Home Breaking Entertainment News Kannada Sakshi agarwal: ‘ಬರೀ ಒಳಉಡುಪಲ್ಲಿ ಫೋಟೋಶೂಟ್​ ಮಾಡಿಸೋ ಧೈರ್ಯ ಸೌತ್ ನಟಿಯರಿಗಿಲ್ಲ ಬಿಡಿ’ ಎಂದ ನೆಟ್ಟಿಗ!!...

Sakshi agarwal: ‘ಬರೀ ಒಳಉಡುಪಲ್ಲಿ ಫೋಟೋಶೂಟ್​ ಮಾಡಿಸೋ ಧೈರ್ಯ ಸೌತ್ ನಟಿಯರಿಗಿಲ್ಲ ಬಿಡಿ’ ಎಂದ ನೆಟ್ಟಿಗ!! ಮುಟ್ಟಿ ನೋಡ್ಕೊಳುವಂತೆ ರಿಪ್ಲೇ ಕೊಟ್ಟ ನಟಿ ಸಾಕ್ಷಿ!!

Sakshi agarwal

Hindu neighbor gifts plot of land

Hindu neighbour gifts land to Muslim journalist

Sakshi agarwal: ಇತ್ತೀಚಿಗೆ ಸೋಷಿಯಲ್ ಮೀಡಿಯಾಗಳಲ್ಲಿ(Social media) ಕೆಲ ನೆಟ್ಟಿಗರು ಸಿನಿಮಾ ನಟ-ನಟಿಯರನ್ನು ಟ್ರೋಲ್ ಮಾಡಿ, ಕಮೆಂಟ್ ಮಾಡಿ ಅವರ ಕಾಲೆಳೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರೋದನ್ನು ನಾವು ನೋಡುತ್ತಿದ್ದೇವೆ. ಅದರಲ್ಲೂ ಕೂಡ ನಟಿಯರೇ ಹೆಚ್ಚು ಟ್ರೋಲಾಗುವುದು. ಈ ವೇಳೆ ಕೆಲವು ನಟಿಯರು ಇಂತಹ ಕಮೆಂಟ್ ಹಾಗೂ ಟ್ರೋಲ್(Troll) ಗಳನ್ನು ಇಗ್ನೋರ್ ಮಾಡಿದರೆ, ಇನ್ನು ಕೆಲ ನಟಿಯರು ತಕ್ಕ ಉತ್ತರ ನೀಡಬೇಕೆಂದು ಖಾರವಾಗಿಯೇ ಉತ್ತರಿಸುತ್ತಾರೆ. ಇದೀಗ ಅಂತದೇ ಕಮೆಂಟಿನ ಪ್ರಸಂಗವೊಂದು ನಡೆದಿದ್ದು, ಮನಬಂದಂತೆ ಕಮೆಂಟಿಸಿದ ನೆಟ್ಟಿಗನೊಬ್ಬನಿಗೆ ಸಾಕ್ಷಿ ಅಗರ್ವಾಲ್(Sakshi agarwal) ಅವರು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಮೂಲತಃ ಕನ್ನಡದ ನಟಿ(Kannada acter) ಆಗಿರೋ ಸಾಕ್ಷಿ ಅಗರ್‌ವಾಲ್‌ ಅವರು ತೆಲುಗು ಮತ್ತು ತಮಿಳಿನಲ್ಲಿ(Telugu and tamil) ತುಂಬಾ ಹೆಸರು ಮಾಡಿದ್ದಾರೆ. ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಕನ್ನಡದಲ್ಲೂ ನಟಿಸಿದ್ದ ಸಾಕ್ಷಿ ನಂತರ ತಮಿಳಿನ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು. ತಮಿಳಿನ ವೀರ ಶಿವಾಜಿ, ಜೆಯಿಕ್ಕಿರ ಕುತಿರಾ, ರಜನಿಕಾಂತ್​​ ಅಭಿನಯದ ಕಾಲ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡರು. ಇದೀಗ ಮತ್ತಲವು ಸಿನಿಮಾಗಳಲ್ಲಿ ನಟಿಸುತ್ತಿರೋ ಸಾಕ್ಷಿ, ಸಿನಿಮಾ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿ, ಹಾಟ್​ ಫೋಟೋಗಳನ್ನು ಹರಿಬಿಡುವ ಮೂಲಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿರುತ್ತಾರೆ. ಸಾಕ್ಷಿ ಅವರು ಇನ್​ಸ್ಟಾಗ್ರಾಂನಲ್ಲಿ(Instagram) ಬರೋಬ್ಬರಿ 2 ಮಿಲಿಯನ್​ ಫಾಲೋವರ್​ಗಳನ್ನು ಹೊಂದಿದ್ದಾರೆ. ಅವರು ಯಾವುದೇ ಫೋಟೋ ಮತ್ತು ವಿಡಿಯೋ ಹಂಚಿಕೊಳ್ಳಲಿ ಅದು ಬೇಗನೆ ವೈರಲ್​ ಆಗಿಬಿಡುತ್ತವೆ

ಅಂದಹಾಗೆ ಮಾಮೂಲಿಯಂತೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗನೊಬ್ಬ ‘ಒಳಉಡುಪಿನಲ್ಲಿ ಫೋಟೋಶೂಟ್​ ಮಾಡಿಸುವ ಧೈರ್ಯ ದಕ್ಷಿಣ ಭಾರತದ ನಟಿಯರಿಗಿಲ್ಲ(South indian heroins)ಎಂದು ಕಾಮೆಂಟ್​ ಮಾಡುವ ಮೂಲಕ ಸಾಕ್ಷಿ ಅವರನ್ನು ಕೆಣಕಿದ್ದಾನೆ. ಸಾಕ್ಷಿಯವರು ಕೂಡ ನೆಟ್ಟಿಗನ ಉತ್ತರಕ್ಕೆ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

ಹೌದು, ನೆಟ್ಟಿಗನ ಉತ್ತರಕ್ಕೆ ಸರಿಯಾಗಿಯೇ ತಿರುಗೇಟು ನೀಡಿರುವ ಸಾಕ್ಷಿ, ದಕ್ಷಿಣ ಭಾರತದ ನಟಿಯರಿಗೆ ಅವರ ನಟನೆಯಲ್ಲಿನ ಪ್ರತಿಭೆಯ ಮೇಲೆ ನಂಬಿಕೆ ಇದೆಯೇ ಹೊರತು ಮೈಮಾಟ ಪ್ರದರ್ಶನದ ಮೇಲಲ್ಲ ಎಂದಿದ್ದಾರೆ. ಸಾಕ್ಷಿ ನೀಡಿರುವ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಹಲವರು ಸಾಕ್ಷಿಯವರ ಕಮೆಂಟ್ ಗೆ ಮೆಚ್ಚುಗೆ ಸೂಚಿಸಿದ್ದಾರೆ. ಸಾಕ್ಷಿ ಅವರ ಕಾಲೆಳೆಯುವ ಪ್ರಯತ್ನ ಮಾಡಬೇಡಿ, ಅವರು ಸರಿಯಾದ ಉತ್ತರದೊಂದಿಗೆ ಕಮೆಂಟ್ ಮಾಡಿದವನ ಬಾಯಿ ಮುಚ್ಚಿಸಿದ್ದಾರೆ ಎಂದು ಜಾಲತಾಣದಲ್ಲಿ ಪೋಸ್ಟ್​ಗಳನ್ನು ಹರಿಬಿಟ್ಟಿದ್ದಾರೆ.

Sakshi agarwal

ಇನ್ನು ನಟಿ ಹಾಗೂ ಮಾಡೆಲ್​ ಆಗಿರುವ ಸಾಕ್ಷಿ ಅಗರವಾಲ್​ ಕನ್ನಡಿಗರಿಗೆ ಇವರ ಪರಿಚಯ ಇಲ್ಲದಿರಬಹುದು. ಏಕೆಂದರೆ, ಇದುವರೆಗೂ ಇವರು ಕನ್ನಡದಲ್ಲಿ ನಟಿಸಿರುವುದು ಒಂದೇ ಒಂದು ಚಿತ್ರದಲ್ಲಿ ಮಾತ್ರ. ಹಿರಿಯ ನಟ ಜಗ್ಗೇಶ್​ ಅಭಿನಯದ ‘ಸಾಫ್ಟ್​ವೇರ್ ಗಂಡ’ ಸಿನಿಮಾದಲ್ಲಿ ಎರಡನೇ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಂತರೆ ಅವರು ತೆಲುಗು-ತಮಿಳು ಸಿನಿಮಾಗಳೆಡೆಗೆ ಒಲವು ತೋರಿದರು. ಅಲ್ಲದೆ ಸದ್ಯ ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಸಾಕ್ಷಿ ಮುಖ ಪರಿಚಯ ಇದ್ದೇ ಇರುತ್ತದೆ. ಏಕೆಂದರೆ, ಆಗಾಗ ಇವರು ಸಿಕ್ಕಾಪಟ್ಟೆ ಹಾಟ್​ ಫೋಟೋಗಳನ್ನು ಹರಿಬಿಡುತ್ತಿರುತ್ತಾರೆ.

ಇದನ್ನೂ ಓದಿ: Ileana Dcruz : ಕೊನೆಗೂ ಬಾಯ್ ಫ್ರೆಂಡ್ ಫೋಟೋ ಶೇರ್ ಮಾಡಿ, ಮಗುವಿನ ತಂದೆ ಯಾರೆಂದು ತಿಳಿಸಿದ ನಟಿ ಇಲಿಯಾನ!!