನಾದರೂ ಸಂಶಯ ಬಂದು ಗೂಗಲ್‌, ಅಥವಾ ಇನ್ಯಾವುದೇ ಸರ್ಚ್‌ ಇಂಜಿನ್‌ನಲ್ಲಿ ಹುಡುಕಲು ಹೋದರೆ ಈ ವಿಷಯದಲ್ಲಿ ಸ್ವಲ್ಪ ಸತ್ಯವಿಲ್ಲ ಎಂಬ ನಿಜಾಂಶ ನಿಮಗೆ ತಿಳಿಯುತ್ತದೆ. ಹಾಗೆನೇ ವಿಜ್ಞಾನ ಕೂಡಾ ಇಂತಹ ಸಿದ್ಧಾಂತವನ್ನು ನಂಬಬೇಡಿ ಎಂಬ ಸಲಹೆ ನೀಡುತ್ತದೆ. ಹಾಗೆನೇ ಮೂರನೆಯ ಜೀವಿ ಜನ್ಮಕ್ಕೆ ಎರಡೂ ಜೀವ ಒಂದಾದರೆ ಮಾತ್ರ ಇದು ಸಾಧ್ಯ ಎಂಬ ನಿಯಮವನ್ನು ವಿಜ್ಞಾನ ಎತ್ತಿ ಹಿಡಿಯುತ್ತದೆ.

ಹಾಗಾದರೆ ನವಿಲು ಹೇಗೆ ಗರ್ಭಿಣಿಯಾಗುತ್ತದೆ?
ಇತರ ಪ್ರಾಣಿಗಳು ಮತ್ತು ಪಕ್ಷಿಗಳು ಮಾಡುವ ರೀತಿಯಲ್ಲಿಯೇ ನವಿಲುಗಳು ಸಹ ಮಕ್ಕಳಿಗೆ ಜನ್ಮ ನೀಡುತ್ತವೆ. ಹಾಗಾಗಿ ನವಿಲಿನ ಎಳನೀರು ಕುಡಿದು ಗರ್ಭವತಿಯಾಗುವ ಮಾತು ನಿರಾಧಾರ. ನವಿಲು ಮತ್ತು ನವಿಲುಗಳ ಸಂತಾನೋತ್ಪತ್ತಿ ವಿಧಾನವೂ ಇತರ ಪಕ್ಷಿಗಳಂತೆಯೇ ಇರುತ್ತದೆ. ಈ ಸಮಯದಲ್ಲಿ, ಗಂಡು ನವಿಲು ತನ್ನ ವೀರ್ಯವನ್ನು ಹೆಣ್ಣಿನ ದೇಹಕ್ಕೆ ವರ್ಗಾಯಿಸಿ, ಸಂತಾನೋತ್ಪತ್ತಿ ಮಾಡುತ್ತದೆ.

ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ನವಿಲು ತನ್ನ ವರ್ಣರಂಜಿತ ಗರಿಗಳಿಂದ ಆಕರ್ಷಿಸಿ ತನ್ನತ್ತ ಗಮನ ಸೆಳೆಯುತ್ತದೆ. ನಂತರ ಹೆಣ್ಣು ನವಿಲಿನ ಒಪ್ಪಿಗೆಯ ಮೇರೆಗೆ ಇಬ್ಬರೂ ಸಂಬಂಧ ಹೊಂದುತ್ತಾರೆ.

ಇದನ್ನೂ ಓದಿ: ಸಮಾಜದಲ್ಲಿ ವಿಶೇಷ ಗೌರವ ಹೆಚುತ್ತದೆ ಈ ರಾಶಿಯವರಿಗೆ!

Leave A Reply

Your email address will not be published.