Matchbox in Pooja Room: ದೇವರ ಮನೆಯಲ್ಲಿ ಯಾವತ್ತೂ ಬೆಂಕಿ ಕಡ್ಡಿ ಇಡದಿರಿ ; ಒಂದು ವೇಳೆ ಇಟ್ರೆ ಏನಾಗತ್ತೆ ಗೊತ್ತೇ ?

Matchbox in Pooja Room: ಮನೆ ನಿರ್ಮಾಣದ ವೇಳೆ ವಾಸ್ತು ಬಗ್ಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ವಾಸ್ತು ಪ್ರಕಾರ ನಿರ್ಮಾಣ ಮಾಡಿದ ಮನೆಯಲ್ಲಿ ಸಂಪತ್ತು, ಆರೋಗ್ಯ, ಆಯಸ್ಸಿನ ವೃದ್ಧಿಯಾಗುತ್ತದೆ. ಹಾಗೆಯೇ ಮನೆಯಲ್ಲಿಡುವ ವಸ್ತುಗಳ ಬಗ್ಗೆಯೂ ಹೆಚ್ಚಿನ ಗಮನಹರಿಸಬೇಕು. ಮನೆಯಲ್ಲಿನ ವಸ್ತುಗಳು ಸರಿಯಾದ ಜಾಗದಲ್ಲಿ ಇರದಿದ್ದರೆ ಸಮಸ್ಯೆಗಳು ಎದುರಾಗಬಹುದು. ಅಂತೆಯೇ ಶಾಸ್ತ್ರಗಳ ಪ್ರಕಾರ, ದೇವರ ಕೋಣೆಯಲ್ಲಿ ಬೆಂಕಿ ಪೊಟ್ಟಣ ಅಥವಾ ಬೆಂಕಿ ಕಡ್ಡಿಯನ್ನು (Matchbox in Pooja Room) ಇಡುವುದಕ್ಕೂ ನಿಯಮವಿದೆ!.

 

ಪೂಜಾ ಕೊಠಡಿ ಅತ್ಯಂತ ಪವಿತ್ರ ಸ್ಥಳವಾಗಿದೆ. ಇದು ನೀವು ಧ್ಯಾನಸ್ಥ ಸ್ಥಿತಿಗೆ ಬರಲು ಸಕಾರಾತ್ಮಕ ಭಾವನೆಯನ್ನು ಹೊರಹೊಮ್ಮಿಸುವ ಸ್ಥಳ. ವಾಸ್ತು ಶಾಸ್ತ್ರದ ಪ್ರಕಾರ, ಪೂಜಾ ಕೊಠಡಿಯು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಆದರೆ, ದೈವಿಕ ಸ್ವರೂಪಿ ಪೂಜೆಯ ಕೊಠಡಿಯ ಬಗ್ಗೆ ಅಲ್ಲಿ ಏನೆಲ್ಲಾ ಇಡಬೇಕು ಎಂಬುದು ನೀವು ತಿಳಿದಿರಬೇಕು.

 

ಹೌದು, ದೇವರ ಕೋಣೆಯಲ್ಲಿ ದೇವಾದಿದೇವತೆಗಳು ನೆಲೆಸಿರುತ್ತಾರೆ. ಅಲ್ಲಿ ಪರಿಶುದ್ಧತೆ ಇರುತ್ತದೆ. ಹಾಗಾಗಿ ದೇವರ ಕೋಣೆಯಲ್ಲಿ ದಹನಕಾರಿ ವಸ್ತುಗಳನ್ನು ಇಡಬಾರದು ಎಂದು ಶಾಸ್ತ್ರ ಹೇಳುತ್ತದೆ. ಬೆಂಕಿಕಡ್ಡಿ ಇಟ್ಟರೆ ಹಾಗೂ ದೀಪ ಬೆಳಗಿಸಿದ ನಂತರ ಸುಟ್ಟ ಬೆಂಕಿಕಡ್ಡಿಯನ್ನು ಅಲ್ಲೇ ಬಿಸಾಕುವುದರಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿಗಳ ಪ್ರವೇಶವಾಗುತ್ತದೆ. ಪೂಜೆಯ ಫಲವೂ ಸಿಗಲಾರದು.

 

ಬೆಂಕಿಕಡ್ಡಿಯನ್ನು ಯಾವಾಗಲೂ ಮುಚ್ಚಿದ ಬೀರು ಅಥವಾ ಮುಚ್ಚಿದ ಸ್ಥಳದಲ್ಲಿ ಇಟ್ಟರೆ ಒಳ್ಳೆಯದು. ಇದರಿಂದ ಕೆಟ್ಟ ಶಕ್ತಿ ಮನೆ ಪ್ರವೇಶಿಸುವುದಿಲ್ಲ. ಮನೆಗೆ ಒಳಿತಾಗುತ್ತದೆ. ಆರ್ಥಿಕ ಸಮಸ್ಯೆ ದೂರಾಗಲಿದೆ. ಆದರೆ, ದೀಪ ಹಚ್ಚಿದ ನಂತರ ಬೆಂಕಿಕಡ್ಡಿಗಳನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಎಸೆಯಬೇಡಿ. ಎಸೆದರೆ ಕಷ್ಟ ಕಟ್ಟಿಟ್ಟ ಬುತ್ತಿ!!.

ಇದನ್ನೂ ಓದಿ : ಅಪ್ಪನಿಗೆ ಮೀನು ಮಾರಲು ಬ್ರ್ಯಾಂಡ್ ನ್ಯೂ ಐಷಾರಾಮಿ ಕಾರು ಕೊಡಿಸಿದ ಮಗಆ ಕಾರಿನ ಬೆಲೆ ಎಷ್ಟು ಗೊತ್ತಾ ?!

Leave A Reply

Your email address will not be published.