UGC Permits: ಅವಧಿ ಮೊದಲೇ ಪದವಿ ಪಡೆಯಲು ವಿಶ್ವವಿದ್ಯಾಲಯದಿಂದ ಅವಕಾಶ, ಬೇಗ ಓದಿದ್ರೆ ಬೇಗ ಕೆಲಸಕ್ಕೆ ಸೇರ್ಬೋದು !
UGC permits: ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ ಅಥವಾ ಪದವಿ ವಿದ್ಯಾರ್ಥಿಯು ಅಗತ್ಯವಿರುಷ್ಟು ‘ಕ್ರೆಡಿಟ್’ (ಅಂಕ)ಗಳನ್ನು ಪಡೆದಿದ್ದರೆ, ಕೋರ್ಸ್‌ನ ಕನಿಷ್ಠ ಅವಧಿಯನ್ನೂ ಲೆಕ್ಕಿಸದೆ, ಸಂಬಂಧಿಸಿದ ಪದವಿ ನೀಡಲು ಪರಿಗಣಿಸಬಹುದು ಎಂದು ವಿಶ್ವವಿದ್ಯಾಲಯ (UGC permits) ಅನುದಾನ ಆಯೋಗದ (UGC ) ಸಮಿತಿಯೊಂದು ಶಿಫಾರಸು ಮಾಡಿದೆ.
ಸದ್ಯ ಎನ್‌ಐಪಿ 2020ಕ್ಕೆ ಪೂರಕವಾಗಿ ಉನ್ನತ ಶಿಕ್ಷಣದಲ್ಲಿ ಮಲ್ಟಿಪಲ್ ಎಂಟ್ರಿ ಮತ್ತು ಎಕ್ಸಿಟ್‌ಗೆ ಅವಕಾಶ ಕಲ್ಪಿಸಲು ಯುಜಿಸಿಯ ಸಮಿತಿ ಶಿಫಾರಸು ಮಾಡಿದ್ದು, ಜಾಗತಿಕ ಸ್ಥಳಗಳಿಗೆ ಸಂಬಂಧಿಸಿದ ಪದವಿಗಳನ್ನು ನವೀಕರಿಸುವ ಸಲಹೆಯನ್ನು ನೀಡುತ್ತದೆ.
ಇನ್ನು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪದವಿ ನಿಯಮಾವಳಿಗಳನ್ನು ನವೀಕರಿಸುವಂತೆಯೂ ಸಮಿತಿ ಶಿಫಾರಸು ಮಾಡಿದೆ. ಈ ಶಿಫಾರಸುಗಳಿಗೆ ಅನುಮೋದನೆ ದೊರೆತ ಬಳಿಕ ಆಯೋಗ ಪದವಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು ಪ್ರಕಟಿಸಲಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ :ಬಿಪರ್ ಜಾಯ್ ಚಂಡಮಾರುತ ಆಕ್ಟೀವ್ ಮೀನುಗಾರರಿಗೆ ಸಂಕಷ್ಟ, ಗುಡುಗು ಸಹಿತ ಬಿರುಗಾಳಿ ಮಳೆ ಶೀಘ್ರ !