Free Bus Ticket: ಖಾಸಗಿ ಬಸ್ಸುಗಳಲ್ಲಿ ಕೂಡಾ ಮಹಿಳೆಯರಿಗೆ ಉಚಿತ ಬಸ್ ಸರ್ವೀಸ್ ? – ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದು ಹೀಗೆ !
Karnataka latest news Congress guarantee Shakti scheme Minister Ramalinga Reddy reaction about free bus ticket for women in private bus
Free bus ticket: ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ (Free bus Ticket) ಪ್ರಯಾಣವನ್ನು ಜಾರಿ ಮಾಡಿದ್ದೂ ಆಯಿತು. ಇಂದಿನಿಂದ (ಜೂ.11) ರಾಜ್ಯಾದ್ಯಂತ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ (Government Bus) ಉಚಿತ ಪ್ರಯಾಣ ಸೌಲಭ್ಯ ಆರಂಭಗೊಳ್ಳಲಿದೆ. ಆದರೆ, ಖಾಸಗಿ ಬಸ್ಸುಗಳಲ್ಲಿ ಕೂಡಾ ಮಹಿಳೆಯರಿಗೆ ಉಚಿತ ಬಸ್ ಸರ್ವೀಸ್ ಸಿಗುತ್ತಾ? ಎಂಬ ಪ್ರಶ್ನೆ , ಗೊಂದಲಗಳು ಜನತೆಗೆ ಮೂಡಿದ್ದು, ಇದೀಗ ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ರೆಡ್ಡಿಯವರು “ಖಾಸಗಿ ಬಸ್‍ಗಳಿಗೆ ಉಚಿತ ಪ್ರಯಾಣ ಸೇವೆ ಇಲ್ಲ” ಎಂದು ಹೇಳಿದರು. ಅಲ್ಲದೇ, ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದಿಂದ ಮೆಜೆಸ್ಟಿಕ್‍ಗೆ ಬರುತ್ತಾರೆ. ಉಚಿತ ಬಸ್ ಪ್ರಯಾಣಕ್ಕೆ ರಾಜ್ಯದ ಎಲ್ಲಾ ಭಾಗಗಳಲ್ಲಿ ಆಯಾ ಶಾಸಕರು, ಸಂಸದರ ಸಮ್ಮುಖದಲ್ಲಿ ಏಕಾಕಲದಲ್ಲಿ ಚಾಲನೆ ನೀಡಲಿದ್ದಾರೆ. ಸ್ಮಾರ್ಟ್ ಕಾರ್ಡ್ (Smart Card) ಕೂಡ ಬೇಗನೆ ಸಿಗಲಿದೆ ಎಂದು ಸಚಿವರು ತಿಳಿಸಿದರು.
ಇಂದು ಶಕ್ತಿ ಯೋಜನೆಗೆ ಸಿಎಂ ಸಿದ್ಧರಾಮಯ್ಯ ಚಾಲನೆಗೊಳಿಸಲಿದ್ದಾರೆ. ವಿಧಾನಸೌಧದ ಮುಂಭಾಗ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಕ್ತಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಯ ನಂತರ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಈ ಸೌಲಭ್ಯ ಸಿಗಲಿದೆ. ರಾಜ್ಯದ ಉದ್ದಗಲಕ್ಕೆ ಕರ್ನಾಟಕ ಸಾರಿಗೆಯ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಆದರೆ, ಉಚಿತ ಪ್ರಯಾಣದ ಖುಷಿಯಲ್ಲಿದ್ದ ಮಹಿಳೆಯರಿಗೆ ಶಾಕ್ ನೀಡಿದಂತಾಗಿದೆ. ಕೇವಲ ಸರ್ಕಾರಿ ಬಸ್ ಗಳಲ್ಲಿ ಮಾತ್ರ ಉಚಿತ ಪ್ರಯಾಣ ಖಾಸಗಿ ಬಸ್ ಗಳಲ್ಲಿ ಇಲ್ಲ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ. ಚುನಾವಣೆ ಹೊತ್ತಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗುವುದು ಎಂದು ಘೋಷಿಸಲಾಗಿತ್ತು. ಗೆದ್ದ ನಂತರ ಹಲವು ಷರತ್ತು, ಕೆಲವೊಂದು ನಿಯಮಗಳ ಮೇಲೆ ಉಚಿತ ಬಸ್ ಪ್ರಯಾಣ ಸಿಗುತ್ತಿದೆ.