Hajj Pilgrimage: ಕಾಲ್ನಡಿಗೆಯಲ್ಲೇ ಮೆಕ್ಕಾ ತಲುಪಿದ ವ್ಯಕ್ತಿ: ಒಟ್ಟು 370 ದಿನ, 8640 ಕಿ.ಮೀ. ಸುದೀರ್ಘ ನಡಿಗೆಯಲ್ಲಿ ಹಜ್ ಯಾತ್ರೆ ಮುಗಿಸಿದ ಕೇರಳದ ಯುವಕ

Mecca Hajj Pilgrimage devotee has successfully reached Mecca on foot

Hajj Pilgrimage: ಭಕ್ತರೊಬ್ಬರು ಕಾಲ್ನಡಿಗೆಯಲ್ಲಿಯೇ ಯಶಸ್ವಿಯಾಗಿ ಮೆಕ್ಕಾ (Mecca) ತಲುಪಿದ ಸಾಧನೆ ಮಾಡಿದ್ದಾರೆ. ಮಕ್ಕಾದಲ್ಲಿ ವಾರ್ಷಿಕ ಹಜ್ ಯಾತ್ರೆಯನ್ನು ನಿರ್ವಹಿಸಲು ಹೆಚ್ಚಿನ ಮುಸ್ಲಿಮರು ಪ್ರಪಂಚದಾದ್ಯಂತ ವಿಮಾನಯಾನದ ಮೂಲಕ ಅಥವಾ ಅಥವಾ ನೌಕಾಯಾನ ಇಲ್ಲವೇ ವಾಹನ ಚಾಲನೆ ಮಾಡುತ್ತಾ ಹಜ್ ಯಾತ್ರೆ ಮುಗಿಸಿದರೆ, ಕೇರಳದ 29 ವರ್ಷದ ಈ ವ್ಯಕ್ತಿಯೊಬ್ಬರು ಕಾಲ್ನಡಿಗೆಯಲ್ಲಿ ಯಾತ್ರೆ ಹೊರಟಿದ್ದಾರೆ. ಸಾವಿರಾರು ಕಿಲೋ ಮೀಟರುಗಳ ಈ ಯಾತ್ರೆಯನ್ನು 2022 ರ ಜೂನ್ 2 ರಂದು ಕಾಲ್ನಡಿಗೆ ಮೂಲಕ ಕೈಗೊಂಡಿದ್ದ ಅವರು ಮದೀನಾ ಮೂಲಕ ಈಗ ಮೆಕ್ಕಾ ತಲುಪಿದ್ದಾರೆ.
ಅಷ್ಟರೊಳಗೆ ಅವರು ಬರೋಬ್ಬರಿ 8,640 ಕಿಲೋ ಮೀಟರ್ ಗಳನ್ನು ಕ್ರಮಿಸಿ ಮೆಕ್ಕಾ ತಲುಪಿದ್ದಾರೆ.

ಕೇರಳದ (Kerala) ಮಲಪ್ಪುರಂ ಜಿಲ್ಲೆಯ ವಲಂಚೇರಿ ಮೂಲದ ಶಿಹಾಬ್ ಚೋಟ್ಟೂರ್ (Shihab Chottur)
ಶಿಹಾಬ್ ಕೇರಳದಿಂದ ಕಾಲ್ನಡಿಗೆ ಮೂಲಕ ಕೆಲಸ ಆರಂಭಿಸಿದ್ದಾರೆ. ಅಲ್ಲಿಂದ ಶುರುವಾದ ಅವರ ಸುದೀರ್ಘ ಪಾದಯಾತ್ರೆ ಪಾಕಿಸ್ತಾನ, ಇರಾನ್, ಇರಾಕ್ ಮೂಲಕ ಸಾಗಿ, ಕುವೈತ್ ಅನ್ನು ಕ್ರಮಿಸಿ, ಮೇ ಎರಡನೇ ವಾರದಲ್ಲಿ ಕುವೈತ್‌ನಿಂದ ಸೌದಿ ಅರೇಬಿಯಾದ ಗಡಿಯನ್ನು ಅವರು ದಾಟಿದ್ದಾರೆ.

ಅಲ್ಲಿ ಸೌದಿ ಅರೇಬಿಯಾವನ್ನು ಪ್ರವೇಶಿಸಿದ ನಂತರ ಶಿಹಾಬ್ ಪ್ರಮುಖ ಇಸ್ಲಾಮಿಕ್ ಯಾತ್ರಾ ಸ್ಥಳವಾದ ಮದೀನಾಕ್ಕೆ ತಲುಪಿ ಅವರು 21 ದಿನಗಳ ಕಾಲ ತಂಗಿದ್ದಾರೆ. ಆ ಬಳಿಕ ಅವರು ಮೆಕ್ಕಾ ಸೇರಿಕೊಂಡಿದ್ದಾರೆ. ಶಿಹಾಬ್ ಈ ಪ್ರಯಾಣ ಪೂರ್ಣಗೊಳಿಸಲು ಒಟ್ಟು 370 ದಿನಗಳನ್ನು ತೆಗೆದುಕೊಂಡಿದ್ದಾರೆ. 8,640 ಕಿ.ಮೀ ಗಳನ್ನು ಅವರು ಕಾಲ್ನಡಿಗೆಯಲ್ಲಿಯೆ ಕ್ರಮಿಸಿದ್ದಾರೆ.

ಶಿಹಾಬ್ ರವರು ವಾಘಾ ಗಡಿಯನ್ನು ತಲುಪುವ ಮೊದಲು ಭಾರತದ ಹಲವಾರು ರಾಜ್ಯಗಳ ಮೂಲಕ ನಡೆದು ಪಾಕಿಸ್ತಾನವನ್ನು ಪ್ರವೇಶಿಸಲು ಬಯಸಿದ್ದರು. ಆದರೆ ಪಾಕಿಸ್ತಾನ ಗಡಿಯಲ್ಲಿ ಕಿರಿಕ್ ಆಗಿತ್ತು. ಅಲ್ಲದೆ, ಶಿಹಾಬ್ ವೀಸಾ ಹೊಂದಿಲ್ಲದ ಕಾರಣ ಪಾಕಿಸ್ತಾನದ ವಲಸೆ ಅಧಿಕಾರಿಗಳು ಅವರನ್ನು ಪಾಕ್ ಪ್ರವೇಶಿಸಲು ಬಿಟ್ಟಿರಲಿಲ್ಲ. ಆದ್ದರಿಂದ ಅವರ ಪ್ರಯಾಣ ಆಲ್ಲಿ ಹಾಲ್ಟ್ ಆಗಿತ್ತು. ಆದರೆ ಛಲ ಬಿಡದೆ ಅಲ್ಲಿ ನಿಂತು ಬಿಟ್ಟಿದ್ದರು. ಅವರಲ್ಲಿ ಶಾಲೆಯೊಂದರಲ್ಲಿ ತಿಂಗಳುಗಟ್ಟಲೆ ಕಾದ ಬಳಿಕ ಅಂತಿಮವಾಗಿ ಟ್ರಾನ್ಸಿಟ್ ವೀಸಾ ಪಡೆಯುವಲ್ಲಿ ಸಫಲರಾದರು. ನಂತರ ಪಾಕಿಸ್ತಾನ ತಲುಪಿ ಅವರು 4 ತಿಂಗಳ ಕಾಲ ಕಾಲ್ನಡಿಗೆ ಜಾಥಾ ನಡೆಸಿದ್ದಾರೆ. ನಂತರ ಶಿಹಾಬ್ ಚೋಟ್ಟೂರ್ ತಮ್ಮ ಗಮ್ಯಸ್ಥಾನವನ್ನು ತಲುಪಿ ಮದೀನಾ ನಂತರ ಮೆಕ್ಕಾ ತಲುಪಿ ಹಜ್ ಯಾತ್ರೆ (Hajj Pilgrimage) ಮುಗಿಸಿ ಧನ್ಯ ಭಾವ ಹೊಂದಿದ್ದಾರೆ. ಕಾಲ್ನಡಿಗೆಯಲ್ಲಿ ಹೊರಟ ಅವರಿಗೆ ಪ್ರತಿ ಊರು, ಪ್ರತಿ ದೇಶದಲ್ಲಿ ಭವ್ಯ ಸ್ವಾಗತ ದೊರೆತಿದೆ. ಹಜ್ ತಲುಪಿದ ಶಿಹಾಬ ರನ್ನು ಅಲ್ಲಿನ ದೊರೆ ಸನ್ಮಾನಿಸಿ ಕಳಿಸಿದ್ದಾರೆ.

 

ಇದನ್ನು ಓದಿ: Ramalinga Reddy: ಮಹಿಳೆಯರ ಫ್ರೀ ಬಸ್ ಪ್ರಯಾಣಕ್ಕೆ ಮತ್ತೆ ಹೊಸ ರೂಲ್ಸ್: ಸಚಿವ ರಾಮಲಿಂಗಾ ರೆಡ್ಡಿ ಹೇಳಿದ ಹೊಸ ಷರತ್ತು ಬಗ್ಗೆ ತಿಳ್ಕೊಳ್ಳಿ!

Leave A Reply

Your email address will not be published.