Vastu Tips: ಮಣ್ಣಿನಿಂದ ಮಾಡಿದ ಈ ವಸ್ತುಗಳನ್ನು ಮನೆಯಲ್ಲಿ ಇರಿಸಿ ಲಕ್ಷ್ಮಿ ಕೃಪೆಯಿಂದ ಸಂತೋಷ – ಸಂಪತ್ತು ಪ್ರಾಪ್ತಿಸಿ!

Vastu shastra tips in kannada Keep these items made of clay at home and get happiness

Vastu Tips: ಹಿಂದೂ ಧರ್ಮದಲ್ಲಿ ಲಕ್ಷ್ಮಿ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ಅಧಿದೇವತೆ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ ಪ್ರತಿಯೊಬ್ಬ ವ್ಯಕ್ತಿಯು ಲಕ್ಷ್ಮಿ ದೇವಿಯನ್ನು ಪೂಜಿಸಲು ಮತ್ತು ಆಕೆಯ ಆಶೀರ್ವಾದವನ್ನು ಪಡೆದುಕೊಳ್ಳಲು ಬಯಸುತ್ತಾನೆ. ನಿಮ್ಮ ಮನೆಯಲ್ಲೂ ಲಕ್ಷ್ಮಿ ದೇವಿ ಸದಾಕಾಲ ನೆಲೆಸಬೇಕೆಂದು ಬಯಸಿದರೆ ಕೆಲವೊಂದು ವಸ್ತುಗಳನ್ನು ಮನೆಗೆ ತರುವುದರಿಂದ ಲಕ್ಷ್ಮಿ ದೇವಿಯ ಅನುಗ್ರಹ ನಿಮ್ಮ ಮೇಲಿರುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ (Vastu Tips) ತಿಳಿಸಲಾಗಿದೆ .

ಹೌದು, ಮಣ್ಣಿನಿಂದ ಮಾಡಿದ ಈ 6 ವಸ್ತುಗಳನ್ನು ಮನೆಗೆ ತರುವ ಮೂಲಕ ಲಕ್ಷ್ಮಿಯ ಕೃಪೆಯಿಂದ ಸಂತೋಷ – ಸಂಪತ್ತು ವೃದ್ಧಿಸಿಕೊಳ್ಳಬಹುದಾಗಿದೆ.

ಸಸ್ಯಗಳನ್ನು ನೆಡಲು ಪ್ಲಾಸ್ಟಿಕ್ ಮಡಕೆಗಳನ್ನು ಬಳಸಬೇಡಿ, ಇದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಮನೆಯಲ್ಲಿರುವ ಮರಗಳು ಮತ್ತು ಸಸ್ಯಗಳನ್ನು ಯಾವಾಗಲೂ ಮಣ್ಣಿನ ಕುಂಡಗಳಲ್ಲಿ ನೆಡಬೇಕು.

ಮನೆಯಲ್ಲಿ ಮಣ್ಣಿನಿಂದ ಮಾಡಿದ ವಿಗ್ರಹಗಳನ್ನು ಪ್ರತಿಷ್ಠಾಪಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಮಣ್ಣಿನಿಂದ ಮಾಡಿದ ಗಣೇಶ, ಲಕ್ಷ್ಮಿ ಮೂರ್ತಿ ಇಡಿ. ಇದರಿಂದ ಲಕ್ಷ್ಮಿ ದೇವಿ ಸಂತುಷ್ಟಳಾಗುತ್ತಾಳೆ.

ಶಾಸ್ತ್ರಗಳಲ್ಲಿ, ಪೂಜೆಯ ಸಮಯದಲ್ಲಿ ಮಣ್ಣಿನ ಕಳಸವನ್ನು ಬಳಸುವುದು ಮಂಗಳಕರವೆಂದು ಹೇಳಲಾಗಿದೆ. 1 ರೂಪಾಯಿಯ ನಾಣ್ಯವನ್ನು ಮಣ್ಣಿನ ಪಾತ್ರೆಯಲ್ಲಿ ಹಾಕಿ ಪೂಜಾ ಮನೆಯಲ್ಲಿ ಇಡಿ ಎಂದು ಹೇಳಲಾಗುತ್ತದೆ. ಇದರಿಂದ ಐಶ್ವರ್ಯ ಹೆಚ್ಚುತ್ತದೆ.

ಡ್ರಾಯಿಂಗ್ ರೂಮಿನಲ್ಲಿ ಮಣ್ಣಿನ ಆಟಿಕೆಗಳು ಅಥವಾ ಮಣ್ಣಿನ ವಸ್ತುಗಳನ್ನು ಇಡುವುದರಿಂದ ಧನಾಗಮನ ಹೆಚ್ಚಾಗುತ್ತದೆ. ಇದು ಧನಾತ್ಮಕ ಶಕ್ತಿಯನ್ನು ಸಹ ಸೃಷ್ಟಿಸುತ್ತದೆ.

ನೀರನ್ನು ತಂಪು ಮಾಡಲು ಮಣ್ಣಿನ ಮಡಕೆಯನ್ನು ಬಳಸಬೇಕೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದರಲ್ಲಿ ನೀರು ತುಂಬಿಸಿ ಉತ್ತರ ದಿಕ್ಕಿಗೆ ಇಡುವುದು ಶುಭಕರ. ನೀರು ಲಕ್ಷ್ಮಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪಗೆ ಪಾತ್ರರಾಗುವಿರಿ.

ಸಂಜೆ ತುಳಸಿ ಗಿಡದ ಬಳಿ ದೀಪವನ್ನು ಹಚ್ಚುವುದು ಶುಭವೆಂದು ನಂಬಲಾಗಿದೆ. ಮಣ್ಣಿನ ಹಣತೆಯನ್ನು ಪಂಚತತ್ವದ ಸಂಕೇತವೆಂದು ಪರಿಗಣಿಸಲಾಗಿದೆ. ಹಣತೆಯಲ್ಲಿ ದೀಪ ಹಚ್ಚುವುದರಿಂದ ದಾಂಪತ್ಯ ಜೀವನದಲ್ಲಿ ಸಂತೋಷ ಉಕ್ಕುತ್ತದೆ.

ಇದನ್ನೂ ಓದಿ: Baby Girl: ನಿಮ್ಮ ಮನೆಯಲ್ಲಿ ಮಗು ಜನಿಸಿದರೆ ಕೇಂದ್ರ ಸರ್ಕಾರದಿಂದ ಸಿಗಲಿದೆ 6000 ರೂಪಾಯಿ!

Leave A Reply

Your email address will not be published.